Advertisement

ಭಾರತದಲ್ಲಿ OTT ವೆಬ್‌ ಸೀರೀಸ್‌ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು?

06:29 PM Jul 21, 2023 | Team Udayavani |

ಮುಂಬೈ: OTT ಪ್ಲ್ಯಾಟ್‌ ಫಾರಂಗಳು ಅಸ್ತಿತ್ವಕ್ಕೆ ಬಂದ ನಂತರ ಥಿಯೇಟರ್‌ ಗಳಲ್ಲಿ ಜನಸಂದಣಿ ಇಳಿಕೆಯಾಗತೊಡಗಿದೆ. ಏತನ್ಮಧ್ಯೆ ಅನೇಕ ಬಾಲಿವುಡ್‌ ನಟರು ನೆಟ್‌ ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೊ, ಝೀ5 ಹಾಗೂ ಇತರ ಒಟಿಟಿ ಪ್ಲ್ಯಾಟ್‌ ಫಾರಂಗಳಲ್ಲಿ ಸಿನಿಮಾ ಮತ್ತು ವೆಬ್‌ ಸರಣಿಗಳನ್ನು ವೀಕ್ಷಿಸುವ ಪ್ರೇಕ್ಷಕರನ್ನು ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ:ಕುಟುಂಬ ಸದಸ್ಯರೊಂದಿಗೆ ಶಬರಿಮಲೆಗೆ ಭೇಟಿ ನೀಡಿದ ನಟಿ ಸಿತಾರಾ

ಒಟಿಟಿಯಲ್ಲಿ ತೊಡಗಿಸಿಕೊಳ್ಳುವ ಘಟಾನುಘಟಿ ನಟ, ನಟಿಯರು ಸಿನಿಮಾದಲ್ಲಿ ಪಡೆದಷ್ಟೇ ಸಂಭಾವನೆ ಪಡೆಯುತ್ತಾರೆ ಎಂದರೆ ಹಲವರು ಆಶ್ಚರ್ಯ ಪಡುತ್ತಾರೆ. ಈ ಹಿನ್ನೆಲೆಯಲ್ಲಿ ಬಾಲಿವುಡ್‌ ನ ಸಲ್ಮಾನ್‌ ಖಾನ್‌ ನಿಂದ ಹಿಡಿದು ಶಾಹಿದ್‌ ಕಪೂರ್‌ ವರೆಗೆ ಒಟಿಟಿಯಲ್ಲಿ ನಟಿಸುವ ನಟರು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಕಿರು ಚಿತ್ರಣ ಇಲ್ಲಿದೆ…

ಸೈಫ್‌ ಅಲಿ ಖಾನ್:‌

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ನಟನೆಯ ರಂಗೂನ್‌, ಕಾಲಾಕಂಡಿ, ಚೆಫ್‌, ಬಾಝಾರ್‌ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಫ್ಲಾಪ್‌ ಆದ ನಂತರ ಸೈಫ್‌ ಒಟಿಟಿಯತ್ತ ಚಿತ್ತ ಹರಿಸಿದ್ದು, ಸೇಕ್ರೆಡ್‌ ಗೇಮ್ಸ್‌ ಸೀರೀಸ್‌ ನಲ್ಲಿ ನಟಿಸಿದ್ದು, 8 ಸೀರೀಸ್‌ ಗೆ ಸೈಫ್‌ ಪಡೆದ ಸಂಭಾವನೆ 15 ಕೋಟಿ ರೂಪಾಯಿ.

Advertisement

ಸಲ್ಮಾನ್‌ ಖಾನ್:‌

ಸಲ್ಮಾನ್‌ ಖಾನ್‌ ನಡೆಸಿಕೊಡುವ ರಿಯಾಲಿಟಿ ಶೋ ಬಿಗ್‌ ಬಾಸ್‌ ಒಟಿಟಿ ಪ್ಲ್ಯಾಟ್‌ ಫಾರಂನಲ್ಲಿ ಬಿಡುಗಡೆಯಾಗಿದ್ದು, ಮಾಧ್ಯಮದ ವರದಿ ಪ್ರಕಾರ, ಸಲ್ಮಾನ್‌ ಖಾನ್‌ ಬಿಗ್‌ ಬಾಸ್‌ ಒಂದು ಎಪಿಸೋಡ್‌ ಶೂಟಿಂಗ್‌ ಗೆ ಪಡೆದ ಸಂಭಾವನೆ 12.5 ಕೋಟಿ ರೂಪಾಯಿ.

ಅಜಯ್‌ ದೇವಗನ್:‌

ಇಂಡಿಯಾ ಟುಡೇ ಮತ್ತು ಡಿಎನ್‌ ಎ ವರದಿ ಪ್ರಕಾರ, ಬಾಲಿವುಡ್‌ ನ ಅಜಯ್‌ ದೇವಗನ್‌ ಒಟಿಟಿಯಲ್ಲಿ ಭರ್ಜರಿ ಹವಾ ಎಬ್ಬಿಸಿದ್ದು, Rudra: The Edge of Darkness ವೆಬ್‌ ಸೀರಿಸ್‌ ಗಾಗಿ ಪಡೆದ ಸಂಭಾವನೆ ಬರೋಬ್ಬರಿ 125 ಕೋಟಿ ರೂಪಾಯಿ. ಪ್ರತಿ ಎಪಿಸೋಡ್‌ ಗೆ ಅಜಯ್‌ ಪಡೆದ ಸಂಭಾವನೆ 18 ಕೋಟಿ ರೂಪಾಯಿ.

ರಾಧಿಕಾ ಅಪ್ಟೆ:

ಬಾಲಿವುಡ್‌ ನಟಿ ರಾಧಿಕಾ ಅಪ್ಟೆ ಕೇವಲ ಬಿಗ್‌ ಸ್ಕ್ರೀನ್‌ ನಲ್ಲಿ ಮಾತ್ರ ಪ್ರತಿಭಾವಂತ ನಟಿಯಲ್ಲ, ಒಟಿಟಿ ಜಗತ್ತಿನಲ್ಲೂ ಸ್ಟಾರ್‌ ನಟಿಯಾಗಿದ್ದು, ಈಕೆ ಒಟಿಟಿ ಸೀರಿಸ್‌ ಗಾಗಿ ಪಡೆಯುವ ಸಂಭಾವನೆ 4 ಕೋಟಿ ರೂಪಾಯಿ.

ಪಂಕಜ್‌ ತ್ರಿಪಾಠಿ:

ವರದಿಯ ಪ್ರಕಾರ, ಪಂಕಜ್‌ ತ್ರಿಪಾಠಿ ಒಟಿಟಿಯಲ್ಲಿ ಅತೀ ಜನಪ್ರಿಯತೆ ಗಳಿಸಿದ್ದು, ಸೇಕ್ರೆಡ್‌ ಗೇಮ್ಸ್‌ ಸೀಸನ್‌ 2 ಎಪಿಸೋಡ್‌ ನಲ್ಲಿ ತಮ್ಮ ಪಾತ್ರಕ್ಕೆ ಪಡೆದ ಸಂಭಾವನೆ 12 ಕೋಟಿ ರೂಪಾಯಿ. ಜೊತೆಗೆ ಮಿರ್ಜಾಪುರ್‌ ಎರಡನೇ ಸೀಸನ್‌ ನ ಎಪಿಸೋಡ್‌ ಗೆ ನಟ ತ್ರಿಪಾಠಿ 10 ಕೋಟಿ ರೂಪಾಯಿ ಸಂಭಾವನೆ ಗಿಟ್ಟಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next