Advertisement

ರಾಹುಲ್‌-ಧವನ್‌ ಓಪನಿಂಗ್‌: ವನ್‌ಡೌನ್‌ನಲ್ಲಿ ಶುಭಮನ್‌ ಗಿಲ್‌

11:04 PM Aug 15, 2022 | Team Udayavani |

ಹರಾರೆ: ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಈಗಾಗಲೇ ಹರಾರೆಗೆ ಆಗಮಿಸಿರುವ ಭಾರತ ತಂಡ ಮೊದಲ ಸುತ್ತಿನ ಅಭ್ಯಾಸವನ್ನೂ ಯಶಸ್ವಿಯಾಗಿ ಮುಗಿಸಿದೆ. ಗುರುವಾರ ಮೊದಲ ಪಂದ್ಯ ನಡೆಯಲಿದ್ದು, ಟೀಮ್‌ ಕಾಂಬಿನೇಶನ್‌ ಹೇಗಿದ್ದೀತು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

Advertisement

ಕೆ.ಎಲ್‌. ರಾಹುಲ್‌ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಮರಳಿದ್ದರಿಂದ ಅವರು ಶಿಖರ್‌ ಧವನ್‌ ಜತೆ ಇನ್ನಿಂಗ್ಸ್‌ ಆರಂಭಿಸುವುದು ಖಚಿತ. ಆಗ ಮತ್ತೋರ್ವ ಓಪನರ್‌ ಶುಭಮನ್‌ ಗಿಲ್‌ ಅವರನ್ನು 3ನೇ ಸ್ಥಾನದಲ್ಲಿ ಆಡಿಸಬೇಕು ಎಂಬುದಾಗಿ ಮಾಜಿಗಳನೇಕರು ಸಲಹೆ ನೀಡಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ, ಆಯ್ಕೆ ಸಮಿತಿಯ ಮಾಜಿ ಸದಸ್ಯ ದೇವಾಂಗ್‌ ಗಾಂಧಿ ಇಂಥದೊಂದು ಸಲಹೆ ನೀಡಿದ್ದು, ಇದನ್ನು ಮತ್ತೋರ್ವ ಮಾಜಿ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತ ಅನುಮೋದಿಸಿದ್ದಾರೆ.

ವಿಂಡೀಸ್‌ ವಿರುದ್ಧ ಯಶಸ್ಸು
ಕಳೆದ ವೆಸ್ಟ್‌ ಇಂಡೀಸ್‌ ಎದುರಿನ ಸರಣಿ ವೇಳೆ ಆರಂಭಿಕನಾಗಿ ಇಳಿದಿದ್ದ ಶುಭಮನ್‌ ಗಿಲ್‌ ಮೂರೂ ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಕ್ರಮವಾಗಿ 64, 43 ಮತ್ತು ಅಜೇಯ 98 ರನ್‌ ಬಾರಿಸಿ ಭಾರತದ ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಗಿಲ್‌ ಆಡುವ ಬಳಗದ ಖಾಯಂ ಸದಸ್ಯರ ಯಾದಿಯಲ್ಲಿದ್ದಾರೆ. 2023ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಗಿಲ್‌ ಅವರ ಫಾರ್ಮ್ ಭಾರತದ ಪಾಲಿಗೆ ನಿರ್ಣಾಯಕ.

ಮುಂದೊಂದು ದಿನ ರೋಹಿತ್‌ ಶರ್ಮ ಮರಳಿದಾಗ ಅವರು ಶಿಖರ್‌ ಧವನ್‌ ಜತೆ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ರೋಹಿತ್‌-ಧವನ್‌ ಭಾರತ ತಂಡದ ಮೊದಲ ಆಯ್ಕೆಯ ಓಪನರ್. ಆಗ ಕೆ.ಎಲ್‌. ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಇಳಿಯಬೇಕಾಗುತ್ತದೆ. ಗಿಲ್‌ ಮೂರರಲ್ಲೇ ಉಳಿಯುವರು. ಅಕಸ್ಮಾತ್‌ ಮೊದಲ ವಿಕೆಟ್‌ ಬೇಗನೇ ಉರುಳಿದರೆ ಆಗ ಗಿಲ್‌ ಓಪನಿಂಗ್‌ ಬಂದಂತೆಯೇ ಆಗುತ್ತದೆ ಎಂಬುದು ದೇವಾಂಗ್‌ ಗಾಂಧಿ ಅವರ ತರ್ಕ.

Advertisement

ಇಲ್ಲಿ ಶಿಖರ್‌ ಧವನ್‌ ಫಾರ್ಮ್ ಕೂಡ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬುದು ದೀಪ್‌ ದಾಸ್‌ಗುಪ್ತ ಅವರ ಲೆಕ್ಕಾಚಾರ. ಧವನ್‌ ಫಾರ್ಮ್ನಲ್ಲಿಲ್ಲವಾದರೆ ಗಿಲ್‌ ಇನ್ನಿಂಗ್ಸ್‌ ಆರಂಭಿಸುವುದು ಅನಿವಾರ್ಯ
ವಾಗುತ್ತದೆ. 2023ರ ವಿಶ್ವಕಪ್‌ಗೆ ಆರಂಭಿಕ ನಾಗುವ ನಿಟ್ಟಿನಲ್ಲಿ ಗಿಲ್‌ ಬೆಳೆಯುತ್ತಿದ್ದಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next