Advertisement

ದೀಪ ಬೆಳಗೋಣ ಸುರಕ್ಷೆಯ ಸಂಕಲ್ಪದೊಂದಿಗೆ

10:55 AM Apr 05, 2020 | Sriram |

ಇಂದು ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ (ಅಂದರೆ 9.9ರ ವರೆಗೆ) ವರೆಗೆ ಎಲ್ಲರ ಮನೆಯಲ್ಲಿ ದೀಪಗಳನ್ನು ಬೆಳಗುವಂತೆ ಪ್ರಧಾನ ಮಂತ್ರಿಗಳು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೀಪ ಬೆಳಗುವ ಸಂದರ್ಭ ತುಂಬಾ ಎಚ್ಚರಿಕೆಯನ್ನು ಅನುಸರಿಸಬೇಕಾಗಿದೆ. ಇದು ದೀಪಗಳನ್ನು ಬೆಳಗುವ ಕಾರ್ಯಕ್ರಮವೇ ಹೊರತು ದೀಪಾವಳಿ ಅಲ್ಲ ಎಂಬ ಯೋಚನೆ ನಮ್ಮಲ್ಲಿ ಮನೆಮಾಡಬೇಕು. ಈ ಕುರಿತಂತೆ ಒಂದಷ್ಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

Advertisement

ಎಲ್ಲೆಲ್ಲಿ ಇಡಬಹುದು?
ದೀಪಗಳಾದರೆ ಮನೆಯ ಹೊಸ್ತಿಲು, ಮೆಟ್ಟಿಲುಗಳ ಎರಡೂ ಬದಿಯಲ್ಲಿ, ತುಳಸಿ ಕಟ್ಟೆ ಸುತ್ತ, ಟೆರೇಸ್‌ ಮೇಲೆ ದೀಪ ಇಡಬಹುದು. ಇಷ್ಟೇ ಅಲ್ಲದೇ ಒಂದು ಅಗಲವಾದ ಪಾತ್ರೆಯಲ್ಲಿ ನೀರಿಟ್ಟು. ಅದರಲ್ಲಿ ಮೇಣದ ದೀಪಗಳನ್ನು ತೇಲಿ ಬಿಡಬಹುದು.

ಲಾಕ್‌ ಡೌನ್‌ ಜಾರಿಯಲ್ಲಿರುವ ಕಾರಣ ಅಗತ್ಯ ಸೇವೆಗಳು ಮಾತ್ರ ಜಾರಿಯಲ್ಲಿದೆ. ದೀಪ ಬೆಳಗುವ ಸಂದರ್ಭ ಅನಾಹುತವಾಗದಂತೆ ನೋಡಿಕೊಳ್ಳಿ. ಹೆಚ್ಚಾಗಿ ಮಕ್ಕಳು. ದೀಪ ಹಚ್ಚಿ ಅವಘಡಗಳು ನಡೆದರೆ ಆಸ್ಪತ್ರೆ ಸೇವೆಗಳು ಈಗ ಸೀಮಿತವಾಗಿವೆ. ಅದಲ್ಲದೆ ರಾತ್ರಿ ಹೊತ್ತು ಕ್ಲಿನಿಕ್‌ಗಳು ಮುಚ್ಚಲ್ಪಟ್ಟಿರುತ್ತದೆ. ಈ ಎಲ್ಲ ಸಂಭಾವ್ಯ ದುರಂತಗಳು ನಡೆಯದೇ ಇರುವಂತೆ ಎಚ್ಚರ ವಹಿಸೋಣ.

ಎಚ್ಚರ ತುಂಬಾ ಅವಶ್ಯ
1. ದೀಪಗಳಿಗೆ ಅಗತ್ಯವಿರುವಷ್ಟೇ ಎಣ್ಣೆ ಹಾಕಿ. ಇಲ್ಲವಾದಲ್ಲಿ ಎಣ್ಣೆ ಸೋರಿ ದೀಪವಿಟ್ಟ ಜಾಗದಲ್ಲಿ ಜಿಡ್ಡು ನಿಂತುಕೊಳ್ಳುತ್ತದೆ.
2. ದೀಪಗಳ ಹಬ್ಬ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಆದರೆ ನಿರ್ಲಕ್ಷ್ಯ ವಹಿಸಿದರೆ ಅಪಾಯ ನಿಶ್ಚಿತ. ದೀಪ ಹಚ್ಚುವಾಗ ಜಾಗೃತರಾಗಿರಿ.
3. ದೀಪಗಳನ್ನು ಹಚ್ಚಿದ ಬಳಿಕ ದೀಪದ ಸುತ್ತ ಹೆಚ್ಚಾಗಿ ಓಡಾಡಬೇಡಿ. ದೀಪ ಆರುವ ಸಾಧ್ಯತೆ ಇದೆ. ಜತೆಗೆ ಬಟ್ಟೆಗೆ ಬೆಂಕಿ ತಗುಲುವ ಸಾಧ್ಯತೆಯೂ ಇದೆ.
ಮೆಟ್ಟಿಲ ಎರಡೂ ಬದಿ ದೀಪ ಇಟ್ಟರೆ ಓಡಾಡುವಾಗ ಎಚ್ಚರ ಅಗತ್ಯ. ಯಾಕೆಂದರೆ 4. ಎಣ್ಣೆ ಚೆಲ್ಲಿದ್ದರೆ ನೆಲ ಜಾರುತ್ತದೆ ಎಂಬ ಅರಿವಿರಲಿ.
5.ಕೈಯಲ್ಲಿ ದೀಪವನ್ನು ಹಿಡಿಯುವ ಬದಲು ಕೆಳಗೆ ಇಟ್ಟರೆ ಉತ್ತಮ. ಇಂತಹ ಸಂದರ್ಭ ದೀಪದ ಕೆಳಗೆ ಸಣ್ಣ ತಟ್ಟೆಗಳನ್ನು ಇಡಬಹುದು. ಎಣ್ಣೆ ಸೋರಿದರೆ ತಟ್ಟೆಯಲ್ಲೇ ಅದು ನಿಲ್ಲುತ್ತದೆ ಎಂಬ ಉದ್ದೇಶಕ್ಕೆ.
6.ಕಿಟಕಿ ಮತ್ತು ಕೊಠಡಿಯೊಳಗಿನಿಂದ ದೀಪ ಬೆಳಗುವ ಪ್ರಯತ್ನ ಬೇಡ. ಮನೆಯ ಅಂಗಳಕ್ಕೆ ಬಂದು ಬೆಳಗಿ. ಮನೆಯೊಳಗೆ ಬಟ್ಟೆ ಮತ್ತು ಕಿಟಕಿಯಲ್ಲಿ ಕರ್ಟನ್‌ ಇರುವುದರಿಂದ ಸುರಕ್ಷತೆಯತ್ತ ಗಮನ ನೀಡಿ.
7.ದೀಪ ಹಚ್ಚಿದ ಬಳಿಕ ಮಕ್ಕಳ ಬಗ್ಗೆ ಎಚ್ಚರ ವಹಿಸಿ. ಅಪಾಯವಾಗದಂತೆ ನೋಡಿಕೊಳ್ಳಿ. ದೀಪ ಆರುವ ತನಕ ಅದರತ್ತ ಗಮನ ನೀಡಿ.
8.ಮೊಬೈಲ್‌ ಫೋಟೋಗಳು, ಚಿತ್ರಗಳು ತೆಗೆಯುವ ಸಂದರ್ಭ ದೀಪ ಮೈಗೆ ಅಥವಾ ಬಟ್ಟೆಗೆ ತಾಗದಂತೆ ಜಾಗೃತೆ ವಹಿಸಿ.

Advertisement

Udayavani is now on Telegram. Click here to join our channel and stay updated with the latest news.

Next