Advertisement

ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಮಾಣ ಹೆಚ್ಚಳ; 24ಗಂಟೆಯಲ್ಲಿ 47,262 ಗರಿಷ್ಠ ಪ್ರಕರಣ ಪತ್ತೆ

11:45 AM Mar 24, 2021 | Team Udayavani |

ನವದೆಹಲಿ: ಕೋವಿಡ್ 2ನೇ ಅಲೆ ತೀವ್ರವಾಗಿ ಹಬ್ಬುತ್ತಿರುವ ನಡುವೆಯೇ ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 47, 262 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಇದು 2021ನೇ ಇಸವಿಯಲ್ಲಿ ಒಂದೇ ದಿನದ ಗರಿಷ್ಠ ಪ್ರಮಾಣದ ಪ್ರಕರಣವಾಗಿದೆ. ದೇಶಾದ್ಯಂತ ಒಟ್ಟು 1,17,34,058 ಕೋವಿಡ್ ಪ್ರಕರಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಇದನ್ನೂ ಓದಿ:ಏಪ್ರಿಲ್ 1 ರಿಂದ ಬದಲಾಗಲಿದೆ ಇನ್ ಕಮ್ ಟ್ಯಾಕ್ಸ್ ನ ಹಲವು ನಿಯಮಗಳು.! ಇಲ್ಲಿದೆ ಮಾಹಿತಿ

ದೇಶದಲ್ಲಿ ಸತತ 14ನೇ ದಿನವೂ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇದೀಗ 3,68,457 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಕೋವಿಡ್ ಸೋಂಕಿನ ಚೇತರಿಕೆಯ ಪ್ರಮಾಣ 95.49ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯ ವಿವರಿಸಿದೆ.

ಕಳೆದ 132 ದಿನಗಳಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ದೇಶದಲ್ಲಿ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 1,60,441ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next