ನವದೆಹಲಿ: ಇನ್ಮುಂದೆ ಸ್ಯಾಮ್ ಸಂಗ್, ಆ್ಯಪಲ್, ವಿವೋ, ಶಿಯೋಮಿ, ಒಪ್ಪೋ ಮತ್ತು ರಿಯಲ್ ಮಿ ಮಾರಾಟ ಮಾಡುವ ಸ್ಮಾರ್ಟ್ ಫೋನ್ ಮತ್ತು ಫೀಚರ್ ಫೋನ್ ಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಮೊಬೈಲ್ ಫೋನ್ ಡಿಸ್ ಪ್ಲೇ ಮೇಲೆ ಶೇ.10ರಷ್ಟು ಆಮದು ಸುಂಕ ವಿಧಿಸಿರುವುದು.
ಆತ್ಮನಿರ್ಭರ್ ಭಾರತ್ ಪ್ರಚಾರಾಂದೋಲನದ ಅಂಗವಾಗಿ ದೇಶಿ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಮೊಬೈಲ್ ಡಿಸ್ ಪ್ಲೇ ಪ್ಯಾನಲ್ ಮೇಲೆ ಶೇ.10ರಷ್ಟು ಆಮದು ಸುಂಕ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆಮದು ಸುಂಕದಿಂದಾಗಿ ಮೊಬೈಲ್ ಫೋನ್ ಗಳ ಬೆಲೆಯಲ್ಲಿ 1.5%ದಿಂದ ಶೇ.5ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಕಂಪನಿಗಳು ತಿಳಿಸಿವೆ. ಇದರಿಂದಾಗಿ ಮುಂಬರುವ ಹಬ್ಬದ ಸೀಸನ್ ಗಳಲ್ಲಿ ಮೊಬೈಲ್ ಖರೀದಿ ಮೇಲೆ ಪರಿಣಾಮ ಬೀರಲಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ:ಅಬುಧಾಬಿಯಲ್ಲಿಂದು ರಾಯಲ್ ಕಾಳಗ: ವಿರಾಟ್ – ಸ್ಮಿತ್ ಮುಖಾಮುಖಿಯಲ್ಲಿ ಗೆಲುವು ಯಾರಿಗೆ?
ಡಿಸ್ ಪ್ಲೇ ಮತ್ತು ಟಚ್ ಪ್ಯಾನಲ್ ಮೇಲಿನ ಆಮದು ಸುಂಕ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ. ಮೊಬೈಲ್ ಫೋನ್ ತಯಾರಿಕೆಯಲ್ಲಿ ಟಚ್ ಪ್ಯಾನಲ್ ಮತ್ತು ಡಿಸ್ ಪ್ಲೇ ಪ್ರಮುಖವಾಗಿ ಉಪಯೋಗವಾಗುವ ಭಾಗಗಳಾಗಿವೆ. ಇದರಿಂದಾಗಿ ಮೊಬೈಲ್ ಫೋನ್ ಗಳ ಗುಣಮಟ್ಟ ಮತ್ತು ದರದಲ್ಲಿ ಹೆಚ್ಚಳವಾಗುತ್ತಿತ್ತು. ಇದೀಗ ಆಮದು ಸುಂಕದಿಂದ ಮತ್ತಷ್ಟು ಬೆಲೆ ಹೆಚ್ಚಳವಾಗಲಿದೆ ಎಂದು ಐಸಿಇಎ ತಿಳಿಸಿದೆ.