ನೆಲಮಂಗಲ: ತಾಲೂಕಿನ ಬೈರನಹಳ್ಳಿಯ ಸ್ಮಶಾನದಲ್ಲಿ ಎರಡು ತಿಂಗಳ ಹಿಂದೆ ಅಂತ್ಯಕ್ರಿಯೆ ಮಾಡಲಾಗಿದ್ದ ಶವವನ್ನು ಹೊರತೆಗೆದು ವಾಮಾಚಾರ ಮಾಡಿರುವ ಘಟನೆ ನಡೆದಿದೆ.
ಟಿ.ಬೇಗೂರು ಪಂಚಾಯತಿಯ ಬೈರನಹಳ್ಳಿ ಗ್ರಾಮದ ನಿವಾಸಿ ಮೃತ ಅರಸಪ್ಪ (85) ಜ.13 ರಂದು ಸಾವನಪ್ಪಿದ್ದರು. ಅರಸಪ್ಪನ ದೇಹವನ್ನು ಬೈರನಹಳ್ಳಿ ಗ್ರಾಮದ ಹೊರಭಾಗದಲ್ಲಿರುವ ಸಾರ್ವ ಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು, ಆದರೆ ವಿಚಿತ್ರ ವೆಂಬಂತೆ ಮಂಗಳವಾರ ರಾತ್ರಿ ಸ್ಮಶಾನದಲ್ಲಿ ಮಣ್ಣು ಮಾಡಲಾಗಿದ್ದ ಶವದ ತಲೆಯಭಾಗವನ್ನು ಹೊರತೆಗೆದು ವಾಮಾಚಾರ ಮಾಡಿ ತಲೆಯನ್ನು ಆಳವಾಗಿ ಮುಚ್ಚಿರುವ ಘಟನೆ ನಡೆದಿದೆ.
ಮೃತ ಅರಸಪ್ಪನಿಗೆ ನಾಲ್ಕುಜನ ಮಕ್ಕಳಿದ್ದು, ಯಾವುದೇ ಆಸ್ತಿಪಾಸ್ತಿಯಿಲ್ಲ, ಮೃತ ಅರಸಪ್ಪನ ಮುಚ್ಚಿರುವ ಗುಂಡಿಯಲ್ಲಿ ಶವದ ತಲೆಯ ಭಾಗದಲ್ಲಿ ಮಾಡಲಾಗಿದ್ದ ಗೂಡಿನಿಂದ ತಲೆ ಹೊರತೆಗೆದು ವಾಮಾಚಾರ ಮಾಡಿ ಅನಂತರ ತಲೆಯನ್ನು ಆಳವಾಗಿ ಮುಚ್ಚಲಾಗಿದೆ. ಬೈರನಹಳ್ಳಿ ಸ್ಮಶಾನದಲ್ಲಿ ಈ ರೀತಿಯ ಘಟನೆ ಇದೇ ಮೊದಲು, ಈ ರೀತಿಯ ಕೃತ್ಯವನ್ನು ವಾಮಾಚಾರ ಮಾಡುವ ದುಷ್ಕರ್ಮಿಗಳು ಮಾಡಿರುತ್ತಾರೆ, ಪೊಲೀಸರ ತನಿಖೆಯಿಂದ ಮಾತ್ರ ಈ ಘಟನೆಯ ಸತ್ಯತೆ ತಿಳಿಯುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.
ವಾಮಾಚಾರ ಶಂಕೆ: ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದ್ದ ಅರಸಪ್ಪನ ಶವದ ತಲೆಯ ಭಾಗದಲ್ಲಿ ಮಣ್ಣು ಗೆದು ಹಾಳವಾಗಿ ಮುಚ್ಚಿ ಹೋಗಿದ್ದಾರೆ, ಊದು ಭತ್ತಿ, ಅರಿಶಿನಕುಂಕುಮ, ನಿಂಬೆಹಣ್ಣುಗಳನ್ನು ಬಳಸಿ ಸ್ಥಳದಲ್ಲಿ ಪೂಜೆ ಮಾಡಲಾಗಿದ್ದು, ಮೃತ ಅರಸಪ್ಪನ ಶವದ ತಲೆಯಭಾಗದ ಕಡೆ ವಾಮಾಚಾರ ಮಾಡಿರುವ ಶಂಕೆಯಿಂದಾಗಿ ಜನರಲ್ಲಿಆತಂಕ ಸೃಷ್ಟಿಯಾಗಿದೆ.
ತಲೆಯಿಲ್ಲ ಎಂಬ ವದಂತಿ: ಗುಂಡಿಯನ್ನು ತೆಗೆದಿರುವುದನ್ನು ಗಮನಿಸಿದ ಗ್ರಾಮಸ್ಥರು ಶವದ ತಲೆ ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ ಎಂಬ ವದಂತಿ ಬಲವಾಗಿ ಕೇಳಿಬಂತು, ತಲೆಯ ಭಾಗದಲ್ಲಿ ಮಾಡಲಾಗಿದ್ದ ಗೂಡಿನಲ್ಲಿ ತಲೆಯಿಲ್ಲದ ಕಾರಣ ವಂದತಿ ಕೇಳಿಬಂದ ಹಿನ್ನೆಲೆ ನೆಲಮಂಗಲ ಗ್ರಾಮಾಂತರ ಪೊಲೀಸರು ಗುಂಡಿಯಲ್ಲಿರುವ ಶವವನ್ನು ಪೂರ್ಣ ತೆಗೆದು ನೋಡಿದ ನಂತರ ತಲೆಯ ಭಾಗವನ್ನು ಹಾಳವಾಗಿ ಮುಚ್ಚಿರುವುದು ತಿಳಿದು ಬಂದಿದೆ¨