ಹುಬ್ಬಳ್ಳಿ: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಸಮೀರ್ ಆಚಾರ್ಯ ಅವರ ದಾಂಪತ್ಯದಲ್ಲಿ ಕಲಹ ಉಂಟಾಗಿ ಠಾಣೆ ಮೆಟ್ಟಿಲೇರಿದ ಹಂತಕ್ಕೆ ತಲುಪಿದೆ.
ಕನ್ನಡ ಬಿಗ್ ಬಾಸ್ -5 ನಲ್ಲಿ ಈ ಹಿಂದೆ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಅವರು ಅದಾದ ಬಳಿಕ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಪತ್ನಿ ಶ್ರಾವಣಿ ಅವರ ಜತೆ ಟಿವಿ ಶೋನಲ್ಲೂ ಅವರು ಕಾಣಿಸಿಕೊಂಡಿದ್ದರು.
ಇದೀಗ ಪತಿ – ಪತ್ನಿಯ ನಡುವೆ ಕೌಟುಂಬಿಕ ಕಲಹ ಉಂಟಾಗಿ ಠಾಣೆ ಮೆಟ್ಟೇರುವರೆಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಆಗಿದ್ದೇನು?:
ಬಿಗ್ ಬಾಸ್ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಅವರು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪವನ್ನು ಅವರ ಪತ್ನಿ ಶ್ರಾವಣಿ ಮಾಡಿದ್ದಾರೆ.
ಸಮೀರ್ ಆಚಾರ್ಯ ಅವರ ಮಗಳನ್ನು ಶ್ರಾವಣಿ ಬೆದರಿಸಿದ್ದ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ.
ಇದೇ ವಿಚಾರಕ್ಕೆ ಶ್ರಾವಣಿ ಅವರ ಅತ್ತೆ – ಮಾವ ಕೂಡ ಶ್ರಾವಣಿ ರೇಗಾಡಿ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪತಿ ಸಮೀರ್ ಆಚಾರ್ಯ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನು ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಮಾಡಲು ಹೋದ ಶ್ರಾವಣಿ ಅವರ ಮೊಬೈಲ್ ಕಿತ್ತುಕೊಂಡು ಸಮೀರ್ ಒಡೆದು ಹಾಕಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಶ್ರಾವಣಿ ಪತಿ, ಅತ್ತೆ – ಮಾವ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ. ಇತ್ತ ಸೊಸೆ ವಿರುದ್ಧ ಸಮೀರ್ ಪೋಷಕರು ಪ್ರತಿ ದೂರು ನೀಡಲು ಮುಂದಾಗಿದ್ದಾರೆ.
ಈ ವೇಳೆ ಪೊಲೀಸರು ಇಬ್ಬರನ್ನು ಕೂರಿಸಿ ಕೌನ್ಸಿಲಿಂಗ್ ನಡೆಸಿ ಎಚ್ಚರಿಕೆ ಕೊಟ್ಟು ಅರ್ಜಿ ಬರೆಸಿ ಕಳುಹಿಸಿದ್ದಾರೆ ಎನ್ನಲಾಗಿದೆ.