Advertisement
ನಗರದ ಪೊಲೀಸ್ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ವಲಯದ ಮಹಾನಿರೀಕ್ಷಕ ಸಿಮಂತ್‌ಕುಮಾರ್ ಸಿಂಗ್ ಅವರು ಕೊಲೆ ರಹಸ್ಯವನ್ನು ತೆರೆದಿಟ್ಟರು. ಮಾಗಡಿಯ ಮಹಮದ್ ವಾಸಿಲ್ ಅಲಿಯಾಸ್ ವಾಸಿಲ್ (42), ಬೆಂಗಳೂರಿನ ಗೋರಿಪಾಳ್ಯದ ರಶೀದುನ್ನೀಸ್ಸಾ ಅಲಿಯಾಸ್ ರಶೀದಾ (36), ಗೋರಿಪಾಳ್ಯದ ನಸೀಮ್ ತಾಜ್ (33) ಮತ್ತು ಹೊಸಮಸೀದಿ ಬಡಾವಣೆಯ ಬಾಲಕ (17) ಬಂತ ಆರೋಪಿಗಳು. ಅಸಲಿಗೆ ಬಂತರೆಲ್ಲರೂ, ಮೃತ ಬಾಲಕಿಯ ದೂರದ ಸಂಬಂಗಳೇ ಆಗಿದ್ದಾರೆ ಎಂದು ತಿಳಿಸಿದರು.
Related Articles
ಮಾಗಡಿಯ ಹೊಸಹಳ್ಳಿ ರಸ್ತೆಯಲ್ಲಿರುವ ಸುಕ್ಕೂರು ಸಾಬ್ ದರ್ಗಾದ ಬಳಿ ಇರುವ ಆರೋಪಿ ವಾಸಿಲ್‌ಗೆ ಸೇರಿದ ಜಮೀನಿನಲ್ಲಿ ಬಾಲಕಿ ಬಲಿಗೆ ವ್ಯವಸ್ಥೆ ಮಾಡಲಾಗಿದೆ. ಆಯೆಷಾಳ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ವಾಮಾಚಾರದ ಸ್ಥಳಕ್ಕೆ ಕರೆ ತಂದಿದ್ದಾರೆ. ನಂತರ ಬಾಲಕಿ ತನ್ನ ಜಡೆಗೆ ಕಟ್ಟಿದ್ದ ಟೇಪ್ ಮೂಲಕವೇ ಆಕೆಯ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ನಂತರ ರಫಿಕ್ ಗುಣಮುಕನಾಗಲೆಂದು ಪೂಜೆ ಮಾಡಿದ್ದಾರೆ. ನಸೀಮಾಳ ನಿರ್ದೇಶನದಂತೆ ಬಾಲಕಿಯ ಶವವನ್ನು ಗೋಣಿಚೀಲದಲ್ಲಿ ಕಟ್ಟಿ ದಾರ್ಗಾದ ಬಲ ಬದಿಗೆ ಎಸೆದು ಪರಾರಿಯಾಗಿದ್ದಾರೆ.
Advertisement
ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆಮಾಗಡಿ: ಆಯೆಷಾಳನ್ನು ವಾಮಚಾರಕ್ಕೆ ಬಲಿ ನೀಡಿದ್ದು ವಾಸಿಲ್ ಮತ್ತವನ ಕುಟುಂಬಸ್ಥರು ಎಂದು ತಿಳಿಯುತ್ತಲೇ ಆರೋಪಿಗಳ ಮನೆ ಎದುರು ಸಾವಿರಾರು ಮಂದಿ ಜಮಾಯಿಸಿದರು. ಕುಟುಂಬವನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಕೆಲ ಕಿಡಿಗೇಡಿಗಳು ಆರೋಪಿಗಳ ಮನೆಯ ಬಾಗಿಲು ಮುರಿದಿದರು. ಸುಣ್ಣಕಲ್ಲು ಬೀದಿಯ ತುಂಬಾ ಜಮಾಯಿಸಿದ್ದ ಸಾರ್ವಜನಿಕರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನೇ ನಡೆಸಬೇಕಾಯಿತು. ಆನಂತರ ಸಾರ್ವಜನಿಕರು ಮಾಗಡಿ ಬೆಂಗಳೂರು ರಸ್ತೆಗೆ ತೆರಳಿ ರಸ್ತೆಯ ಮಧ್ಯೆ ಟೈರು ಸುಟ್ಟು, ರಸ್ತೆ ತಡೆ ನಡೆಸಿದರು. ಇದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ತೊಡಕುಂಟಾಯಿತು. ನಿಮಿಷ ನಿಮಿಷಕ್ಕೂ ನೂರಾರು ಮಂದಿ ಸ್ಥಳಕ್ಕೆ ಜಮಾಯಿಸುತ್ತಿದ್ದುದ್ದರಿಂದ ಅವರನ್ನು ನಿಯಂತ್ರಿಸಲು ಡಿವೈಎಸ್‌ಪಿ ಲಕ್ಷಿ ಗಣೇಶ್,ಸಿಪಿಐ ನಂದೀಶ್, ತಾವರೆಕೆರೆ ಪಿಎಸ್‌ಐ ರವಿ ಕುದೂರು ಪೊಲೀಸ್ ಠಾಣೆಯ ಪಿಎಸ್‌ಐ ಹರೀಶ್ ಹಾಗೂ ತಮ್ಮ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು. 2 ಡಿಆರ್ ತುಕಡಿಗಳು ಹಾಗೂ ತಾಲೂಕಿನ ವಿವಿದೆಡೆ ಪೊಲೀಸ್ ಠಾಣೆಗಳಿಂದ ಸುಮಾರು 50ಕ್ಕೂ ಹೆಚ್ಚು ಪೊಲೀಸರು ಸ್ಥಳಕ್ಕೆ ಬಂದರು. ಜಮೀನಿನಲ್ಲಿ ಬಿದ್ದಿದ್ದ ವಸ್ತುಗಳಿಂದ ಆರೋಪಿಗಳ ಪತ್ತೆ
ಮಾರ್ಚ್ 3ರಂದು ದರ್ಗಾದ ಬಳಿ ಆಯೆಷಾಳ ಶವ ಪತ್ತೆಯಾಗಿತ್ತು. ಆಕೆ ಸಿಕ್ಕ ಸ್ಥಳದಲ್ಲಿ ಮತ್ತು ಸ್ವಲ್ಪ ದೂರದಲ್ಲಿ ನಿಂಬೆಹಣ್ಣು, ತೆಂಗಿನಕಾಯಿ, ಕರಿ ಬಳೆ ಮುಂತಾದ ವಸ್ತುಗಳು ಪತ್ತೆಯಾಗಿದ್ದವು. ಹೀಗಾಗಿ ಬಾಲಕಿಯನ್ನು ವಾಮಾಚಾರಕ್ಕೆ ಬಲಿ ನೀಡಲಾಗಿದೆ ಎಂದು ಅನುಮಾನಿಸಲಾಗಿತ್ತು. ನಿಂಬೆ ಹಣ್ಣು ಮತ್ತಿತರ ವಸ್ತುಗಳು ಸಿಕ್ಕಿದ್ದ ಜಮೀನಿನ ಮಾಲೀಕನಾಗಿದ್ದ ವಾಸಿಲ್ ಮತ್ತು ಆತನ ಪುತ್ರನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇಬ್ಬರೂ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದರು. ಹೀಗಾಗಿ ಪೊಲೀಸರು ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಪೊಲೀಸರನ್ನು ಅಭಿನಂದಿಸಿದ ಮಹಾನಿರೀಕ್ಷಕರು
ಬಾಲಕಿಯ ಅಪಹರಣ ಮತ್ತು ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣ ನಡೆದ ಮೂರು ದಿನಗಳಲ್ಲಿ ಆರೋಪಿಗಳನ್ನು ಜಿಲ್ಲಾ ಮತ್ತು ಮಾಗಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಕೇಂದ್ರವಲಯದ ಪೊಲೀಸ್ ಮಹಾನಿರೀಕ್ಷಕ ಸೀಮಂತ್ ಕುಮಾರ್ ಸಿಂಗ್ ಅಭಿನಂದಿಸಿದರು. ಆರೋಪಿಗಳು ಕೊಲೆಯಾದ ಬಾಲಕಿಯ ದೂರದ ಸಂಬಂಗಳೇ ಆಗಿದ್ದರು. ವಾಮಾಚಾರದ ನೆಪದಲ್ಲಿ ಮಕ್ಕಳನ್ನು ಬಲಿಕೊಡುವುದು ದೊಡ್ಡ ಅಪರಾಧ ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್ಪಿ ಬಿ.ರಮೇಶ್, ಡಿವೈಎಸ್‌ಪಿ ಲಕ್ಷಿಗಣೇಶ್, ಸಿಪಿಐಗಳಾದ ಮಾಗಡಿ ಎಚ್.ಎಲ್.ನಂದೀಶ್, ಕುಂಬಳಗೂಡು ಠಾಣೆಯ ಶ್ರೀಧರ್, ಬ್ಯಾಡರಹಳ್ಳಿಯ ರವಿಕುಮಾರ್, ಶಿವಶಂಕರ್, ಎಸ್‌ಐಗಳಾದ ಮಂಜುನಾಥ್, ರವಿ, ಹರೀಶ್, ದಾಳೇಗೌಡ, ಎಎಸ್‌ಯ ಭಾಸ್ಕರ್, ಸಿಬ್ಬಂದಿಗಳಾದ ದೇವರಾಜು, ಕಾರ್ಯಪ್ಪ, ರಾಜಣ್ಣ, ಅರುಣ್, ಸೂರ್ಯಕುಮಾರ್ ಮತ್ತು ಮಹಮದ್‌ತೌಫೀಕ್ ಮತ್ತಿತರರು ಇದ್ದರು.