Advertisement

ಸುಷ್ಮಾ ನಮ್ಮ ಪ್ರಧಾನಿ ಆಗಬೇಕಿತ್ತು: ಪಾಕ್‌ ಮಹಿಳೆ

09:55 AM Jul 29, 2017 | Karthik A |

ಹೊಸದಿಲ್ಲಿ: ‘ನೀವೇ ನಮ್ಮ ಪ್ರಧಾನಿಯಾಗಬೇಕಿತ್ತು. ಆಗ ಪಾಕಿಸ್ಥಾನ ಬದಲಾಗುತ್ತಿತ್ತು’. ಹೀಗೆಂದು ಟ್ವೀಟ್‌ ಮಾಡಿರುವುದು ಪಾಕಿಸ್ಥಾನಿ ಮಹಿಳೆ. ಅವರು ಹೀಗೆ ಹೇಳಿರುವುದು ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಕುರಿತು. ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾ ನೀಡಲು ತಾವು ಮಧ್ಯಸ್ಥಿಕೆ ವಹಿಸಬೇಕು ಎಂದು ಪಾಕ್‌ ಮಹಿಳೆ ಹಿಜಾಬ್‌ ಆಸಿಫ್ ಸುಷ್ಮಾ ಸ್ವರಾಜ್‌ಗೆ ಗುರುವಾರ ಮನವಿ ಮಾಡಿದ್ದರು. ಮನವಿಗೆ ಕೂಡಲೇ ಸ್ಪಂದಿಸಿದ ಸುಷ್ಮಾ, ಅವರಿಗೆ ವೀಸಾ ನೀಡುವಂತೆ ಪಾಕಿಸ್ಥಾನದಲ್ಲಿನ ಭಾರತೀಯ ರಾಯಭಾರಿ ಗೌತಮ್‌ ಬಂಬಾವಾಲೆಗೆ ಸೂಚಿಸಿದ್ದಾರೆ. ಸ್ವಲ್ಪವೂ ತಡಮಾಡದೆ ತಮ್ಮ ಕೋರಿಕೆಗೆ ಸ್ಪಂದಿಸಿದ್ದಕ್ಕಾಗಿ ಧನ್ಯವಾದ ಹೇಳಿರುವ ಹಿಜಾಬ್‌, ‘ನಿಮ್ಮನ್ನ ಏನೆಂದು ಕರೆಯುವುದು ಸೂಪರ್‌ ವುಮನ್‌? ದೇವತೆ? ನಿಮ್ಮ ಹೃದಯ ವೈಶಾಲ್ಯವನ್ನು ಬಣ್ಣಿಸಲು ಪದಗಳೇ ಇಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next