ಮಾಯಕೊಂಡ: ರೈತಪರ ಸಂಘಟನೆಗಳಲ್ಲಿ ವೈಮನಸ್ಸುಗಳು ಹುಟ್ಟಿಕೊಂಡು ಹೋರಾಟದ ಮನೋಭಾವ ಕಡಿಮೆಯಾಗುತ್ತಿದೆ ಎಂದು ಆನಗೋಡು ಜಿಪಂ ಸದಸ್ಯ ಬಸವಂತಪ್ಪ ಹೇಳಿದರು.
ಸಮೀಪದ ಆನಗೋಡು ಗ್ರಾಮದಲ್ಲಿ 1992ರಲ್ಲಿ ರಸಗೊಬ್ಬರ ಬೆಲೆ ಏರಿಕೆ ವಿರುದ್ಧ ಹೋರಾಟದಲ್ಲಿ ಪೊಲೀಸ್ ಗೋಲಿಬಾರ್‌ಗೆ ಬಲಿಯಾಗಿದ್ದ ಓಬೆನಹಳ್ಳಿ ಕಲ್ಲಿಂಗಪ್ಪ ಮತ್ತು ಸಿದ್ಧನೂರು ನಾಗರಾಜಾಚಾರ್ ಅವರ 26 ನೇ ವರ್ಷದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಅವರ ಸಮಾಧಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಹೈವೆಗಳಲ್ಲಿ ಅವೈಜ್ಞಾನಿಕವಾಗಿ ಅಂಡರ್‌ಪಾಸ್ ಬ್ರಿಡ್ಜ್ಗಳನ್ನು ನಿರ್ಮಿಸಿರುವುದರಿಂದ ಆ ಭಾಗದ ಜಮೀನುಗಳಿಗೆ ಹೋಗುವ ರೈತರು ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ದಾವಣಗೆರೆ ಶಾಮನೂರು ಬಳಿಯ ಬ್ರಿಡ್ಜ್ನಂತೆ ಮಾಡಿದರೆ ಅಪಘಾತಗಳನ್ನು ತಡೆಗಟ್ಟಬಹುದು. ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು ಎಂದರು.
ಕೆಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ನೀಡಬೇಕಿರುವ ಫಸಲ್ ಬೀಮಾ ಯೋಜನೆಯ ಹಣ ಪಾವತಿಸದೇ ಹಗಲು ದರೋಡೆ ಮಾಡುತ್ತಿವೆ. ರೈತರು ದಾವಣಗೆರೆಯಿಂದ ಬೆಂಗಳೂರಿನವರೆಗೆ ಹೋರಾಟ ಮಾಡಿದರೆ ಮಾತ್ರ ಹೋರಾಟಕ್ಕೆ ಬಲ ಬರುತ್ತದೆ ಎಂದರು. ಹುತಾತ್ಮ ದಿನಾಚರಣೆ ಸಮಿತಿ ಅಧ್ಯಕ್ಷ ಎನ್.ಜಿ ಪುಟ್ಟಸ್ವಾಮಿ ಮಾತನಾಡಿ, ಸರ್ಕಾರ ಮತ್ತು ಅಧಿಕಾರಿಗಳಿಗೆ ನೀಡುವ ಸಲಹೆಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ಕೆಲಸ ಮಾಡುವ ಕೈಗಳಿಗೆ ಸರ್ಕಾರಗಳು ಕೆಲಸ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ.
ರೈತರಿಂದ ಮತ ಪಡೆದ ಕ್ಷೇತ್ರದ ಶಾಸಕರು ಹುತಾತ್ಮರ ದಿನಾಚರಣೆಗೆ ಬರದೆ ಮೋಸ ಮಾಡಿದ್ದಾರೆ. ಸರ್ಕಾರ ನೌಕರರ ಸಂಬಳ ಜಾಸ್ತಿ ಮಾಡುತ್ತದೆ. ಆದರೆ ರೈತನ ಸಾಲಮನ್ನ ಮಾಡಲು ಯೋಚಿಸುತ್ತವೆ. ಅಚ್ಛೇ ದಿನ್ ಬರುತ್ತವೆ ಎಂದು ಹೇಳುತ್ತ ಪ್ರಧಾನಿ ಮೋದಿ 4 ವರ್ಷ ಕಳೆದರೂ ರೈತರ ಕಷ್ಟ ಕೇಳುತ್ತಿಲ್ಲ ಎಂದರು.
ಗ್ರಾಪಂ ಅಧ್ಯಕ್ಷ ರವಿ ಮಾತನಾಡಿ, ಹೈವೇ ಅಗಲೀಕರಣ ಮಾಡುವುದರಿಂದ ಹುತಾತ್ಮರ ಸಮಾಧಿ ಗಳನ್ನು ಬೇರೆ ಕಡೆ ನಿರ್ಮಾಣ ಮಾಡಲು ಜಾಗ ನೀಡಲು ಸಿರಿಗೆರೆ ಶ್ರೀಗಳ ಸಮಕ್ಷಮ ಪಂಚಾಯ್ತಿ ಒಪ್ಪಿಕೊಂಡಿದೆ. ಅದರಂತೆ ಜಾಗವನ್ನು
ನೀಡುತ್ತೇವೆ ಎಂದರು. ರೈತ ಮುಖಂಡರಾದ ನಂಜುಡಪ್ಪ, ಅವರಗೆರೆ ರುದ್ರಮುನಿ, ಅವರಗೊಳ್ಳ ಷಣ್ಮುಖಯ್ಯ, ಮುನಿಯಪ್ಪ, ಮರಳು ಸಿದ್ದಪ್ಪ, ರೈತ ಸಂಘದ ಪದಾಧಿಕಾರಿಗಳು ಇದ್ದರು. ಹುತಾತ್ಮ ರೈತ ಕುಟುಂಬದ ಸದಸ್ಯರಿಗೆ ಶಾಮನೂರು ಲಿಂಗರಾಜು ಹೆದೆ ಮುರುಗೇಂದ್ರಪ್ಪ ಸಹಾಯಧನದ ಚೆಕ್ ಗಳನ್ನು ಹಸ್ತಾಂತರಿಸಿದರು.