ಬೆಂಗಳೂರು : ವಿಪ್ರೋ ಸಿಇಒ ಥಿಯೆರ್ರಿ ಡೆಲಾಪೋರ್ಟ್ 2020-21ರ ಆರ್ಥಿಕ ವರ್ಷದಲ್ಲಿ 8.8 ಮಿಲಿಯನ್ ಡಾಲರ್(64 ಕೋಟಿ) ವೇತನವನ್ನು ಪಡೆದಿದ್ದಾರೆ ಎಂದು ಸಂಸ್ಥೆಯು ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಮಾಹಿತಿ ನೀಡಿದೆ.
ವಿಪ್ರೋ ಸಂಸ್ಥೆಗೆ ಸದಾ ಪೈಪೋಟೊ ನೀಡುವ ಪ್ರತಿಸ್ಪರ್ಧಿ ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್ ನ ಸಿಇಒ ಗಳಿಗಿಂತ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.
ಇದನ್ನೂ ಓದಿ : “ರಾಮನ ಹೆಸರಲ್ಲಿ ಅವ್ಯವಹಾರವಾಗಿಲ್ಲ’ : ಉತ್ತರ ಪ್ರದೇಶ ಡಿಸಿಎಂ ದಿನೇಶ್ ಶರ್ಮಾ ಸ್ಪಷ್ಟನೆ
2020 ಜುಲೈ 6 ರಂದು ವಿಪ್ರೋ ಸಂಸ್ಥೆಗೆ ಸಿಇಒ ನೇಮಕ ಆಗಿದ್ದರು. ಸಂಸ್ಥೆಯ ನೇತೃತ್ವ ವಹಿಸಿಕೊಂಡ ಥಿಯೆರ್ರಿ ಡೆಲಾಪೋರ್ಟ್ ಅವರಿಗೆ ಸಂಸ್ಥೆ ಕಡೆಯಿಂದ ವಾರ್ಷಿಕವಾಗಿ ಬರೋಬ್ಬರಿ 40 ಕೋಟಿ ವೇತನ ಸಿಗಲಿದ್ದು, ಮಾತ್ರವಲ್ಲದೇ, ಸುಮಾರು 14 ಕೋಟಿಯಷ್ಟು ಹಣ ಸಂಸ್ಥೆಯ ವಾರ್ಷಿಕ ಷೇರು ವಹಿವಾಟುಗಳ ಆದಾಯವೂ ಸಿಗಲಿದ್ದು, ಒಟ್ಟು 2020-21ರ ಆರ್ಥಿಕ ವರ್ಷದಲ್ಲಿ64 ಕೋಟಿಯಷ್ಟು ಹಣ ವಾರ್ಷಿಕ ವೇತನವಾಗಿ ದೊರೆತಿದೆ.
ಸಿಇಒ ಮತ್ತು ಎಂಡಿ ಸ್ಥಾನಕ್ಕೆ ಥಿಯೆರ್ರಿ ಅವರನ್ನು ಕಳೆದ ಮೇನಲ್ಲಿ ವಿಪ್ರೋ ಸಂಸ್ಥೆ ನೇಮಕ ಮಾಡಿಕೊಳ್ಳಲಾಗಿತ್ತು. ಇನ್ನು, ಜುಲೈ 5, 2025ರವರೆಗೆ ವಿಪ್ರೋ ಸಂಸ್ಥೆಯ ಸಿಇಒ ಆಗಿ ಆಡಳಿತ ವಹಿಸಲಿದ್ದಾರೆ.
ಬೆಂಗಳೂರು ಮೂಲದ ವಿಪ್ರೋ ಐಟಿ ಸಂಸ್ಥೆಗೆ ಡೆಲಾಪೋರ್ಟ್ ಸಿಇಒ ಆಗುವ ಮೊದಲು, ಫ್ರೆಂಚ್ ಮೂಲದ ಐಟಿ ದೈತ್ಯ ಸಂಸ್ಥೆ ಕ್ಯಾಪ್ಜೆಮಿನಿಯ ಸಿಇಒ ಆಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ : 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್ ಲಸಿಕಾ ಪ್ರಯೋಗ : ಏಮ್ಸ್