Advertisement

Assembly session ಉಭಯ ಸದನದಲ್ಲಿ ಶ್ರದ್ಧಾಂಜಲಿ

12:07 AM Dec 05, 2023 | Team Udayavani |

ಬೆಳಗಾವಿ: ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ, ರಜೌರಿಯಲ್ಲಿ ಹುತಾತ್ಮರಾದ ಕ್ಯಾಪ್ಟನ್‌ ಎಂ.ವಿ.ಪ್ರಾಂಜಲ್‌ ಸಹಿತ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸಲ್ಲಿಸಲಾಯಿತು.

Advertisement

ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್‌ ಯು.ಟಿ.ಖಾದರ್‌ ಅವರು, ಡಿ.ಬಿ.ಚಂದ್ರೇಗೌಡ, ಮಾಜಿ ಶಾಸಕ ಶ್ರೀರ‌ಂಗದೇವರಾಯಲು, ಸಿ.ವೆಂಕಟೇಶಪ್ಪ, ಶ್ರೀಕಾಂತಶೆಟ್ಟಪ್ಪ ಭೀಮಣ್ಣವರ, ವಿಲಾಸಬಾಬು ಆಲಮೇಲಕರ್‌, ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯ, ಸಹಕಾರ ಕ್ಷೇತ್ರದ ಭೀಷ್ಮ ಬಿ.ಎಸ್‌.ವಿಶ್ವನಾಥ್‌, ಪ್ರೊ.ಎಂ.ಆರ್‌. ಸತ್ಯನಾರಾಯಣ ರಾವ್‌, ವಿಜ್ಞಾನಿ ಡಾ| ವಿ.ಎಸ್‌.ಅರುಣಾಚಲಂ, ಡಾ| ಕಲ್ಯಂಪುಡಿ ರಾಧಾಕೃಷ್ಣ ರಾವ್‌, ಡಾ| ಎಂ.ಎಸ್‌.ಸ್ವಾಮಿನಾಥನ್‌, ಮಮತಾ ಗುಡೂರ, ಡಾ| ಕಮಲಾ ಹೆಮ್ಮಿಗೆ, ಪತ್ರಕರ್ತ ಜಿ.ಎನ್‌.ರಂಗನಾಥ ರಾವ್‌, ಹನುಮಣ್ಣನಾಯಕ ದೊರೆ ಹಾಗೂ ರಜೌರಿಯಲ್ಲಿ ಹುತಾತ್ಮರಾದ ಕ್ಯಾ| ಎಂ.ವಿ.ಪ್ರಾಂಜಲ್‌, ಕ್ಯಾ| ಶುಭಂ ಗುಪ್ತಾ, ಹವಲ್ದಾರ್‌ ಅಬ್ದುಲ್‌ ಮಜೀದ್‌, ಲಾನ್ಸ್‌ ನಾಯಕ್‌ ಸಂಜಯ್‌ ಬಿಸ್ಟ್‌, ಪ್ಯಾರಾಟ್ರೂಪರ್‌ ಸಚಿನ್‌ ಲಾರ್‌ ಅವರಿಗೆ ಸಂತಾಪ ಸಲ್ಲಿಸಿದರು.

ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್‌.ಅಶೋಕ, ಗೃಹ ಸಚಿವ ಡಾ| ಜಿ.ಪರಮೇಶ್ವರ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಸಿ.ಎನ್‌.ಬಾಲಕೃಷ್ಣ, ತಮ್ಮಯ್ಯ, ಬಸವರಾಜ ರಾಯರೆಡ್ಡಿ, ಬಿ.ಆರ್‌.ಪಾಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಮಾನಾಥ್‌ ಕೋಟ್ಯಾನ್‌, ಜನಾರ್ದನ ರೆಡ್ಡಿ, ಸಚಿವರಾದ ಶಿವರಾಜ ತಂಗಡಗಿ, ಎಚ್‌.ಕೆ.ಪಾಟೀಲ್‌ ಸಹಿತ ಹಲವರು ಸಂತಾಪ ಸೂಚಿಸಿದರು. ಎಂ.ವಿ.ಪ್ರಾಂಜಲ್‌ ಹೆಸರನ್ನು ಶಾಶ್ವತವಾಗಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರಿನ ಯಾವುದಾದರೊಂದು ವೃತ್ತಕ್ಕೆ ಅವರ ಹೆಸರು ಇಡುವಂತೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next