Advertisement

ಚೈತನ್ಯವಿದ್ದರೆ ಗೆಲುವು: ನಿರ್ಮಲಾನಂದನಾಥ ಶ್ರೀ

10:07 AM Nov 26, 2017 | Team Udayavani |

ಕಾವೂರು: ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲೂ ನಿರಾಸೆ ಹೊಂದಬಾರದು. ಆವಿಷ್ಕಾರ ಮನೋಭಾವದ ಮೂಲಕ ನಿರಂತರವಾಗಿ ಚೈತನ್ಯವನ್ನು ಗಳಿಸಿಕೊಂಡು ಬೆಳೆಯಬೇಕು ಎಂದು ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

Advertisement

ಕಾವೂರಿನ ಆದಿಚುಂಚನಗಿರಿ ಟ್ರಸ್ಟ್‌ ಇದರ ಬಿಜಿಎಸ್‌ ಕಂಪೋಸಿಟ್‌ ಪಿ.ಯು. ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾದ ‘ಸೃಷ್ಟಿ 2ಕೆ17’ ಅಂತರ್‌ ಕಾಲೇಜು ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಅಂಕವೊಂದೇ ಮಾನದಂಡವಲ್ಲ. ಪೋಷಕರು ಮಕ್ಕಳಲ್ಲಿರುವ ಅವಿರತ ಪ್ರಯತ್ನವನ್ನು ಅರಿತು ಅದಕ್ಕೆ ಪ್ರೋತ್ಸಾಹ ನೀಡಬೇಕು. ಮಕ್ಕಳು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಬುದ್ಧಿವಂತರಾಗಿ ಸಮಾಜಕ್ಕೆ ತಾನು ಏನಾದರೂ ಕೊಡುಗೆ ನೀಡಲು ಬಯಸುತ್ತೇನೆ ಎನ್ನುವ ಗುರಿ ಛಲದೊಂದಿಗೆ ಬೆಳೆಯಬೇಕು ಎಂದು ಹೇಳಿದರು.

ಮಂಗಳೂರು ವಿವಿ ವೈಸ್‌ ಚಾನ್ಸಿಲರ್‌ ಪ್ರೊ| ಕೆ.ಭೈರಪ್ಪ ಮಾತನಾಡಿ, ಇತ್ತೀಚೆಗೆ ವಿಜ್ಞಾನಗಳ ಅವಿಷ್ಕಾರಗಳಿಂದ ತಂತ್ರಜ್ಞಾನ ಆಧಾರಿತ ಶಿಕ್ಷಣಗಳು ಹೆಚ್ಚು ಮಹತ್ವ ಪಡೆಯುತ್ತಿವೆ. ಹೀಗಾಗಿ ಇದು ಶಿಕ್ಷಕ ವರ್ಗಕ್ಕೆ ಸವಾಲಿನ ಕ್ಷೇತ್ರವಾಗುತ್ತಿದೆ. ಇದಕ್ಕೆ ಪೂರಕವಾಗಿ ಶಿಕ್ಷಕರು ತಯಾರಾಗುವುದು ಅನಿವಾರ್ಯ ಎಂದರು.

ಜಿಲ್ಲಾ ಡಿಡಿಪಿಐ ಶಿವರಾಮಯ್ಯ, ಬಿಜಿಎಸ್‌ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಮ್ಯಾನೇಜರ್‌ ಸುಬ್ಬ ಕಾರಡ್ಕ, ಪ್ರಾಂಶುಪಾಲೆ ಪ್ರಮೀಳಾ, ರೇಶ್ಮಾ ನಾಯರ್‌ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಸುಲತಾ ರಾಜಾರಾಮ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಷಾ ದೇವಿ ಸ್ವಾಗತಿಸಿದರು. ಸುಮಾ ವಂದಿಸಿದರು. ಮಿಲನಾ ನಿರೂಪಿಸಿದರು.

ವಿವಿಧ ಮಾದರಿ ಪ್ರದರ್ಶನ
ನಗರದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿ, ಮಹಿಳೆಯರ ಅಪಹರಣ, ಕಳ್ಳಸಾಗಟ ಪತ್ತೆಗೆ ಸೆನ್ಸಾರ್‌ ಅಳವಡಿಕೆ, ಪೊಲೀಸರಿಗೆ ಕ್ಷಿಪ್ರ ಮಾಹಿತಿ ನೀಡುವ ವ್ಯವಸ್ಥೆ, ಪರಿಸರ ಮಾಲಿನ್ಯ ತಡೆಗೆ ಕ್ರಮ, ಜಲ ಸಂರಕ್ಷಣೆಯ ಮಾದರಿ, ಅರಣ್ಯ ನಾಶ ತಡೆಗೆ ಕ್ರಮ ಹೀಗೆ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವೈಜ್ಞಾನಿಕ ಮಾದರಿ ಗಮನ ಸೆಳೆಯಿತು. ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ತಮ್ಮ ಅವಿಷ್ಕಾರದ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next