Advertisement
– ಹೀಗೆ ಹೇಳುತ್ತಲೇ, ಆ ಕ್ಷಣ ಕಣ್ತುಂಬಿಕೊಂಡರು ವಿನೋದ್ ಪ್ರಭಾಕರ್. ಅವರ ಅಭಿನಯದ “ಕ್ರ್ಯಾಕ್’ ಇಂದು ತೆರೆಗೆ ಬಂದಿದೆ. ಈ ಕುರಿತು ಮಾತಿಗೆ ಸಿಕ್ಕ ವಿನೋದ್ ಪ್ರಭಾಕರ್, ತಂದೆ ಟೈಗರ್ ಪ್ರಭಾಕರ್ ಮೇಲಿನ ಪ್ರೀತಿ ಅವರ ಅಭಿಮಾನಿಗಳು ತೋರುವ ಅಭಿಮಾನ ಕುರಿತು ಹೇಳುತ್ತಾ ಹೋದರು.
ಇಲ್ಲ. ತೆರೆಯ ಮೇಲೆ ನನ್ನ ನೋಡಿದವರು ಅಪ್ಪನಿಗೆ ಹೋಲಿಕೆ ಮಾಡ್ತಾರೆ. ಆದರೆ, ನಾನು ಅವರನ್ನ ಬ್ರೇಕ್ ಡೋಕ್ಕಾಗಲ್ಲ. ಅವರ ರೀತಿ ಡೈಲಾಗ್ ಹೇಳಬಾರದು ಅಂತ ಎಷ್ಟೋ ಸಲ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. “ಕ್ರ್ಯಾಕ್’ ಮಾಸ್ ಪ್ರೇಕ್ಷಕರಿಗಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ
ಇಷ್ಟವಾಗುವಂತಹ ಒಂದೊಳ್ಳೆಯ ಸಂದೇಶವೂ ಇದೆ’ ಎನ್ನುತ್ತಾರೆ ವಿನೋದ್. “ನಾನು ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಲೇಬೇಕು. ನನಗೇ ಅಂತ ಇರುವ ಎಲ್ಲಾ ಅಭಿಮಾನಿಗಳು ಅಪ್ಪನ ಅಭಿಮಾನಿಗಳೇ. ನಾನು “ಟೈಸನ್’ ಸಿನಿಮಾಗೂ ಮುನ್ನ ಜೀರೋ ಆಗಿದ್ದೆ. ವಿನೋದ್ ಪ್ರಭಾಕರ್ ಏನೂ ಇರಲಿಲ್ಲ ಆದರೆ, “ಟೈಸನ್’ ಚಿತ್ರ ನೋಡಿ, ಗೆಲ್ಲಿಸಿದ್ದು ಕನ್ನಡಿಗರು. ಒಳ್ಳೇ ಸಿನಿಮಾ ಮಾಡಿದರೆ, ನೋಡುಗರಿಗೆ ಹೀರೋ, ಹೀರೋಯಿನ್, ನಿರ್ದೇಶಕರು ಯಾರೆಂಬುದು ಮುಖ್ಯ ಆಗಲ್ಲ. “ಟೈಸನ್’ ಆ ಸಾಲಿಗೆ ಸೇರಿದ ಚಿತ್ರ. ಅದನ್ನು ನೋಡಿ ಗೆಲ್ಲಿಸಿದ್ದು, ಇದೇ ಕನ್ನಡಿಗರು. ಆ ನಂಬಿಕೆ ಮೇಲೆ ಸಕ್ಸಸ್ ಕಾಂಬಿನೇಷನ್‌ನಲ್ಲೇ “ಕ್ರ್ಯಾಕ್’ ಮಾಡಿದ್ದೇವೆ. ನಿರ್ದೇಶಕ ರಾಮ್‌ನಾರಾಯಣ್ ಅವರ ಮೇಲೆ ನಂಬಿಕೆ ಇತ್ತು. ಅದನ್ನು ಉಳಿಸಿಕೊಂಡಿದ್ದಾರೆ. ಪ್ರತಿ ಫ್ರೆಮ್‌ನಲ್ಲೂ ಮನರಂಜನೆಯ ಹೂರಣವಿದೆ. ಇಲ್ಲೀಗ ನಾನು ಜಾಸ್ತಿ ಮಾತಾಡಿದರೆ, ಓವರ್ ಕಾನ್ಫಿಡೆನ್ಸ್ ಎನಿಸುತ್ತೆ. ಜನರೇ “ಕ್ರ್ಯಾಕ್’ ಬಗ್ಗೆ ಮಾತಾಡ್ತಾರೆ, ರಿಲೀಸ್ ಬಳಿಕ ನಾನು ಮಾತಾಡ್ತೀನಿ ಎಂದು ಹೇಳುತ್ತಾರೆ ವಿನೋದ್ ಪ್ರಭಾಕರ್.
Related Articles
ಪ್ರತಿ ಥಿಯೇಟರ್, ಡಿಸ್ಟಿಬ್ಯೂಟರ್ ಬಳಿ ಹೋಗಿ ಸಿನಿಮಾ ರಿಲೀಸ್ ಮಾಡಿ ಅಂತ ಕೇಳಿದ ದಿನಗಳು ಇನ್ನೂ ಮರೆತಿಲ್ಲ. ನಾನಿಲ್ಲಿ ಯಾರನ್ನೂ ದೂರುತ್ತಿಲ್ಲ. ಒಂದು ಮೊಬೈಲ್ ಖರೀದಿಸಬೇಕಾದರೆ, ಏನಿದೆ, ಏನಿಲ್ಲ ಅಂತ ಹತ್ತಾರು ಸಲ ಚೆಕ್ ಮಾಡ್ತೀವಿ. ಒಂದು ಸಿನಿಮಾ ವಿತರಣೆ ಮಾಡೋರು,
ರಿಟರ್ನ್ಸ್ ಬಗ್ಗೆ ಯೋಚಿಸುವುದು ತಪ್ಪಲ್ಲ. ಅಂದು “ಟೈಸನ್’ ಸಾಬೀತುಪಡಿಸಿತು. ನನಗೆ ಒನ್, ಟು, ಥ್ರಿà ಅಂತ ಹೋಗೋದು ದೊಡ್ಡ ವಿಷಯವಲ್ಲ. ಆದರೆ, ಅಂದು “ಜೀರೋ’ದಲ್ಲಿದ್ದವನು ಕೌಂಟ್‌ಗೆ ಸಿಕ್ಕೆ ಅನ್ನೋದೇ ನನ್ನ ದೊಡ್ಡ ಯಶಸ್ಸು’ ಎನ್ನುತ್ತಾರೆ ವಿನೋದ್.
Advertisement
“ಇನ್ನು, “ಟೈಸನ್’ ನನಗೆ ಸಿಕ್ಕ ಮೊದಲ ಸಕ್ಸಸ್. ಆ ನಿರ್ಮಾಪಕರಿಗೆ ಒಂದು ರೂಪಾಯಿ ಸಂಭಾವನೆ ಪಡೆದು ಚಿತ್ರ ಮಾಡಿಕೊಡ್ತೀನಿ ಅಂತ ಹೇಳಿದ್ದೇನೆ. ಖಂಡಿತ ಮಾಡ್ತೀನಿ. ನಮ್ಮ ಮೇಲೆ ನಂಬಿಕೆ ಇಟ್ಟು, ಕೋಟಿ ಹಾಕಿದ್ದರು. ಹಾಗಾಗಿ, ಇಂದು “ಕ್ರ್ಯಾಕ್’ ರಿಲೀಸ್‌ಗೆ ಮುನ್ನವೇ ಈ ಲೆವೆಲ್ ಬಿಜಿನೆಸ್ ಆಗಿದೆ. ಇದೇ ಮೊದಲ ಸಲ ಬಿಡುಗಡೆ ಮುನ್ನವೇ ನಿರ್ಮಾಪಕರು ಲಾಭದಲ್ಲಿದ್ದಾರೆ ಅನ್ನೋದೇ ಖುಷಿಯ ವಿಷಯ. ಅಂತಹಅನ್ನದಾತರಿಗೆ ನಾನು ಚಿರಋಣಿ. ಮುಂದೆ ನನ್ನ ಸಿನಿಮಾ ವಿತರಣೆ ಮಾಡುವವರಿಗೆ ಲಾಸ್ ಆಗಲ್ಲ ಎಂಬ ನಂಬಿಕೆಯ ಚಿತ್ರ ಕೊಡೋದೇ ನನ್ನ ಟಾರ್ಗೆಟ್. ಆ್ಯಕ್ಷನ್ ಜಾನರ್‌ನಲ್ಲಿ ಮನರಂಜನೆ ಬಿಟ್ಟು ಹೋಗಲ್ಲ. “ಕ್ರ್ಯಾಕ್’ ನನಗೆ ದೊಡ್ಡ ನಂಬಿಕೆ ಮತ್ತು ಧೈರ್ಯ ಕೊಟ್ಟಿದೆ’ ಎನ್ನುತ್ತಲೇ ಮಾತು
ಮುಗಿಸುತ್ತಾರೆ ವಿನೋದ್. ವಿಜಯ್ ಭರಮಸಾಗರ