Advertisement
ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ವೈನ್ ವಹಿವಾಟು 9 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯ ಮಿತ ಮಾಹಿತಿ ಪ್ರಕಾರ 2018 ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯಕ್ಕೆ 201 ಕೋಟಿ ರೂ ವಹಿ ವಾಟು ನಡೆದಿತ್ತು. ಈ ಬಾರಿ 2019 ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯಕ್ಕೆ 210 ಕೋಟಿ ರೂ. ಷ್ಟು ವಹಿವಾಟಾಗಿದ್ದು, 5.42 ಲಕ್ಷ ಬಾಕ್ಸ್ ವೈನ್ ಮಾರಾಟವಾಗಿದೆ. ವಿವಿಧ ವೈನ್‌ಗಳ ಪೈಕಿ ಫ್ರೂಟ್ ವೈನ್‌ನ ಬೇಡಿಕೆ ಹೆಚ್ಚಿದೆ. ಆರ್ಥಿಕ ವರ್ಷಾಂತ್ಯಕ್ಕೆ 270 ಕೋಟಿ ರೂ.ತಲುಪುವ ನಿರೀಕ್ಷೆಯನ್ನು ದ್ರಾಕ್ಷಾರಸ ಮಂಡಳಿ ಹೊಂದಿದೆ.
Related Articles
Advertisement
ಈ ವಹಿವಾಟನ್ನು 300 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಿದ್ದು, ಅದರ ಭಾಗವಾಗಿ ಈ ಬಾರಿ ಹೊಸ ಭಾಗಗಳಲ್ಲಿ ವೈನ್ ಮೇಳ ನಡೆಸಿ ಅಲ್ಲಿನ ಜನರಿಗೆ ತರಹೇವಾರಿ ವೈನ್‌ಗಳ ರುಚಿ ತೋರಿಸಲು ಮಂಡಳಿ ತೀರ್ಮಾನಿಸಿದೆ. ಹೀಗಾಗಿ, ಒಮ್ಮೆಯೂ ಮೇಳ ನಡೆಯದ ದಾವಣ ಗೆರೆ, ಕಲಬುರಗಿ, ತುಮಕೂರು, ಧಾರವಾಡದಲ್ಲಿ 3 ದಿನಗಳ ಅಂತಾರಾಷ್ಟ್ರೀಯ ಮೇಳ ಹಮ್ಮಿಕೊಳ್ಳಲಿದೆ. ಮೇಳಗಳ ಆಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫೆಬ್ರವರಿಯಿಂದ ಡಿಸೆಂಬರ್ ಒಳಗೆ 4 ಕಡೆ ಮೇಳ ನಡೆಯಲಿದೆ. ಈ ವರ್ಷದ ಮೊದಲ ಮೇಳ ಫೆಬ್ರವರಿ 3ನೇ ವಾರದಲ್ಲಿ ದಾವಣಗೆರೆಯುಲ್ಲಿ ಆರಂಭವಾಗಲಿದೆ.
ಮೇಳದಲ್ಲಿ ಏನೇನಿರುತ್ತೆ?: ಮೇಳದಲ್ಲಿ ರಾಜ್ಯದ 17 ವೈನರಿಗಳು, ಅಮೇರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ವಿವಿಧ ದೇಶಗಳ 12 ಕಂಪನಿಗಳು ತಮ್ಮ ಉತ್ಪನ್ನಗಳೊಂದಿಗೆ ಭಾಗವಹಿಸಲಿವೆ. ನಿತ್ಯ ಬೆಳಗ್ಗೆ 11 ಗಂಟೆ ಯಿಂದ ರಾತ್ರಿ 9 ಗಂಟೆವರೆಗೆ ಮೇಳಕ್ಕೆ ಸಾರ್ವಜನಿಕರಿಗೆ ಪ್ರವೇಶ ವಿದೆ. ದಿನದ ಪ್ರವೇಶ ಶುಲ್ಕ 20 ರೂ. ನಿಗದಿ ಪಡಿಸಲಾಗಿದೆ. ಸಾಮೂಹಿಕವಾಗಿ ದ್ರಾಕ್ಷಿ ತುಳಿಯುವ ಆಟ(ವೈನ್ ಸ್ಟಾಂಪಿಂಗ್), ನಿರಂತರ ಸಾಂಸ್ಕೃ ತಿಕ ಕಾರ್ಯಕ್ರಮಗಳು, ಕುರು ಕಲು ತಿಂಡಿ, ಆಹಾರ ಮಳಿಗೆ ಗಳೂ ಇರಲಿದ್ದು, ವಿವಿಧ ಕಂಪನಿಗಳಿಂದ ತಮ್ಮ ಬ್ರಾಂಡ್ ನ ರುಚಿ ನೋಡಲು ಕೊಡುವ ಉಚಿತ ವೈನ್ ಮೇಳದ ಮಜಾ ವನ್ನು ಹೆಚ್ಚಿಸಲಿವೆ. ಜತೆಗೆ ಮನೆಯ ಲ್ಲಿಯೇ ವೈನ್ ಹೇಗೆ ತಯಾರಿಸಬೇಕು ಎಂಬುದರ ಕುರಿತು ಪ್ರಾತ್ಯಕ್ಷಿಕೆ ನೀಡಲಿದೆ.
ವೈನ್ ವಹಿವಾಟು ಹಾಗೂ ವೈನ್ ದ್ರಾಕ್ಷಿ ಬೆಳೆಯುವ ಪ್ರದೇಶ ಹೆಚ್ಚಳವಾಗಿದೆ. ವೈನ್ ಜಾಗೃತಿ ಜತೆಗೆ ವಹಿವಾಟು ಹೆಚ್ಚಿಸಲು ಈ ಬಾರಿ ಹೊಸ ಪ್ರದೇಶಗಳಲ್ಲಿ ಮೇಳ ಆಯೋಜಿಸಲಾಗುತ್ತಿದೆ. ಮೇಳದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ದಿನಾಂಕ ಸದ್ಯದಲ್ಲಿಯೇ ನಿಗದಿ ಮಾಡಲಾಗುತ್ತದೆ. -ಟಿ.ಸೋಮು, ವ್ಯವಸ್ಥಾಪಕ ನಿರ್ದೇಶಕ, ದ್ರಾಕ್ಷಾರಸ ಮಂಡಳಿ * ಜಯಪ್ರಕಾಶ್ ಬಿರಾದಾರ್