ವಿಂಡೋಸೀಟ್.. ಈ ಸಿನಿಮಾ ಸೆಟ್ಟೇರಿದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲೇ ಇದೆ. ಅದ್ರಲ್ಲೂ ಟೈಟಲ್, ಟೀಸರ್, ಮೇಕಿಂಗ್ ನಿಂದಲೇ ಎಲ್ಲರ ಚಿತ್ತ ಕದ್ದಿದ್ದ ಸಿನಿಮಾ, ಇದೀಗ ಮತ್ತೊಂದು ಹಾಡು ಬಿಟ್ಟು ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ನೇರ ಪಡ್ಡೆ ಹೈಕ್ಳ ಹಾರ್ಟ್ ಗೆ ಕೈ ಹಾಕಿದೆ.
ಜಾಝ್ ಶೈಲಿಯಲ್ಲಿ ಸೆರಂಡರ್ ಹಾಡನ್ನ ಸೃಷ್ಟಿಸಿದೆ. ಈ ಸಾಂಗ್ ಕೇಳ್ತಾ ಇದ್ರೆ ಹಾಗೇ ಹುಡುಗ್ರು ಕಳೆದೋಗ್ತಾ ಇದ್ದಾರೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಇಂಥ ಪ್ರಯೋಗ ಮಾಡಿದ್ದಾರೆ ನರ್ದೇಶಕಿ ಶೀತಲ್ ಶೆಟ್ಟಿ.
ಹೊಸ ಪ್ರಯೋಗಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯರ್ ಇಬ್ಬರು ಬ್ಯೂಟಿಫುಲ್ ನಟಿಮಣಿಯರೆರ. ಆದ್ರೆ ಸೆರಂಡರ್ ಹಾಡಲ್ಲಿ ಅವರಿಬ್ಬರ ಸೌಂದರ್ಯವನ್ನ ದುಪ್ಪಟ್ಟಾಗಿ ತೋರಿಸಿದ್ದಾರೆ. ಸೌಂದರ್ಯದ ಜೊತೆ ಜೊತೆಗೆ ಮೋಹಕ ಲುಕ್ ಮತ್ತೇರಿಸುವಂತೆ. ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಕಜತ್ ರೆಸ್ಪಾನ್ಸ್ ಪಡೆದುಕೊಂಡಿದೆ.
ಶೀತಲ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರೋ ವಿಂಡೋಸೀಟ್ ಅದಾಗಲೇ ಚಿತ್ರೀಕರಣ ಕಂಪ್ಲೀಟ್ ಮಾಡಿಕೊಂಡು, ಪೋಸ್ಟ್ ಪ್ರೊಡಕ್ಷನ್ ಕೆಲವನ್ನು ಮುಗಿಸಿದೆ. ಇನ್ನೇನಿದ್ರು ರಿಲೀಸ್ ಮಾಡುವುದೊಂದೆ ಬಾಕಿಯಿದೆ. ಈಗಾಗ್ಲೇ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿರೋ ಸಿನಿಮಾ ಹಾಡು ಬಿಡುಗಡೆ ಮಾಡಿ, ಮತ್ತಷ್ಟೂ ಕುತೂಹಲ ಹೆಚ್ಚಿಸಿದೆ.
ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ವಿಂಡೋಸೀಟ್ ಗೆ ಸಂಗೀತ ನೀಡಿದ್ದಾರೆ. ಸದ್ಯ ರಿಲೀಸ್ ಆಗಿರೋ ಸೆರಂಡರ್ ಹಾಡಿಗೆ ಅದ್ಭುತವಾಗಿ ಸಂಗೀತ ಕಟ್ಟಿಕೊಟ್ಟಿದ್ದು, ಮಹೇಶ್ ರಘುನಂದನ್ ಸಾಹಿತ್ಯ ಬರೆದ ಹಾಡಿಗೆ, ಸೌಙದರ್ಯ ಜಯಚಂದ್ರನ್ ಧ್ವನಿಯಾಗಿದ್ದಾರೆ.
ಕೆ ಎಸ್ ಕೆ ಶೋ ರೀಲ್ ಬ್ಯಾನರ್ ನಡಿ ಜಾಕ್ ಮಂಜು ವಿಂಡೋಸೀಟ್ ಗೆ ಬಂಡವಾಳ ಹೂಡಿದ್ದಾರೆ. ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್ ಮಾಡಿದ್ದು, ರಿತ್ವಿಕ್ ಸಂಕಲನ ಮಾಡಿದ್ದಾರೆ.
ಆದಿಲಕ್ಷ್ಮೀ ಪುರಾಣ ಖ್ಯಾತಿಯ ನಿರೂಪ್ ಭಂಡಾರಿ ಈ ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯರ್ ನಾಯಕಿಯಾಗಿದ್ದಾರೆ. ಉಳಿದಂತೆ ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ.