Advertisement

ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು

03:33 PM Jul 16, 2019 | Team Udayavani |

ಕುಂದಾಪುರ/ಶಿವಮೊಗ್ಗ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಉತ್ತಮ ಪ್ರಮಾಣದ ಮತದಾನವಾಗಿದ್ದು, ಬೈಂದೂರಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಮುನ್ನಡೆ ಸಿಗಲಿದ್ದು, ಇತರ 7 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ. ಒಟ್ಟಾರೆ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹಾಲಿ ಸಂಸದ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಕುಂದಾಪುರದ ನೆಂಪುವಿನಲ್ಲಿ ಮತ್ತು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನು
ದ್ದೇಶಿಸಿ ಅವರು ಮಾತನಾಡಿದರು. “ಜೀವಜಲ’ ಸರಣಿಗೆ ಶ್ಲಾಘನೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಕುಡಿಯುವ ನೀರಿನ ಸಮಸ್ಯೆ ಕುರಿತ “ಉದಯವಾಣಿ’ ಪ್ರಕಟಿಸುತ್ತಿರುÊ ಸರಣಿ ವರದಿ “ಜೀವಜಲ’ ಅಂಕಣಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿ, ವಿಶೇಷ ಸಭೆ ಕರೆಯಲು ಹೇಳಿದ್ದೆ. ಪ್ರಸ್ತುತ ನೀತಿಸಂಹಿತೆ ಜಾರಿಯಲ್ಲಿದ್ದರೂ ನೀರಿನ ಸಮಸ್ಯೆಯನ್ನು ಆದ್ಯತೆ ನೆಲೆಯಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿಗಳಾದ ಬಾಲಚಂದ್ರ ಭಟ್‌, ದೀಪಕ್‌ ಕುಮಾರ್‌ ಶೆಟ್ಟಿ, ರೈತ ಮೋರ್ಚಾದರಾಜ್ಯ ನಾಯಕ ದತ್ತಾತ್ರೇಯ, ಅರುಣ್‌, ಜಿ.ಪಂ. ಸದಸ್ಯರಾದ ರೋಹಿತ್‌ ಕುಮಾರ್‌ ಶೆಟ್ಟಿ, ಶೋಭಾ ಜಿ. ಪುತ್ರನ್‌ ಉಪಸ್ಥಿತರಿದ್ದರು.

ಮೈತ್ರಿಕೂಟದವರಿಂದ ಹಣ ಹಂಚಿಕೆ: ಆರೋಪ
ಶಿವಮೊಗ್ಗ: ನನ್ನನ್ನು ಸೋಲಿಸಲು ರಾಜ್ಯದ ಪ್ರಮುಖ ಸಚಿವರು ಕ್ಷೇತ್ರದಲ್ಲಿ ಠಿಕಾಣಿ ಹೂಡಿ ದ್ದರು. ಅಲ್ಲದೆ ಮೈತ್ರಿಕೂಟ ಅಭ್ಯರ್ಥಿಗಳು ಹಣ ಹಂಚಿದ್ದಾರೆ ಎಂದು ರಾಘವೇಂದ್ರ ಆರೋಪಿಸಿದರು. ಟಯರ್‌ನಲ್ಲಿಟ್ಟು ಸಾಗಿಸುತ್ತಿದ್ದ ಹಣವನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಭದ್ರಾವತಿಯಲ್ಲಿ ಅಪ್ಪಾಜಿ ಗೌಡರ ಮಗ ಹಣ ಹಂಚುವಾಗ ಸಿಕ್ಕಿ ಬಿದ್ದಿದ್ದಾರೆ. ಇವೆಲ್ಲವೂ ಮೈತ್ರಿಕೂಟದ ಅಕ್ರಮಗಳಿಗೆ ಸಾಕ್ಷಿಗಳು. ಆದರೆ ವಾಮಮಾರ್ಗದ ತಂತ್ರಕ್ಕೆ ಮತದಾರರು ಮರುಳಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next