ಲಂಡನ್: ಸೆರೆನಾ ವಿಲಿಯಮ್ಸ್ ಪಾಲಿಗೆ “ವಿಂಬಲ್ಡನ್ ಕಮ್‌ಬ್ಯಾಕ್’ ಆಘಾತಕಾರಿಯಾಗಿ ಪರಿಣಮಿಸಿದೆ. ಅವರು ಫ್ರಾನ್ಸ್‌ನ ಸಾಮಾನ್ಯ ಆಟಗಾರ್ತಿ, ವಿಶ್ವ ರ್‍ಯಾಂಕಿಂಗ್‌ನಲ್ಲಿ 115ರಷ್ಟು ಕೆಳ ಕ್ರಮಾಂಕದಲ್ಲಿರುವ ಹಾರ್ಮನಿ ಟಾನ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲಿನೇಟು ಅನುಭವಿಸಿ ಹೊರಬಿದ್ದರು. ಇದರೊಂದಿಗೆ ಟಾನ್ ಅವರ ವಿಂಬಲ್ಡನ್ ಪದಾರ್ಪಣೆ ಸ್ಮರಣೀಯವೆನಿಸಿತು.
ಹಾರ್ಮನಿ ಟಾನ್ ವಿರುದ್ಧ 3 ಗಂಟೆ, 10 ನಿಮಿಷಗಳ ಮ್ಯಾರಥಾನ್ ಹೋರಾಟ ನಡೆಸಿದ ಸೆರೆನಾ, ಅಂತಿಮವಾಗಿ 5-7, 6-1, 6-7 (7-10) ಅಂತರದ ಸೋಲುಂಡರು.
97ನೇ ರ್‍ಯಾಂಕಿಂಗ್ ಆಟಗಾರ್ತಿ ಜರ್ಮನಿಯ ಜೂಲ್ ನೈಮೀಯರ್ ದ್ವಿತೀಯ ಸುತ್ತಿನಲ್ಲಿ ನಂ.3 ಖ್ಯಾತಿಯ ಎಸ್ತೋನಿಯಾದ ಆಟಗಾರ್ತಿ ಅನ್ನಾ ಕೊಂಟಾವೀಟ್‌ಗೆ 6-4, 6-0 ಅಂತರದಿಂದ ಆಘಾತವಿಕ್ಕಿದರು.
ಜೊಕೋ ವಿಜಯ
ನೊವಾಕ್ ಜೊಕೋವಿಕ್ ಆಸ್ಟ್ರೇಲಿಯದ ಥನಾಸಿ ಕೋಕಿನಾಕಿಸ್ ಅವರನ್ನು 6-1, 6-4, 6-2 ಅಂತರದಿಂದ ಮಣಿಸಿ 3ನೇ ಸುತ್ತಿ ಗೇರಿ ದರು. ಫ್ರೆಂಚ್ ಓಪನ್ ಫೈನಲಿಸ್ಟ್ ಕ್ಯಾಸ್ಪರ್ ರೂಡ್ ಇಲ್ಲಿ 2ನೇ ಸುತ್ತಿನಲ್ಲೇ ಎಡವಿದರು.