Advertisement

Wimbledon 2023: 9 ನೇ ಬಾರಿ ಫೈನಲ್ ಗೆ ಹೆಜ್ಜೆ ಹಾಕಿದ ನೊವಾಕ್ ಜೊಕೋವಿಕ್‌

10:40 PM Jul 14, 2023 | Team Udayavani |

ಲಂಡನ್‌: ಹಾಲಿ ಚಾಂಪಿಯನ್‌ ಸೆರ್ಬಿಯಾದ ನೊವಾಕ್‌ ಜೊಕೋವಿಕ್‌ ಅವರು 2023ರ ವಿಂಬಲ್ಡನ್‌ ಪಂದ್ಯಾವಳಿಯ ಫೈನಲ್‌ ತಲುಪಿದ್ದಾರೆ. ಶುಕ್ರವಾರ(ಜುಲೈ 14) ನಡೆದ ಮೊದಲ ಪುರುಷರ ಸಿಂಗಲ್ಸ್ ಸೆಮಿ-ಫೈನಲ್‌ನಲ್ಲಿ ಇಟಲಿಯ 21 ವರ್ಷದ ಜಾನಿಕ್ ಸಿನ್ನರ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ ನಂತರ ತನ್ನ 9 ನೇ ವಿಂಬಲ್ಡನ್ ಫೈನಲ್‌ಗೆ ಹೆಜ್ಜೆ ಹಾಕಿದರು.2 ಗಂಟೆ 47 ನಿಮಿಷಗಳ ಆಟದಲ್ಲಿ ಸಿನ್ನರ್ ಅವರನ್ನು 6-3, 6-4, 7-6 (4) ರಿಂದ ಸೋಲಿಸಿದರು.

Advertisement

ಜೊಕೋವಿಕ್‌ ಸತತ 8ನೇ ವಿಂಬಲ್ಡನ್ ಸೆಮಿಫೈನಲ್ ಗೆದ್ದುಕೊಂಡಿದ್ದರಿಂದ ಇದು ದಾಖಲೆಯ 35ನೇ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಲಿದೆ . ಅವರು ವಿಶ್ವ ನಂ. 1 ಕಾರ್ಲೋಸ್ ಅಲ್ಕರಾಜ್ ಮತ್ತು ವಿಶ್ವ ನಂ. 3 ಡೇನಿಯಲ್ ಮೆಡ್ವೆಡೆವ್ ನಡುವಿನ ಎರಡನೇ ಸೆಮಿಫೈನಲ್ ವಿಜೇತರನ್ನು ರವಿವಾರದ ಫೈನಲ್‌ನಲ್ಲಿ ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next