Advertisement

ವಿಂಬಲ್ಡನ್‌ ಪಂದ್ಯ ಆಡಿದ 4.5 ತಿಂಗಳ ಗರ್ಭಿಣಿ

03:45 AM Jul 06, 2017 | |

ಲಂಡನ್‌: ಲಕ್ಸೆಂಬರ್ಗ್‌ನ 4.5 ತಿಂಗಳ ಗರ್ಭಿಣಿ ಮಾಂಡಿ ಮಿನೆಲ್ಲಾ ಅವರು ವಿಂಬಲ್ಡನ್‌ ಟೆನಿಸ್‌ ಕೂಟದ ಮೊದಲ ಸುತ್ತಿನಲ್ಲಿ ಆಡುವ ಮೂಲಕ ಸುದ್ದಿಯಾಗಿದ್ದಾರೆ. ಇಟಲಿಯ ಫ್ರಾನ್ಸಿಸ್ಕಾ ಶಿಯಾವೋನ್‌ ವಿರುದ್ಧ ನಡೆದ ಮೊದಲ ಸುತ್ತಿನಲ್ಲಿ ಮಿನೆಲ್ಲಾ 1-6, 1-6 ಸೆಟ್‌ಗಳಿಂದ ಸೋಲನ್ನು ಕಂಡಿದ್ದಾರೆ. 31ರ ಹರೆಯದ ಅವರು ಸೆರೆನಾ ವಿಲಿಯಮ್ಸ್‌ ಮತ್ತು ವಿಕ್ಟೋರಿಯಾ ಅಜರೆಂಕಾ ಜತೆ ಟೆನಿಸ್‌ ಅಮ್ಮಂದಿರ ಸಾಲಿಗೆ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ.

Advertisement

ವಿಂಬಲ್ಡನ್‌ ಈ ಋತುವಿನ ನನ್ನ ಕೊನೆಯ ಕೂಟವಾಗಿದೆ ಎಂದು ಮಿನೆಲ್ಲಾ ಹೇಳಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಸಿಂಗಲ್ಸ್‌ನಲ್ಲಿ ಸೋತಿರುವ ಮಿನೆಲ್ಲಾ ಅವರು ವನಿತೆಯರ ಡಬಲ್ಸ್‌ನಲ್ಲಿ ಲಾತ್ವಿಯಾದ ಅನಾಸ್ತಾಸಿಜಾ ಸೆವಾಸ್ಟೋವಾ ಅವರ ಜತೆ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next