Advertisement
ಇದಕ್ಕೂ ಮುನ್ನ ಜೂಲಿಯಾ ಜಾಜ್ ಕಳೆದ 5 ವಿಂಬಲ್ಡನ್ ಕೂಟ ಗಳಲ್ಲಿ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದ್ದರು. ಕೊನೆಗೂ 42 ಗ್ರ್ಯಾನ್‌ಸ್ಲಾಮ್ ಪಂದ್ಯಗಳನ್ನು ಆಡಿದ ಬಳಿಕ ಸೆಮಿಫೈನಲ್ ಅವಕಾಶ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಸೆರೆನಾ ವಿರುದ್ಧ ಇವರ ಆಟ ನಡೆಯುವುದು ಕಷ್ಟ ಎಂಬುದು ಟೆನಿಸ್ ಪಂಡಿತರ ಅಭಿಪ್ರಾಯ. ಇನ್ನೊಂದೆಡೆ ಸೆರೆನಾ ವಿಲಿಯಮ್ಸ್ ಕೂಡ 3 ಸೆಟ್‌ಗಳ ಕಾದಾಟ ನಡೆಸ ಬೇಕಾಯಿತು. ಇಟಲಿಯ ಶ್ರೇಯಾಂಕ ರಹಿತ ಆಟಗಾರ್ತಿ ಕ್ಯಾಮಿಲಾ ಜಾರ್ಜಿ ವಿರುದ್ಧ ಅವರು 3-6, 6-3, 6-4 ಅಂತರದ ಗೆಲುವು ಕಂಡರು.ದಿನದ ಇನ್ನೊಂದು ಸೆಮಿಫೈನಲ್ ಪಂದ್ಯ ಆ್ಯಂಜೆಲಿಕ್ ಕೆರ್ಬರ್ ಮತ್ತು ಜೆಲೆನಾ ಒಸ್ಟಾಪೆಂಕೊ ನಡುವೆ ನಡೆಯಲಿದೆ.
ಮಾಜಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೋವಿಕ್ ಪುರುಷರ ಸಿಂಗಲ್ಸ್ ವಿಭಾಗದಿಂದ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರದ ಕ್ವಾರ್ಟರ್ ಫೈನಲ್ ಕಾಳಗದಲ್ಲಿ ಅವರು ಜಪಾನಿನ ಕೀ ನಿಶಿಕೊರಿ ವಿರುದ್ಧ 6-3, 3-6, 6-2, 6-2 ಅಂತರದ ಜಯ ಒಲಿಸಿಕೊಂಡರು. ರಫೆಲ್ ನಡಾಲ್-ಜುವಾನ್ ಮಾರ್ಟಿನ್ ನಡುವಿನ ವಿಜೇತರನ್ನು ಜೊಕೋವಿಕ್ ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ.