Advertisement

Minister ನಾಗೇಂದ್ರ ಮೇಲಿನ ಕೇಸ್ ವಾಪಸ್ ಪಡೆಯುತ್ತೀರಾ?: ಸಿಎಂಗೆ ಗಾಲಿ ರೆಡ್ಡಿ ಚಾಲೆಂಜ್‌

05:58 PM Nov 27, 2023 | Team Udayavani |

ಗಂಗಾವತಿ:ಸಿಎಂ ಸಿದ್ದರಾಮಯ್ಯ ಅವರೇ ಈ ಹಿಂದೆ ಸಚಿವ ಬಿ.ನಾಗೇಂದ್ರ ಅವರ ಮೇಲೆ ಹಾಕಿದ ಕೇಸ್‌ಗಳು ಮತ್ತು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಕೆಆರ್‌ಪಿ ಪಕ್ಷ ರಾಜ್ಯಾಧ್ಯಕ್ಷ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಚಾಲೆಂಜ್ ಹಾಕಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ”ದ್ವೇಷದ ಕಾರಣಕ್ಕಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ಮನವಿ ಹಿನ್ನೆಲೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕೇಸ್ ಹಾಕಲು ಪರವಾನಿಗೆ ನೀಡಿದ್ದರಿಂದ ಈಗ ರಾಜ್ಯ ಸರಕಾರದ ಪರವಾನಿಗೆ ವಾಪಸ್ ಪಡೆಯಲಾಗಿದೆ ಎಂದು ಸಿದ್ದರಾಮಯ್ಯ ಸೇರಿ ಸರಕಾರದ ಸಚಿವರು ಪದೇ ಪದೇ ಹೇಳಿಕೆ ಕೊಡುತ್ತಿದ್ದಾರೆ. ಮಾತೆತ್ತಿದರೆ ಅಹಿಂದ ವರ್ಗದ ಹಿತರಕ್ಷಕರೆಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಿಂದ ವಾಲ್ಮೀಕಿ ಜನಾಂಗದ ನಾಯಕ ಹಾಗೂ ಸಚಿವ ಬಿ.ನಾಗೇಂದ್ರ ಮತ್ತು ನನ್ನ ಮೇಲೆ ಸಿಬಿಐ ಕೇಸ್ ಹಾಕಲು ಪರವಾನಿಗೆ ನೀಡಿದ್ದನ್ನು ಕೂಡಲೇ ವಾಪಸ್ ಪಡೆದು ಅಹಿಂದ ಹಿತ ರಕ್ಷಕ ಎಂದು ಸಾಬೀತು ಮಾಡಲಿ” ಎಂದರು.

ನಾಗೇಂದ್ರ ಅವರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯುತ್ತಿರಾ ಅಥವಾ ಅವರನ್ನು ಸಚಿವ ಸಂಪುಟ ದಿಂದ ತೆಗೆದುಹಾಕುತ್ತಿರಾ ಎನ್ನುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ಕೊಡಬೇಕಿದೆ. ಮೋದಿಯವರೇ ನನ್ನನ್ನು ನೋಡಿ ಹೆದರಿಕೊಳ್ಳುತ್ತಾರೆಂದು ಹೇಳುವ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರಿಗೆ ಹೆದರುವುದಿಲ್ಲ. ಅವರು ಬಹಳ ಸ್ಟ್ರಾಂಗ್ ಸಿಎಂ ಆಗಿದ್ದಾರೆ. ಹೈಕಮಾಂಡ್ ಒತ್ತಡವೋ, ಡಿಕೆ ಅವರ ಮೇಲಿನ ಪ್ರೀತಿನೋ ಗೊತ್ತಿಲ್ಲ ಎಂದರು.

20 ಕೇಸ್‌ಗಳು ಸಚಿವ ನಾಗೇಂದ್ರ ಮೇಲೆ ಇವೆ. ನನ್ನ ಮತ್ತು ನಾಗೇಂದ್ರ ಮೇಲೆ ಹಾಕಿದ ಕೇಸ್‌ಗಳನ್ನು ವಾಪಸ್ ಪಡೆಯುತ್ತೀರೋ ಸಿಎಂ ಕೂಡಲೇ ಸ್ಪಷ್ಟಪಡಿಸಬೇಕು. ಡಿಕೆ ಶಿವಕುಮಾರ್ ಅವರಿಗೊಂದು ನ್ಯಾಯ, ನನಗೆ ಮತ್ತು ಸಚಿವ ನಾಗೇಂದ್ರ ಅವರಿಗೊಂಡು ನ್ಯಾಯವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ತೀವ್ರ ಬರಗಾಲವಿದ್ದ ಸಂದರ್ಭದಲ್ಲಿ ಸಿಎಂ ಡಿಸಿಎಂ ಹಾಗೂ ಸಚಿವರು ಮತ್ತು ಬಿಜೆಪಿಯವರು ತೆಲಗಾಣ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳಿರುವುದು ದುಃಖದ ಸಂಗತಿಯಾಗಿದೆ. ಈಗಾಗಲೇ ಬಿಜೆಪಿಯ 16 ಜನ ನಾಯಕರು ಬರಗಾಲ ಅಧ್ಯಯನ ಮಾಡಿ ವರದಿ ನೀಡಿದ್ದಾರೆ.ಇದೀಗ ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಆರ್. ಅಶೋಕ್ ಬರಗಾಲ ವೀಕ್ಷಣೆ ಮಾಡಿ ವರದಿ ನೀಡಲು ಸಿದ್ಧತೆ ನಡೆಸಿದ್ದಾರೆ. ಬಿಜೆಪಿ 16 ನಾಯಕರ ವರದಿ ಸರಿಯಲ್ಲ ಎಂದರ್ಥವಾಯಿತು. ಆರ್.ಅಶೋಕ್ 16 ನಾಯಕರಿಗೆ ಅವಮಾನ ಮಾಡುತ್ತಿದ್ದಾರೆ ಎಂದರು.

Advertisement

ಜನರು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಂಬಬಾರದು. ಪ್ರತಿಯೊಂದನ್ನು ಚುನಾವಣ ದೃಷ್ಟಿಯಿಂದ ಅವರು ನೋಡುತ್ತಾರೆ. ಕೆಆರ್‌ಪಿ ಪಕ್ಷ ಬರವೀಕ್ಷಣೆ ಮಾಡಿ ಸರಕಾರಕ್ಕೆ ನೈಜ ವರದಿ ಸಲ್ಲಿಸಲಿದೆ ಎಂದು ರೆಡ್ಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next