Advertisement

ಇನ್ನೊಬ್ಬರ ಮೀಸಲು ಕಿತ್ತು ಕೊಡುವಿರಾ?

07:00 AM Dec 10, 2017 | Harsha Rao |

ಲೂನಾವಾಡ (ಗುಜರಾತ್‌): “ಪಟೇಲರಿಗೆ ಮೀಸಲು ನೀಡುವುದಾಗಿ ಕಾಂಗ್ರೆಸ್‌ ವಾಗ್ಧಾನ ಮಾಡಿದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡಲಾಗಿರುವ ಮೀಸಲು ವ್ಯವಸ್ಥೆಯನ್ನು ಕಿತ್ತುಕೊಂಡು ನೀಡುತ್ತದೆಯೇ?’

Advertisement

– ಹೀಗೆಂದು ಕಾಂಗ್ರೆಸ್‌ ಅನ್ನು ನೇರವಾಗಿ ಪ್ರಶ್ನಿಸಿದ್ದು ಪ್ರಧಾನ ನರೇಂದ್ರ ಮೋದಿ. ಇದೇ ಮೊದಲ ಬಾರಿಗೆ ಮೀಸಲು ವಿಚಾರದ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಶನಿವಾರ, ಮಹಿಸಾಗರ್‌ ಜಿಲ್ಲೆಯ ಲುನಾವಾಡಾದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, “ಯಾವುದೇ ರಾಜ್ಯದಲ್ಲಿ ಮೀಸಲು ಪ್ರಮಾಣ ಶೇ. 50ಕ್ಕಿಂತ ಹೆಚ್ಚಾಗಬಾರದೆಂದು ಸುಪ್ರೀಂ ಕೋರ್ಟ್‌ ಹೇಳಿದೆ. ಗುಜರಾತ್‌ನಲ್ಲಿ ಮೀಸಲಾತಿ ಶೇ. 50ರ ಗಡಿ ಮುಟ್ಟಿರು ವುದರಿಂದ ಸದ್ಯಕ್ಕಿರುವ ಎಸ್ಸಿ, ಎಸ್ಟಿ ಹಾಗೂ ಒಬಿಸಿಗೆ ನೀಡ ಲಾಗಿರುವ ಮೀಸಲಾತಿಯಲ್ಲಿ ಒಂದಿಷ್ಟು ಕಿತ್ತುಕೊಂಡು ಪಟೇಲ್‌ ಸಮುದಾಯಕ್ಕೆ ನೀಡಬೇಕಿದೆ. ಹಾಗಾಗಿ, ಇತರ ರಾಜ್ಯಗಳಲ್ಲಿ ಮುಸಲ್ಮಾ ನರ ಕೋಟಾ ಬಗ್ಗೆ ಕಾಂಗ್ರೆಸ್‌ ನೀಡಿರುವ ಸುಳ್ಳು ವಾಗ್ಧಾನಗ ಳಂತೆಯೇ ಇದು ಮೂಗಿಗೆ ತುಪ್ಪ ಸವರುವ ಕೆಲಸ” ಎಂದು ಮೋದಿ ಟೀಕಿಸಿದರು. 

ಸಲ್ಮಾನ್‌ ವಿರುದ್ಧ ಕಿಡಿ: ಇದೇ ವೇಳೆ, ಹಾಲಿ ಚುನಾವಣಾ ರ್ಯಾಲಿಗಳಲ್ಲಿ ಸ್ಟಾರ್‌ ಪ್ರಚಾರಕರಾಗಿ ಬಂದಿರುವ ಕಾಶ್ಮೀರದ ಕಾಂಗ್ರೆಸ್‌ ನಾಯಕ ಸಲ್ಮಾನ್‌ ನಿಜಾಮ್‌ ಬಗ್ಗೆ ಮೋದಿ ಇದೇ ವೇಳೆ ಕಿಡಿಕಾರಿದರು. ಸಲ್ಮಾನ್‌ ಅವರು ಇತ್ತೀಚೆಗೆ, “ರಾಹುಲ್‌ ತಂದೆ, ಅಜ್ಜಿ ದಕ್ಷ ಆಡಳಿತಗಾರರು. ಅವರ ತಾತ ಸ್ವಾತಂತ್ರ್ಯ ಹೋರಾಟಗಾರರು. ಆದರೆ, ಮೋದಿ ಅಪ್ಪ-ಅಮ್ಮ ಏನಾಗಿದ್ದರೆಂದು ಪ್ರಶ್ನಿಸಿದ್ದರು. ಆದರೆ, ಭಾರತ ತಮ್ಮ ತಂದೆ-ತಾಯಿಯಾಗಿದ್ದು, ತಾವು ಕೊನೆ ಉಸಿರಿನ ತನಕ ಅವರ ಸೇವೆ ಮಾಡುತ್ತೇನೆ’ ಎಂದು ತಿರುಗೇಟು ನೀಡಿದರು. 

 ನಿಜಾಮ್‌ ಬಗ್ಗೆ ಟೀಕೆ ಮುಂದುವರಿಸಿದ ಅವರು, “”ನಿಜಾಮ್‌, ಸ್ವತಂತ್ರ ಕಾಶ್ಮೀರವನ್ನು ಬಯಸುತ್ತಾರೆ. ಭಾರತೀಯ ಯೋಧರನ್ನು ಅತ್ಯಾಚಾರಿಗಳೆಂದು ಕರೆದಿದ್ದಾರೆ. ಸಂಸತ್‌ ಮೇಲೆ ದಾಳಿ ನಡೆಸಿದ್ದ ಅಫ‌jಲ್‌ ಗುರುಗೆ ಗಲ್ಲು ಶಿಕ್ಷೆಯಾದಾಗ, ಭಾರತದ ಪ್ರತಿಯೊಂದು ಮನೆಯಿಂದ ಒಬ್ಬೊಬ್ಬ ಅಫ‌jಲ್‌ ಗುರು ಹುಟ್ಟಿಬರುತ್ತಾನೆ ಎಂದಿದ್ದರು. ಈಗ ಹೇಳಿ, ನಿಮ್ಮ ಮನೆಗಳಲ್ಲಿ ಅಫ‌jಲ್‌ ಗುರು ಹುಟ್ಟಿಬರಬೇಕೇ? ದೇಶದ್ರೋಹಿ ಅಫ‌jಲ್‌ನಂಥವರು ಗುಜರಾತ್‌ಗೆ ಕಾಲಿಡಬೇಕೇ?” ಎಂದು ಜನರನ್ನು ಪ್ರಶ್ನಿಸಿದರು.  

ಆನಂತರ, ಬಡೋಲಿಯಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರು ತಮ್ಮನ್ನು ನೀಚ ವ್ಯಕ್ತಿ ಎಂದು ಕರೆದಿದ್ದಕ್ಕೆ ಮತ್ತೂಮ್ಮೆ ಅಸಮಾಧಾನ ವ್ಯಕ್ತಪಡಿಸಿದರು. “”ಹಿಂದುಳಿದ ಜಾತಿಯಲ್ಲಿ ಹುಟ್ಟಿದ್ದಕ್ಕೆ ನೀಚ ಎಂದು ನಮ್ಮನ್ನು ಏಕೆ ಕರೆಯಲಾಗುತ್ತದೆ. ಯಾರೋ ಹೀಗೆ ನಮ್ಮನ್ನು ಅಪಮಾನಿಸಿದರೆ ನಾವು ಅದನ್ನು ಒಪ್ಪಿಕೊಳ್ಳಬೇಕೇ?” ಎಂದು ಪ್ರಶ್ನಿಸಿದ ಅವರು, ಇಂಥ ಪಕ್ಷಗಳನ್ನು ಗುಜರಾತ್‌ನಿಂದ ಹೊರಹಾಕಬೇಕೆಂದರು. 

Advertisement

ಭಾಷಣವೇ ಶಾಸನ
ಅತ್ತ, ಟ್ವಿಟ್ಟರ್‌ನಲ್ಲಿ ಮೋದಿ ವಿರುದ್ಧ ಹರಿಹಾಯ್ದಿರುವ ರಾಹುಲ್‌ ಗಾಂಧಿ, ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅಲ್ಲಿ ನಡೆಸಿರುವ ಈವೆರೆಗಿನ ಭಾಷಣಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ತಾವೇ ಉತ್ತರಿಸಿರುವ ಅವರು, ಕಳೆದ 22 ವರ್ಷಗಳಿಂದ ಗುಜರಾತ್‌ನಲ್ಲಿ ಆಡಳಿತ ನಡೆಸಿರುವ ಬಿಜೆಪಿಯಿಂದ ಅಲ್ಲಿ ಅವರು ಹೇಳಿಕೊಂಡಷ್ಟು ಅಭಿವೃದ್ಧಿ ಆಗಿಲ್ಲ. ಹೀಗಾಗಿಯೇ, ನಾನು ಇತ್ತೀಚೆಗೆ ದಿನಕ್ಕೊಂದರಂತೆ ಕೇಳಿದ 10 ಪ್ರಶ್ನೆಗಳಿಗೆ ಅವರು ಉತ್ತರ ನೀಡಿಲ್ಲ. ಅವರ ಅಭಿವೃದ್ಧಿ ಕೇವಲ ಭಾಷಣದಲ್ಲಷ್ಟೇ ಆಗಿದೆ. ಭಾಷಣವೇ ಶಾಸನ ಎಂಬಂತಾಗಿದೆ” ಎಂದು ಟೀಕಿಸಿದ್ದಾರೆ. 

ಶತಾಯುಷಿಗಳಿಂದ ಮತ ಚಲಾವಣೆ
ಯುವಕರಿಂದ ಶತಾಯುಶಿಗಳವರೆಗೆ, ಕ್ರಿಕೆಟಿಗರು, ನವವಿವಾಹಿತರೂ ಸೇರಿದಂತೆ ವೈವಿಧ್ಯಮಯವಾದ ಮತಚಲಾವಣೆ ಗುಜರಾತ್‌ನ ಮೊದಲ ಹಂತದ ಮತದಾನದಲ್ಲಿ ನಡೆಯಿತು. ಕ್ರಿಕೆಟಿಗ ಚೇತೇಶ್ವರ ಪೂಜಾರ ತಂದೆ ಅರವಿಂದ ಪೂಜಾರ ಜತೆ ಮತ ಚಲಾವಣೆ ಮಾಡಿದರೆ, ರಾಜ್‌ಕೋಟ್‌ನ ಉಪ್ಲೇತಾ ಪಟ್ಟಣದಲ್ಲಿ 115 ವರ್ಷದ ಅಜಿಬೆನ್‌ ಚಂದ್ರಾವಾಡಿಯಾ ಹಾಗೂ ಮೊರ್ಬಿ ಜಿಲ್ಲೆಯಲ್ಲಿ 104 ವರ್ಷದ ಮಹಿಳೆಯೊಬ್ಬರು ಮತದಾನ ಮಾಡಿದರು.

397 ಕೋಟ್ಯಧೀಶ ಮತದಾರರು
ಗುಜರಾತ್‌ನ ಮೊದಲ ಮತ್ತು ಎರಡನೇ ಹಂತದ ಮತದಾನದಲ್ಲಿ 1,828 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ಪೈಕಿ 397 ಮಂದಿ ಕೋಟಿಪತಿಗಳಾ ಗಿದ್ದಾರೆ. ಬಿಜೆಪಿ ವತಿಯಿಂದ 142, ಕಾಂಗ್ರೆಸ್‌ನಿಂದ 127, ಎನ್‌ಸಿಪಿಯಿಂದ 17, ಆಮ್‌ ಆದ್ಮಿ ಪಕ್ಷದಿಂದ 13, ಬಿಎಸ್‌ಪಿ 5 ಮಂದಿ ಕೋಟಿಪತಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.

ಮತಗಟ್ಟೆಗೆ ಮದುಮಕ್ಕಳು
ಭರೂಚ್‌ನಲ್ಲಿ ಆಗಷ್ಟೇ ಹಾರ ಬದಲಾಯಿಸಿಕೊಂಡ ವಧು ವರರು ನೇರವಾಗಿ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು. ಅಲ್ಲದೆ ಭಾವ್‌ನಗರದಲ್ಲಿ ಜೋಡಿಯೊಂದು ವಿವಾಹಕ್ಕೂ ಮುನ್ನ ಮತಚಲಾಯಿಸಿತು.

Advertisement

Udayavani is now on Telegram. Click here to join our channel and stay updated with the latest news.

Next