Advertisement

ಸಹ ಜೀವನದ ಲೈಂಗಿಕತೆ ಅತ್ಯಾಚಾರವೇ? ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅಭಿಮತ

09:08 PM Mar 01, 2021 | Team Udayavani |

ನವದೆಹಲಿ: “ಯುವಕ-ಯುವತಿಯ ಜೋಡಿಯೊಂದು ಲಿವಿಂಗ್‌-ಟು-ಗೆದರ್‌ ಪರಿಕಲ್ಪನೆಯಡಿ ಸತಿ-ಪತಿಗಳಂತೆ ಜೀವಿಸುತ್ತಿದ್ದಾಗ, ಅವರಿಬ್ಬರ ನಡುವೆ ನಡೆಯುವ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಹೇಳಲಾಗುತ್ತದೆಯೇ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ಪ್ರಶ್ನಿಸಿದ್ದಾರೆ.

Advertisement

ಉತ್ತರ ಪ್ರದೇಶದ ಜೋಡಿಯೊಂದರ ಪ್ರಕರಣದ ವಿಚಾರಣೆ ವೇಳೆ ಈ ಪ್ರಶ್ನೆ ಮಾಡಿದ್ದಾರೆ. ಸುಮಾರು 2 ವರ್ಷಗಳಿಗೂ ಹೆಚ್ಚು ಕಾಲ ಯುವಕನೊಬ್ಬನ ಜೊತೆಗೆ ಸಹ-ಜೀವನ ನಡೆಸಿದ್ದ ಯುವತಿಯೊಬ್ಬಳು, ಆತ ಬೇರೆ ಮದುವೆಯಾದ ಕಾರಣಕ್ಕೆ ಆತನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾಳೆ. ಇದರ ವಿಚಾರಣೆ ನಡೆಸಿದ ನ್ಯಾಯಪೀಠ, ಜೊತೆಗೆ ಬದುಕುತ್ತಿದ್ದಾಗ ಪರಸ್ಪರರ ಸಂಯೋಗವನ್ನು ಅತ್ಯಾಚಾರವೆಂದು ಪರಿಗಣಿಸಬೇಕೇ ಎಂದು ಯುವತಿಗೆ ಪ್ರಶ್ನಿಸಿದರು. ಇದೇ ವೇಳೆ, ಯುವಕ ದಾಖಲಿಸಿದ್ದ ಎಫ್ಐಆರ್‌ ರದ್ದು ಮನವಿಯನ್ನು ತಳ್ಳಿಹಾಕಿದ ಅವರು, ಈ ಕುರಿತಂತೆ ಕೆಳ ಹಂತದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು. ಜೊತೆಗೆ, ಆತನಿಗೆ 4 ವಾರಗಳ ಕಾಲ ಬಂಧನದಿಂದ ರಕ್ಷಣೆ ನೀಡಿ ಆದೇಶಿಸಿದರು.

ಇದನ್ನೂ ಓದಿ:ವಿಚಾರಣೆಗೆ ಹಾಜರಾಗದ ನಟಿ ಕಂಗನಾ ವಿರುದ್ಧ ವಾರೆಂಟ್ !  

Advertisement

Udayavani is now on Telegram. Click here to join our channel and stay updated with the latest news.

Next