Advertisement
ಲೆ.ಜ.ನದೀಮ್ ಅಂಜುಮ್ ಅವರು ಐಎಸ್‌ಐ ಮುಖ್ಯಸ್ಥರಾಗಿ ನ.20ರಂದು ಅಧಿಕಾರ ಸ್ವೀಕರಿಸಲಿರುವಂತೆಯೇ ಹಾಲಿ ಮುಖ್ಯಸ್ಥ ಲೆ.ಜ.ಫೈಜ್ ಹಮೀದ್ ಅವರನ್ನೇ ಮುಂದುವರಿಸಲು ಪ್ರಧಾನಿ ಇಮ್ರಾನ್ ಖಾನ್ ಒಲವು ಹೊಂದಿದ್ದಾರೆ. ಈ ವಿಚಾರವೇ ಸೇನಾ ಮುಖ್ಯಸ್ಥ ಜ.ಖಮರ್ ಜಾವೇದ್ ಬಾಜ್ವಾ ಮತ್ತು ಪ್ರಧಾನಿ ಖಾನ್ ನಡುವಿನ ವಿರಸಕ್ಕೆ ಕಾರಣ. ಪ್ರಧಾನಿ ಹಠಹಿಡಿದದ್ದೇ ಆದಲ್ಲಿ ಸರ್ಕಾರದ ಆಡಳಿತವನ್ನು ಸೇನೆ ಕೈವಶ ಮಾಡಿಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ.
Related Articles
ಇಮ್ರಾನ್ ಖಾನ್ ಅವರೇ ಹುದ್ದೆಗೆ ರಾಜೀನಾಮೆ ನೀಡಿದಲ್ಲಿ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ನ ಪರ್ವೇಝ್ ಖಟ್ಟಕ್, ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಜ್ ಪಕ್ಷದ ಶಾಭಾಝ್ ಷರೀಫ್ ಪ್ರಧಾನಿ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ ಇದೆ.
Advertisement
ಕಠಿಣ ಪರಿಸ್ಥಿತಿ:ಹದಗೆಟ್ಟ ಅರ್ಥ ವ್ಯವಸ್ಥೆ, ಪಾಕಿಸ್ತಾನದಲ್ಲಿ ಬಲಪಂಥೀಯ ಎಂದು ಗುರುತಿಸಿಕೊಂಡ ತೆಹ್ರೀಕ್-ಇ- ಲಬೈಕ್ ಪಾಕಿಸ್ತಾನ್ ಎಂಬ ಪಕ್ಷದ ಕಾರ್ಯಕರ್ತರ ಸತತ ಪ್ರತಿಭಟನೆ ಮತ್ತು ಘರ್ಷಣೆಯಿಂದ ಹಲವರು ಅಸುನೀಗಿದ ಪ್ರಕರಣಗಳು ಕೂಡ ಇಮ್ರಾನ್ ಅವರಿಗೆ ಪದತ್ಯಾಗದ ಅನಿವಾರ್ಯತೆ ಮೂಡಿಸಿ ದೆ. ವಿಶೇಷವಾಗಿ ಐಎಸ್‌ಐಗೆ ಮುಖ್ಯಸ್ಥರನ್ನು ನೇಮಿಸುವ ವಿಚಾರ ಕೈಮೀರಿ ಹೋಗಿದೆ.