Advertisement

‘ಜೈ ಶ್ರೀರಾಮ್’ : ಮೋದಿ, ಶಾ ಅವರ ಅಡಿಯಲ್ಲಿ ಕೆಲಸ ಮಾಡುತ್ತೇನೆ : ಸಿಸಿರ್ ಅಧಿಕಾರಿ

06:10 PM Mar 21, 2021 | Team Udayavani |

ಕೊಲ್ಕತ್ತಾ : ಅನುಭವಿ ಟಿ ಎಮ್ ಸಿ ಸಂಸದ ಸಿಸರ್ ಅಧಿಕಾರಿ ಇಂದು(ಆದಿತ್ಯವಾರ. ಮಾ.21) ಎಗ್ರಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

Advertisement

ಕೆಲವು ತಿಂಗಳುಗಳ ಹಿಂದಷ್ಟೇ ಟಿ ಎಮ್ ಸಿ ಪಕ್ಷವನ್ನು ತೊರೆದ, ಪಶ್ಚಿಮ ಬಂಗಾಳದ ಈಗಿನ ಪ್ರಭಾವಿ ಬಿಜೆಪಿಯ ನಾಯಕ ಎನ್ನಿಸಿಕೊಂಡಿರುವ ಮತ್ತು ನಂದಿಗ್ರಾಮ ವಿಧಾನ ಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಯವರ ವಿರುದ್ಧ ಕಣಕ್ಕಿಳಿಯಲಿರುವ ಸುವೇಂದು ಅಧಿಕಾರಿಯವರ ತಂದೆ ಸಿಸಿರ್ ಅಧಿಕಾರಿ.

ಓದಿ :   ತಮಿಳು ನಾಡು : ಎ ಐ ಎ ಡಿ ಎಮ್ ಕೆ ಬಿಜೆಪಿಯ ಒಂದು ಶಾಖೆ : ಸ್ಟ್ಯಾಲಿನ್

ಪಶ್ಚಿಮ ಬಂಗಾಳದ ಮೇದಿನಿಪುರ ಜಿಲ್ಲೆಯ ಅತ್ಯಂತ ಪ್ರಭಾವಿ ನಾಯಕ ಸಿಸಿರ್ ಅಧಿಕಾರಿ, ಟಿ ಎಮ್ ಸಿ ಪಕ್ಷದಲ್ಲಿ ದೀರ್ಘಕಾಲ ರಾಜಕೀಯವನ್ನು ಮಾಡಿದವರು. ಸಂಸದರಾಗಿ ದುಡಿದವರು. ಕಾಲಾಂತರದಲ್ಲಿ ಪಕ್ಷದೊಂದಿಗೆ ವೈಮನಸ್ಸು ಆರಂಭವಾಯಿತು. ಸುವೆಂದು ಅಧಿಕಾರಿ ಬಿಜೆಪಿಗೆ ಸೇರ್ಪಡೆಗೊಂಡಾಗ ಅದು ಬೆಳಕಿಗೆ ಬಂತು.

ತನ್ನನ್ನು ಮತ್ತು ತನ್ನ ಮಕ್ಕಳನ್ನು ಟಿ ಎಮ್ ಸಿ ನೋಡಿಕೊಂಡ ರೀತಿಯ ಬಗ್ಗೆ ಅಸಮಾಧಾನವಿದೆ ಎಂದು ಸಿಸಿರ್ ಈ ಹಿಂದೆ ಹೇಳಿದ್ದರು.

Advertisement

ನಮ್ಮ ಕುಟುಂಬವನ್ನು ಹೊರಹಾಕಿದ ರೀತಿ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಬಂಗಾಳದ ಎಲ್ಲಾ ರಾಜಕೀಯ ದಾಳಿ  ಮತ್ತು ದೌರ್ಜನ್ಯಗಳ ವಿರುದ್ಧ ನಾವು ನಿಲ್ಲುತ್ತೇವೆ. ನಾವು ಮೋದಿ ಹಾಗೂ ಶಾ ಅವರ ಅಡಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಸಿಸಿರ್ ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಇನ್ನು, ಸಿಸರ್ ಅಧಿಕಾರಿ, ಈ ಸಂದರ್ಭ ಜೈ ಶ್ರಿರಾಮ್, ಭಾರತ್ ಮಾತಾ ಕಿ ಜೈ ಘೋಷಣೆಯನ್ನು ಕೂಡ ಕೂಗಿದ್ದಾರೆ.

ಸುವೆಂದು ಅಧಿಕಾರಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸುಲಭ ಜಯವನ್ನು ಸಾಧಿಸಲಿದ್ದಾರೆ. ಪೂರ್ವ ಮಿಡ್ನಾಪುರದಿಂದ ಟಿ ಎಮ್ ಸಿ ಯನ್ನು ಹೆಸರು ಇಲ್ಲದ ಹಾಗೆ ಮಾಡುತ್ತೇವೆ ಎಂದು ಸಿಸಿರ್ ಹೇಳಿದ್ದಾರೆ.

ಓದಿ :  ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ಅಫ್ಘಾನಿಸ್ಥಾನ ತಂಡದ ನಾಯಕ ಅಸ್ಗರ್ ಅಫ್ಘಾನ್

Advertisement

Udayavani is now on Telegram. Click here to join our channel and stay updated with the latest news.

Next