Advertisement

ಹೀಗೆಲ್ಲಾ ಸತಾಯಿಸೋದು ಸರೀನಾ? ನೀನೇ ಹೇಳು…

06:00 AM Jul 03, 2018 | |

ನೀ ನಗ್ತಿದ್ರೇನೇ ನೋಡೋಕೆ ಚೆಂದ. ನಂಗೂ ಅದೇ ಇಷ್ಟ. ನೀ ನನ್ನ ಚೇತನ. ನನ್ನ ಅಂತಃಶಕ್ತಿ. ಅಂತರಾತ್ಮದ ಕನ್ನಡಿ. ಅಂತರಂಗದ ಪಿಸುನುಡಿ. ಆಂತರ್ಯದ ತುಣುಕು. ಅಂಧಕಾರದಲ್ಲಿ ಬೆಳಕು…

Advertisement

ನನ್ನ ಮುದ್ದು ಹಕ್ಕೀ,
ಇನ್ನೂ ಎಷ್ಟು ದಿನ ನಂಗೆ ಈ ಶಿಕ್ಷೆ ? ಅಸಲು ನಾ ಮಾಡಿದ ದೊಡ್ಡ ತಪ್ಪೇನು ? ನಿನ್ನ ಮುನಿಸು ಸಾಕು ಕಣೇ ಬಂಗಾರಿ. ಪ್ಲೀಸ್‌, ಕೋಪ ಬಿಡು.
“ಈ ಬಿಂಕ ಬಿಡು ಬಿಡು ನಾನಿನ್ನ ಬಲ್ಲೆನು…
ಮನಸನ್ನು ಕೊಡು ಕೊಡು ನಾನಲ್ಲಿ ನಿಲ್ಲುವೆನು..’
ನಿಂಗೊತ್ತಾ, ಅವತ್ತು ಅಪ್ಪ ಬೇಗ ಬಂದಿದ್ರು. ಅಮ್ಮ ಮನೇಲೇ ಇದ್ರು. ತಂಗಿ ಟ್ಯೂಷನ್‌ಗೆ ಹೋಗಿರ್ಲಿಲ್ಲ. ಹಾಗಿರೋವಾಗ ನಾನು ಹ್ಯಾಗ್‌ ಬರ್ಲಿ ಹೇಳು ? ನಿಂಗೆ ಮಾತ್ರನಾ ಬೇಜಾರು? ನಂಗಿರಲ್ವಾ ? ನಿನ್ನ ಪ್ರತಿ ಮಾತಿಗೆ ಕಾದು ನಿಂತಿರ್ತೇನೆ ನಾನು. ನಿನ್ನದೊಂದು ನಿಟ್ಟುಸಿರಿಗೆ ಕಣ್ಣೀರಾಗುತ್ತೇನೆ ನಾನು. ಇಂಥಾ ಸುಡುಮೋಹದ ಮಧ್ಯೆಯೂ ರಾತ್ರಿಯ ಮೌನದಲ್ಲಿ ಇಂಪಾದ ಸಂಗೀತ ಕೇಳಿದ್ರೆ ಅದು ನಿನ್ನ ದನಿ. ಹೇಳದೆ ಕೇಳದೆ ಸುಯ್ಯನೆ ಬೀಸಿ ಬಂದು ಮೈ  ಸೋಕುತ್ತಲ್ಲ; ಆ ತಂಪು ಗಾಳಿಯಲ್ಲಿ ನಿನ್ನ ಸ್ಪರ್ಶ. ನಕ್ಷತ್ರವೆಂಬುದು ನಿನ್ನ ಕಣ್ಣ ಮಿಂಚು. ಚಂದಿರ ಕಾಣಿಸಿದ ಅಂದೊR; ನನ್ನ ಪಾಲಿಗೆ ಅದೇ ನಿನ್ನ ಮುಖ. ಬೆಳಗಿನ ಎಳೆಬಿಸಿಲಿಂದಲೇ ನಿನ್ನ ಅಪ್ಪುಗೆಯ ಬಿಸಿ. ದಟ್ಟ ಮೋಡ ಕಂಡರೆ ಬೆನ್ನ ತುಂಬ ಹರಡಿದ ನಿನ್ನ ಕೂದಲ ಜಲಪಾತ…ಹೀಗೆಲ್ಲಾ ಅಂದ್ಕೊಂತೀನಿ ನಾನು. ಹೇಳೇ, ಇನ್ನೂ ಹ್ಯಾಗೆ ಪ್ರೀತಿಸ್ಲಿ ನಿನ್ನ?

ಮೊನ್ನೆ, ನಿನ್ನನ್ನು ತಪ್ಪದೇ ಭೇಟಿಯಾಗುತ್ತೇನೆ ಅಂತ ಹೇಳಿ ಕೈ ಕೊಟ್ಟಿದ್ದು ನಿಜ. ಅದರಿಂದ ನಿಂಗೆ ಬೇಜಾರಾಗಿದೆ ಅನ್ನುವುದೂ ನಿಜ. ಆದರೆ, ಅವತ್ತು ಅಸಹಾಯಕನಾಗಿ ನಾನೆಷ್ಟು ನರಳಿದೆ ಗೊತ್ತಾ? ಅಂಥ ಹಸಿವಲ್ಲೂ ರಾತ್ರಿ ಊಟ ಮಾಡದೇ ಇರಲು ನಿರ್ಧರಿಸಿದೆ. ನಂಬು, ನಿನ್ನನ್ನ ನೋಯಿಸಿದ್ದೆ ಎಂಬ ಒಂದೇ ಕಾರಣಕ್ಕೆ ನೀರೂ ಕುಡಿಯದೆ ರಾತ್ರಿ ಕಳೆದೆ. ಮುಂಜಾನೆದ್ದು ಜಾಗಿಂಗ್‌ನ ನೆಪದಲ್ಲಿ ನಿಮ್ಮ ಮನೆಯ ಎದುರಿಗೇ ಓಡಾಡುತ್ತಾ ಟೈಂಪಾಸ್‌ ಮಾಡಿದೆ.ರಂಗೋಲಿ ಇಡಲೆಂದು ನೀನು ಬಂದೇ ಬರ್ತೀಯ. ಆಗ ಒಮ್ಮೆ ನೋಡಿ, ಅವಸರದಲ್ಲೇ ಸಾರಿ ಕೇಳಿ ಹೋಗಿಬಿಡಬೇಕು ಅನ್ನೋದು ನನ್ನ ಲೆಕ್ಕಾಚಾರ ಆಗಿತ್ತು. ಆದರೆ ನೀನು ಹೊರಗೆ ಬರಲೇ ಇಲ್ಲ. ಸಾರಿ ಸಾರಿ ಸಾರಿ ಸಾರಿ ಅನ್ನುತ್ತಾ ನಾನು 27 ಎಸ್‌ಎಂಎಸ್‌ ಕಳಿಸಿದ್ದೇ ಆಗ. ಉಹುಂ, ಇಷ್ಟೆಲ್ಲಾ ಆದರೂ ನೀನು ಹಠ ಬಿಡಲಿಲ್ಲ. ಹೇಳೇ ಬೆಡಗೀ, ಭಗವಂತ ನಿಂಗೆ ಹೃದಯದ ಜಾಗದಲ್ಲಿ ಕಲ್ಲು ಇಟ್ಟಿದಾನಾ? ಎಂದು ನಾನು ಕನಲಿ ನಿನಗೆ ವಾಟ್ಸಾಪ್‌ ಮೆಸೇಜ್‌ ಮಾಡಿದ್ದೇ ಆವಾಗ. 

ಚಿನ್ನೀ, ಇನ್ನು ಕೆಲವೇ ತಿಂಗಳು ಕಣೇ. ನಿನ್ನೆಲ್ಲ ಕನಸು ನನಸಾಗುತ್ತೆ. ನನ್ನ ಬಿಸಿನೆಸ್‌ ಚೇತರಿಸಿಕೊಳ್ಳುತ್ತೆ. ಒಂದಷ್ಟು ಜನ ನನ್ನ ಗುರುತಿಸ್ತಾರೆ. ಸ್ವಲ್ಪ ಟೈಮ್‌ ಕೊಡು. ಆಮೇಲೆ ನೀನು ಕರೆದಾಗೆಲ್ಲ ಹಾಜರಾಗ್ತಿನಿ. ಬೇಡ ಎಂದರೂ ಉಸಿರುಗಟ್ಟಿಸುವ ಅಪ್ಪುಗೆಯೊಂದಿಗೆ ನಮ್ಮ ಪ್ರತಿ ಬೆಳಗೂ ಶುರುವಾಗುತ್ತೆ… ಆದರೆ ಈ ಕೋಪ, ತಾಪ, ಅಳು ಬಿಟಿºಡು. ಇದರಿಂದ ನಿನ್ನ ಚೆಂದದ ವ್ಯಕ್ತಿತ್ವ ಮಂಕಾಗುತ್ತೆ. ನೀ ನಗ್ತಿದ್ರೇನೇ ನೋಡೋಕೆ ಚೆಂದ. ನಂಗೂ ಅದೇ ಇಷ್ಟ. ನೀ ನನ್ನ ಚೇತನ. ನನ್ನ ಅಂತಃಶಕ್ತಿ. ಅಂತರಾತ್ಮದ ಕನ್ನಡಿ. ಅಂತರಂಗದ ಪಿಸುನುಡಿ. ಆಂತರ್ಯದ ತುಣುಕು. ಅಂಧಕಾರದಲ್ಲಿ ಬೆಳಕು…

ಒಂದೇ ಮಾತಲ್ಲಿ ಹೇಳಿ ಬಿಡ್ತೀನಿ ಕೇಳು. ನೀ ನಗ್ತಿದ್ರೆ ನಿನ್ನ ತೆಕ್ಕೆಗೆ ಹಾರಿ ಬರಬೇಕು ಅನ್ಸುತ್ತೆ. ನೀ ಅಳ್ತಿದ್ರೆ ಯಾಕೆ ಬೇಕು ಬದುಕು ಅಂತ ಮನ ಮಂಕಾಗಿºಡುತ್ತೆ. ನಾವು ನಗ್ತಿರಬೇಕು. ನಮ್ಮ ಪ್ರೀತಿ ಕ್ಷಣ ಕೂಡ ಬೋರ್‌ ಅನ್ನಿಸ್ಬಾರ್ದು. ನೀನಿಲ್ಲದೇ ನಾನು ಬರಿಯ ಶೂನ್ಯ ಕಣೇ. ನಿನ್ನ ಕೋಪ ತಡ್ಕೊಳ್ಳೋ ಶಕ್ತಿ ನಂಗಿಲ್ಲ. ಮಾತಾಡಿಸೋ ಯುಕ್ತಿ ಗೊತ್ತಿಲ್ಲ. ಪೆದ್ದ ನಾನು. ನನ್ನನ್ನ ಹೀಗೆಲ್ಲ ಸತಾಯಿಸೋದು ಸರೀನಾ ಹೇಳು?

Advertisement

ಸಿಂಪಲ್‌ ಹುಡುಗ!

Advertisement

Udayavani is now on Telegram. Click here to join our channel and stay updated with the latest news.

Next