Advertisement

ಇಂಗ್ಲೆಂಡ್‌ನ‌ಲ್ಲಿ ಐಪಿಎಲ್‌ ಮುಂದುವರಿಯುವುದು ಅಸಾಧ್ಯ: ಗಂಗೂಲಿ ಸ್ಪಷ್ಟನೆ

12:25 AM May 10, 2021 | Team Udayavani |

ಇಂಗ್ಲೆಂಡ್‌ನ‌ಲ್ಲಿ ಐಪಿಎಲ್‌ ಮುಂದುವರಿಯುವ ಸಾಧ್ಯತೆ ಇಲ್ಲ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

Advertisement

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾಗೂ ಟೆಸ್ಟ್‌ ಸರಣಿ ನಡುವೆ ಸುಮಾರು 40 ದಿನಗಳ ಅಂತರವಿದ್ದು, ಈ ಅವಧಿಯಲ್ಲಿ ಐಪಿಎಲ್‌ ನಡೆಸುವ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ಗಂಗೂಲಿ ಉತ್ತರಿಸಿದರು.

“ಐಪಿಎಲ್‌ ಭಾರತದಲ್ಲಿ ಮುಂದುವರಿಯುವ ಸಾಧ್ಯತೆಯಂತೂ ಇಲ್ಲ. ಇದಕ್ಕೆ ಹೇಗೆ, ಎಲ್ಲಿ ಸಮಯ ಹೊಂದಿಸುವುದು ಎಂಬುದನ್ನು ಇಷ್ಟು ಬೇಗ ನಿರ್ಧರಿಸಲು ಸಾಧ್ಯವಿಲ್ಲ. ಇಂಗ್ಲೆಂಡ್‌ ಪ್ರವಾಸದ ವೇಳೆ ಸುದೀರ್ಘ‌ ಸಮಯಾವಕಾಶ ಲಭಿಸುತ್ತದೆ ನಿಜ. ಆದರೆ ಈ ಸಮಯದಲ್ಲಿ ಶ್ರೀಲಂಕಾಕ್ಕೆ ಪ್ರವಾಸಗೈದು, 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡುವ ಯೋಜನೆಯೊಂದಿದೆ. ಆದರೆ ಕಠಿನ ಕ್ವಾರಂಟೈನ್‌ನದ್ದೇ ಸಮಸ್ಯೆ’ ಎಂಬುದಾಗಿ ಗಂಗೂಲಿ ಹೇಳಿದರು.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಜೂ. 22ಕ್ಕೆ ಮುಗಿದರೆ, ಭಾರತ-ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿ ಆ. 4ಕ್ಕೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next