ಲಕ್ನೋ: 5 ಮದುವೆಯಾದ ವ್ಯಕ್ತಿಯೊಬ್ಬ 6ನೇ ಅವಳನ್ನು ಅಪಹರಣ ಮಾಡಿ ವಿವಾಹವಾಗಿರುವ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.
ರಶೀದ್ ಎನ್ನುವ ವ್ಯಕ್ತಿ 5 ಮದುವೆಯನ್ನು ಆಗಿದ್ದಾನೆ. ಇತ್ತೀಚೆಗೆ 19 ವರ್ಷದ ಯುವತಿಯನ್ನು ಅಪಹರಣ ಮಾಡಿ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತಾರ ಮಾಡಿ ವಿವಾಹವಾಗಿದ್ದಾನೆ.
ಇತ್ತೀಚೆಗೆ ಸಂಬಂಧಿಕರೊಬ್ಬರ ಮನೆಯಿಂದ 19 ವರ್ಷದ ಯುವತಿ ನಾಪತ್ತೆಯಾಗಿದ್ದಳು. ಈ ಸಂಬಂಧ ಯುವತಿ ಮನೆಯವರು ದೂರು ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ಆರೋಪಿ ರಶೀದ್ ಯುವತಿ ಮನೆಯವರಿಗೆ ಎಚ್ಚರಿಕೆಯನ್ನು ನೀಡಿದ್ದಾನೆ. ಒಂದು ವೇಳೆ ಕೊಟ್ಟ ದೂರನ್ನು ವಾಪಾಸ್ ತೆಗೆದುಕೊಳ್ಳದಿದ್ದರೆ ನಿಮ್ಮ ಮನೆಯ ಮತ್ತೊಂದು ಮಗಳನ್ನು ಅಪಹರಣ ಮಾಡುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ.
24 ಗಂಟೆಯೊಳಗೆ ಯುವತಿಯನ್ನು ವಾಪಾಸ್ ಮನೆಗೆ ಕಳುಹಿಸಬೇಕು. ಇಲ್ಲದಿದ್ದರೆ ಜೂ.22 ರಂದು ಶಾಮ್ಲಿಯ ಅದಮಾಪುರ ಗ್ರಾಮದಲ್ಲಿ ಹಿಂದೂ ಸಂಘಟನೆಗಳ ಮಹಾಸಭೆ ನಡೆಸಲಾಗುವುದು ಎಂದು ಶಾಮ್ಲಿಯ ಬಘರಾ ಆಶ್ರಮದ ಪ್ರಚಾರಕ ಯಶ್ವೀರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರ ಸದ್ಯ ಗ್ರಾಮದಲ್ಲಿ ವಿವಾದ ಸೃಷ್ಟಿಸಿದ್ದು, ಹಿಂದೂಪರ ಸಂಘಟನೆಗಳು ಪೊಲೀಸ್ ಠಾಣೆಯ ಬಳಿ ತೆರಳಿ ʼಲವ್ ಜಿಹಾದ್ʼ ಆರೋಪವನ್ನು ಮಾಡಿ ಆರೋಪಿ ಬಂಧನಕ್ಕೆ ಆಗ್ರಹಿಸಿದ್ದಾರೆ.
ರಶೀದ್ ವಿರುದ್ಧ ಈಗಾಗಲೇ ಕೆಲವೊಂದು ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿದೆ. ಈತನ 5 ಜನ ಪತ್ನಿಯರಲ್ಲಿ ನಾಲ್ವರು ಹಿಂದೂಗಳಾಗಿದ್ದು, ಒಬ್ಬರು ಮಾತ್ರ ಮುಸ್ಲಿಂ ಆಗಿದ್ದಾರೆ. ಈತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅವರನ್ನು ಮತಾಂತರಗೊಳಿಸಿ ಮದುವೆಯಾಗುತ್ತಾನೆ ಎಂದು ಈತನ ವಿರುದ್ದ ಆರೋಪಗಳಿವೆ.