ಚೆನ್ನೈ: ದಕ್ಷಿಣದ ರಾಜ್ಯಗಳು ಪ್ರತ್ಯೇಕ ದೇಶವಾಗುವ ಸಂದರ್ಭ ಬಂದರೆ ಸ್ವಾಗತಿಸುವುದಾಗಿ ಡಿಎಂಕೆ ನಾಯಕ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಡಿಎಂಕೆ ಕಾರ್ಯಾಧ್ಯಕ್ಷ ರಾಗಿರುವ ಸ್ಟಾಲಿನ್ ಈರೋಡ್‌ನಲ್ಲಿ ಈ ಹೇಳಿಕೆ ನೀಡಿರುವುದಾಗಿ ದಿ ಹಿಂದು ಪತ್ರಿಕೆಯಲ್ಲಿ ವರದಿಯಾಗಿದೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು ಅವರು ಕೇಂದ್ರ ಸರ್ಕಾರವನ್ನು ಟೀಕಿಸಿ ‘ದಕ್ಷಿಣ ರಾಜ್ಯಗಳಿಗೆ ಉತ್ತರ ಭಾರತದ ರಾಜ್ಯಗಳಿಗೆ ನೀಡಿದಷ್ಟು ಅನುದಾನ ನೀಡುತ್ತಿಲ್ಲ . ದಕ್ಷಿಣ ಭಾರತವನ್ನು ಕಡೆಗಣಿಸಲಾಗುತ್ತಿದೆ’ ಎಂದು ಆರೋಪಿಸಿದ ಬೆನ್ನಲ್ಲೇ ಸ್ಟಾಲಿನ್ ಈ ಹೇಳಿಕೆ ನೀಡಿದ್ದಾರೆ.
ದ್ರಾವಿಡ ನಾಡು ತಮ್ಮದೇ ಎಂಬಂತೆ ಸುದ್ದಿ ಪ್ರಸಾರ ಮಾಡಿದ ಕೆಲ ಮಾಧ್ಯಮಗಳ ಮೇಲೆ ಸ್ಟಾಲಿನ್ ಅಸಮಾಧಾನ ವ್ಯಕ್ತಪಡಿಸಿ ದ್ರಾವಿಡ ನಾಡಿನ ಪರಿಕಲ್ಪನೆ ಮಾಡಿದ್ದು ತಮಿಳುನಾಡಿನ ಮಹಾ ಹೋರಾಟಗಾರ ಪೆರಿಯಾರ್ ರಾಮಸ್ವಾಮಿ ಅವರು ನಾನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
1949 ರಲ್ಲಿ ಅಸ್ಥಿತ್ವಕ್ಕೆ ಬಂದ ಡಿಎಂಕೆ ಗೆ ”ದ್ರಾವಿಡ ನಾಡು” ಎನ್ನುವ ಪ್ರತ್ಯೇಕ ದೇಶವನ್ನು ಹುಟ್ಟು ಹಾಕುವುದು ಪ್ರಮುಖ ಗುರಿಯಾಗಿತ್ತು. 1962 ರ ಚೀನಾದೊಂದಿಗಿನ ಯುದ್ಧದ ಬಳಿಕ ಈ ಯೋಚನೆಯನ್ನು ತೆಗೆದು ಹಾಕಿತ್ತು.