Advertisement
ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದ ಮಂಡ್ಯ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಜೆಡಿಎಸ್ ಹರಸಾಹಸ ಮಾಡ ಬಹುದು. ಆದರೆ ಜೆಡಿಎಸ್‌ನ ಕಡುವೈರಿ ಎಂದೇ ಬಿಂಬಿತ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರ ನಡೆ ಇಡೀ ಕ್ಷೇತ್ರದ ಚಿತ್ರಣ ವನ್ನೇ ಬದಲಾಯಿಸಬಹುದು. ಸುಮಲತಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧ ರಾಗಿದ್ದಾರೆ ಎಂದೂ ಹೇಳಲಾಗುತ್ತದೆ.
Related Articles
ಕುಮಾರಸ್ವಾಮಿ ಅಭ್ಯರ್ಥಿಯಾಗ ಬಹುದೆಂದು ಹೇಳಲಾಗುತ್ತಿದೆ. ತಮ್ಮ ಪುತ್ರನ ರಾಜಕೀಯ ಭವಿಷ್ಯ ಕ್ಕಾಗಿ ಚನ್ನಪಟ್ಟಣ ಬಿಟ್ಟು ಮಂಡ್ಯ ಲೋಕಸಭೆಗೆ ಬರಬಹುದೆಂಬ ಚರ್ಚೆಗಳೂ ನಡೆಯುತ್ತಿವೆ. ಇದರ ನಡುವೆ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ ಕೂಡ ಟಿಕೆಟ್ ರೇಸ್‌ನಲ್ಲಿದ್ದಾರೆ. ಆದರೆ ಪಕ್ಷದಲ್ಲಿ ನಾಯಕರ ಹೊಂದಾಣಿಕೆ ಕೊರತೆ ಇರುವುದರಿಂದ ಕುಮಾರ ಸ್ವಾಮಿ, ದೇವೇಗೌಡ ಅಥವಾ ನಿಖೀಲ್ ಬಂದರೆ ಒಗ್ಗಟ್ಟು ಪ್ರದರ್ಶನವಾಗಲಿದೆ ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿದೆ.
Advertisement
ಇನ್ನು ಕಾಂಗ್ರೆಸ್‌ನಲ್ಲೂ ಅಭ್ಯರ್ಥಿ ಗಳ ಗೊಂದಲ ಮುಂದುವರಿದಿದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಯನ್ನು ಸೋಲಿಸಲೇಬೇಕು ಎಂಬ ಹಟಕ್ಕೆ ಬಿದ್ದಿದೆ. ಆದ್ದರಿಂದ ಎಲ್ಲ ರೀತಿಯ ತಯಾರಿ ನಡೆಸುತ್ತಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಪುತ್ರಿ ಶಾಂಭವಿ, ನಟಿ ರಮ್ಯಾ ಅವರನ್ನು ಕರೆತರುವ ಯೋಚನೆಗಳು ನಡೆಯುತ್ತಿವೆ. ಆದರೆ ಇಬ್ಬರೂ ಕ್ಷೇತ್ರದಲ್ಲಿ ಇನ್ನೂ ಆ್ಯಕ್ಟೀವ್ ಆಗಿಲ್ಲ. ಇದರ ನಡುವೆ ಸಚಿವ ಎನ್.ಚಲುವರಾಯಸ್ವಾಮಿಗೂ ಆಹ್ವಾನ ನೀಡಲಾಗಿದೆ.
ಚಲುವರಾಯ ಸ್ವಾಮಿ ಹಿಂದೇಟು ಹಾಕಿದರೆ ಅವರ ಪತ್ನಿ ಧನಲಕ್ಷ್ಮೀ ಹೆಸರೂ ಕೇಳಿಬರು ತ್ತಿದೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯ ಕರ್ತರು ಶಾಂಭವಿ, ರಮ್ಯಾ, ಚಲುವ ರಾಯಸ್ವಾಮಿ ಅಥವಾ ಧನಲಕ್ಷ್ಮಿ ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಒಲವು ತೋರಿದ್ದಾರೆನ್ನಲಾಗಿದೆ.
ಒಂದು ವೇಳೆ ಎಚ್. ಡಿ. ಕುಮಾರಸ್ವಾಮಿ ಕಣಕ್ಕಿಳಿದರೆ ಕಾಂಗ್ರೆಸ್‌ನಿಂದ ಚಲುವ ರಾಯ ಸ್ವಾಮಿಯನ್ನು ಕಾಂಗ್ರೆಸ್ ಕಣಕ್ಕಿಳಿಸ ಬಹುದು ಎನ್ನಲಾಗು ತ್ತಿದೆ. ಚಲುವರಾಯ ಸ್ವಾಮಿ ಒಪ್ಪದಿದ್ದರೆ ಹಾಲಿ ಸಂಸದೆ ಸುಮಲತಾ ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡು ಕಣಕ್ಕಿಳಿಸಬಹುದು. ಆದರೆ ಸುಮಲತಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿರುವುದು ಜಿಲ್ಲಾ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಪಕ್ಷ ಸೇರ್ಪಡೆಗೆ ಹಿನ್ನಡೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಎಚ್.ಶಿವರಾಜು