Advertisement

ಪಕ್ಷದಲ್ಲೇ ಇರುತ್ತೇನೆ, ಬಿಜೆಪಿ ನಗರ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ಮಾಡಲ್ಲ: ಪಟ್ಟಣಶಟ್ಟಿ

12:27 PM Apr 21, 2023 | keerthan |

ವಿಜಯಪುರ: ವಿಜಯಪುರ ನಗರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಪಡೆಯುವಲ್ಲಿ ನನಗೆ ಅವಕಾಶ ಸಿಗಲಿಲ್ಲ. ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದೆ. ವ್ಯಕ್ತಿಗತವಾಗಿ ನನಗೆ ರಾಜಕೀಯವ ಅನ್ಯಾಯವಾದರೂ ಪಕ್ಷದಲ್ಲೇ ಮುಂದುವರೆಯಲಿದ್ದೇನೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶಟ್ಟಿ ಹೇಳಿದರು.

Advertisement

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಎರಡು ಬಾರಿ ಟಿಕೆಟ್ ತಪ್ಪಿದೆ. ಪಕ್ಷದ ವರಿಷ್ಠರು ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಸೂಚಿಸಿದರೂ ನಾನು ಒಪ್ಪಿಲ್ಲ. ಬೇರೆ ಕ್ಷೇತ್ರದಲ್ಲೂ ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಗಾಗಿ ದುಡಿದಿರುತ್ತಾರೆ. ಅವರಿಗೆ ತೊಂದರೆ ಆಗುವುದು ಬೇಡವೆಂದು ಅನ್ಯ ಕ್ಷೇತ್ರದ ಆಯ್ಕೆಗೆ ಮುಂದಾಗಿಲ್ಲ ಎಂದರು.

ರಾಜಕೀಯ ನಾಯಕರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಲಿಂಗಾಯತ ಒಳ‌ ಪಂಗಡಗಳ ಹೆಸರನ್ನು ಮುಂಚೂಣಿಗೆ ತರುವುದು ಸರಿಯಲ್ಲ. ಅನ್ಯ ಒಳ ಪಂಗಡದವರು ಮಾತನಾಡುವಾಗ ಬಣಜಿಗ ಸಮಾಜದವರು ಮಾತನಾಡಿದ್ದು ತಪ್ಪೇನಲ್ಲ‌ ಎಂದರು.

ಇದನ್ನೂ ಓದಿ:ಕಾಂಗ್ರೆಸ್‌ಗೆ ತಾಕತ್ತಿದ್ರೆ ಲಿಂಗಾಯಿತ ಸಿಎಂ ಘೋಷಣೆ ಮಾಡಲಿ: ಮುರುಗೇಶ್ ನಿರಾಣಿ

ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿ ತಮ್ಮನ್ನು ತಾವೇ ಸ್ಟಾರ್ ಪ್ರಚಾರಕ ಎಂದು ಭಾವಿಸಿದ್ದಾರೆ. ನನ್ನ ಬಗ್ಗೆ ಕನಿಷ್ಟ ಸೌಜನ್ಯ ಇಲ್ಲದ, ನನ್ನನ್ನು ಸಂಪರ್ಕಿಸಿ ಮಾತನಾಡಿಲ್ಲ.‌ ಹೀಗಾಗಿ ನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವ ಮಾತೇ ಇಲ್ಲ. ಪಕ್ಷದ ಯಾರೇ ಮನವೊಲಿಸಲು ಮುಂದಾದರೂ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಆದರೆ ಇತರೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳುವುದಾಗಿ ಸ್ಪಷ್ಟಪಡಿಸಿದರು.

Advertisement

ನನ್ನ ಮನಸ್ಸು ಹೇಳಿದಂತೆ ಕೆಲಸ ಮಾಡುತ್ತೇನೆ, ನನ್ನ ಶಕ್ತಿ ಏನೆಂದು ನನಗೆ ಗೊತ್ತಿದೆ. ಹಿತೈಷಿಗಳ ಸಭೆ ಕರೆದಾಗ ಪಕ್ಷೇತರರಾಗಿ, ಇಲ್ಲವೇ ಅನ್ಯ ಪಕ್ಷದಿಂದ ಸ್ಪರ್ಧಿಸುವ ಸಲಹೆ ಬಂತು. ನನಗೆ ಟಿಕೆಟ್ ಕೈತಪ್ಪಿದ ಬಳಿಕ ಪಕ್ಷದ ವರಿಷ್ಠರು ಯಾರೂ ನನ್ನನ್ನು ಸಂಪರ್ಕಿಸಿಲ್ಲ, ಯಾರೂ ಸಂತೈಸಲಿ ಎಂದು ನಾನು ಬಯಸುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next