Advertisement
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೋಳನಹಳ್ಳಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯೋಗಾನಂದಕುಮಾರ್ ಹಾಗೂ ಗ್ರಾಮದ ಬೂತ್ ಅಧ್ಯಕ್ಷ ಕುಮಾರ್‌ರವರ ಮನೆಗಳ ಮೇಲೆ ಪಕ್ಷದ ಧ್ವಜವನ್ನು ಕಟ್ಟುವ ಮೂಲಕ ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಿಜೆಪಿ ಪಕ್ಷ ವಿಭಿನ್ನ ಮತ್ತು ವಿಶಿಷ್ಟವಾಗಿದ್ದು ಕಾರ್ಯಕರ್ತರು ಮತ್ತು ಮತದಾರರ ಪಕ್ಷವಾಗಿದೆ ಅದಕ್ಕೆ ಉದಾಹರಣೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ಮುಖ್ಯಮಂತ್ರಿಗಳು, ನಾನು ಹಾಗೂ ನಮ್ಮ ಪಕ್ಷದ ಎಲ್ಲಾ ಹಿರಿಯರು ಸಹ ಸಾಮಾನ್ಯ ಬೂತ್ ಮುಖಂಡನ ಮನೆಗೆ ತೆರಳಿ ಧ್ವಜವನ್ನು ಕಟ್ಟುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುತ್ತಿದ್ದೇವೆ. ಇದೀಗ ಪಕ್ಷ ಸರ್ವ ವ್ಯಾಪ್ತಿಯಾಗಿ ವಿಸ್ತರಿಸಿದೆ.ಇದನ್ನು ಕಾಂಗ್ರೆಸ್ ಪಕ್ಷದಲ್ಲಿ ನೋಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಒಬ್ಬ ಸಾಮಾನ್ಯ ಬೂತ್ ಮುಖಂಡನ ಮನೆಗೆ ಬರುತ್ತಾರೆಯೇ ಅದನ್ನು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಬಡವರಿಗೆ ಎಟಿಎಂ ಕೊಡಲು ಮೋದಿ ಬರಬೇಕಾಯಿತು. ರೈತರಿಗೆ, ಸಾಮಾನ್ಯರಿಗೆ, ದೀನ ದಲಿತರಿಗೆ ಅನುದಾನಗಳನ್ನು ನೀಡಲು, ಉಜ್ವಲ್ ಯೋಜನೆ ನೀಡಲು, ಉಚಿತ ವಿದ್ಯುತ್, ನೀರು, ಮನೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬಿಜೆಪಿ ಬರಬೇಕಾಯಿತು ಎಂದರು.
ವಿರೋಧ ಪಕ್ಷಗಳು ನಮ್ಮ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡುತ್ತಿವೆ ಹೊರತು ಮತದಾರರು ಮತ್ತು ಜನರಲ್ಲ. ನಮ್ಮದು ಅಭಿವೃದ್ಧಿ ಆಡಳಿತ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಉತ್ತಮ ಸಂಘಟನೆ ಮಾಡಿ ಪ್ರಧಾನಮಂತ್ರಿಯವರ ಆಶಯದಂತೆ ಮನ್ ಕಿ ಬಾತ್ ಕಾರ್ಯಕ್ರಮಗಳನ್ನು ಎಲ್ಲಾ ಕಡೆಯೂ ಪ್ರಸಾರ ಮಾಡಿ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಿರುವ ಪ್ರಮುಖ ಕೆಲಸ ಕಾರ್ಯಗಳನ್ನು ಪ್ರತಿ ಮನೆಮನೆಗೂ ತೆರಳಿ ಪೇಜ್ ಪ್ರಮುಖರು, ಬೂತ್ ಮುಖಂಡರುಗಳು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳ ಮುಖಾಂತರ ಮತದಾರರನ್ನು ನಮ್ಮ ಪಕ್ಷದ ಕಡೆ ಬರುವಂತೆ ಮಾಡಬೇಕೆಂದರು.
Related Articles
Advertisement