Advertisement

ಕಪಾಳ ಮೋಕ್ಷ ಪ್ರಕರಣ : ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ವಿಲ್‌ ಸ್ಮಿತ್‌ಗೆ 10 ವರ್ಷ ನಿಷೇಧ

08:51 PM Apr 09, 2022 | Team Udayavani |

ನವದೆಹಲಿ: ಕೆಲವು ದಿನಗಳ ಹಿಂದೆ ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರೂಪಕ ಕ್ರಿಸ್‌ ರಾಕ್‌ ಕೆನ್ನೆಗೆ ಬಾರಿಸಿದ್ದ ಖ್ಯಾತ ನಟ ವಿಲ್‌ ಸ್ಮಿತ್‌ ಅವರಿಗೆ ಮುಂದಿನ ಹತ್ತು ವರ್ಷಗಳ ಕಾಲ ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವಂತೆ ಆಸ್ಕರ್‌ ಸಂಘಟಕರು ನಿಷೇಧ ಹೇರಿದ್ದಾರೆ.

Advertisement

ಮಾ.27ರಂದು ಕ್ಯಾಲಿಫೋರ್ನಿಯದಲ್ಲಿ ಆಸ್ಕರ್‌ ಪ್ರಶಸ್ತಿ ಪ್ರದಾನ ನಡೆದಿತ್ತು. ಆ ವೇಳೆ ನಿರೂಪಕ ಕ್ರಿಸ್‌ ರಾಕ್‌, ವಿಲ್‌ ಸ್ಮಿತ್‌ರ ಪತ್ನಿ ಜೇಡ್‌ ಪಿಂಕೆಟ್‌ರವರ ಬೋಳು ತಲೆಯ ಬಗ್ಗೆ ಹಾಸ್ಯ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಸ್ಮಿತ್‌, ವೇದಿಕೆಯ ಮೇಲೆ ಹೋಗಿ ರಾಕ್‌ರವರಿಗೆ ಕಪಾಳಮೋಕ್ಷ ಮಾಡಿದ್ದರು.

ಇದನ್ನೂ ಓದಿ : ಅಸಾರಾಮ್‌ ಬಾಪು ಪ್ರಕರಣ : ಸಂತ್ರಸ್ತೆ ಕುಟುಂಬಕ್ಕೆ ಬೆದರಿಕೆ, ಪೊಲೀಸರಿಂದ ಭದ್ರತೆ

 

Advertisement

Udayavani is now on Telegram. Click here to join our channel and stay updated with the latest news.

Next