Advertisement
ಡಿಎಂಕೆಯ ಶಿವಾಜಿ ಕೃಷ್ಣಮೂರ್ತಿ ಅವರು ಸಭೆಯೊಂದರಲ್ಲಿ ರಾಜ್ಯಪಾಲರಾದ ಆರ್.ಎನ್.ರವಿ ಅವರ ಮೇಲೆ ಗುಡುಗುವ ಭರದಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಜ್ಯಪಾಲರನ್ನು ನಿಂದಿಸಬೇಡಿ ಎಂದು ಸಿಎಂ ಹೇಳುತ್ತಿದ್ದಾರೆ. ಅವರು ಭಾಷಣವನ್ನು ಸರಿಯಾಗಿ ಓದಿದ್ದರೆ ನಾನು ಅವರ ಕಾಲಿಗೆ ಹೂವುಗಳನ್ನು ಇಟ್ಟು ಕೈಮುಗಿದು ಧನ್ಯವಾದ ಹೇಳುತ್ತಿದ್ದೆ. ಆದರೆ ಅಂಬೇಡ್ಕರ್ ಹೆಸರು ಹೇಳಲು ನಿರಾಕರಿಸಿದರೆ ಚಪ್ಪಲಿಯಿಂದ ಹೊಡೆಯುವ ಹಕ್ಕು ನನಗಿಲ್ಲವೇ? ನೀವು ಅಂಬೇಡ್ಕರ್ ಹೆಸರನ್ನು ಹೇಳಲು ನಿರಾಕರಿಸಿದರೆ, ನೀವು ಕಾಶ್ಮೀರಕ್ಕೆ ಹೋಗಿ. ನಿಮ್ಮನ್ನು ಗುಂಡಿಕ್ಕಿ ಕೊಲ್ಲಲು ನಾವು ಒಬ್ಬ ಭಯೋತ್ಪಾದಕನನ್ನು ಕಳುಹಿಸುತ್ತೇವೆ” ಎಂದು ಶಿವಾಜಿ ಕೃಷ್ಣಮೂರ್ತಿ ಸಭೆಯಲ್ಲಿ ಹೇಳಿದ್ದಾರೆ.
Related Articles
Advertisement
ಇತ್ತೀಚೆಗೆ ಸದನದಲ್ಲಿ ಸರ್ಕಾರದಿಂದ ಮುದ್ರಿಸಿ ಅಂಗೀಕರಿಸಿದ ಭಾಷಣವನ್ನು ರಾಜ್ಯಪಾಲರು ಸಂಪೂರ್ಣವಾಗಿ ಓದದೇ ಬಿಟ್ಟಿದ್ದರು. ಇದಕ್ಕೆ ಸಿಎಂ ಸ್ಟಾಲಿನ್ ಭಾಷಣದ ಕೆಲವು ಭಾಗಗಳನ್ನು ಬಿಟ್ಟು ಹೋಗಿದ್ದಾರೆ ಮತ್ತು “ವಿಧಾನಸೌಧದ ಶಿಷ್ಟಾಚಾರಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿ ನಡೆದುಕೊಂಡಿದ್ದಾರೆ” ಎಂದು ಆರೋಪಿಸಿದ್ದರು.