Advertisement

ಮಸೂದ್‌ ಜಾಗತಿಕ ಉಗ್ರನೆಂದು ಘೋಷಿಸುವುದಕ್ಕೆ ನಾವು ಬದ್ಧ: ಫ್ರಾನ್ಸ್‌

06:24 AM Mar 07, 2019 | Team Udayavani |

ಹೊಸದಿಲ್ಲಿ : ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ಪದದ ಬಲದಲ್ಲಿ ನಾವು ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವುದಕ್ಕೆ ಪೂರ್ಣ ಒತ್ತು ನೀಡುವೆವು’ ಎಂದು ಫ್ರಾನ್ಸ್‌ ಹೇಳಿದೆ.

Advertisement

ಇದೇ ವೇಳೆ ಪಾಕ್‌ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮೇಲೆ ಹೆಚ್ಚಿನ ಒತ್ತಡವನ್ನು ಹೇರುವೆವು ಎಂದೂ ಫ್ರಾನ್ಸ್‌ ಹೇಳಿದೆ. 

ಭಾರತದಲ್ಲಿ ಫ್ರಾನ್‌ ರಾಯಭಾರಿಯಾಗಿರುವ ಅಲೆಕ್ಸಾಂಡರ್‌ ಝೀಗ್‌ಲರ್‌ ಅವರು ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ, “ಭಾರತದ ಹಾಗೆ ಫ್ರಾನ್ಸ್‌ ಕೂಡ ಈಚಿನ ವರ್ಷಗಳಲ್ಲಿ  ಭಯೋತ್ಪಾದನೆಯಿಂದ ತೀವ್ರವಾಗಿ ಬಾಧಿತವಾಗಿದೆ; ಮಸೂದ್‌ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸದೆ ಇರುವುದು ಅರ್ಥಹೀನ’ ಎಂದು ಹೇಳಿದರು. 

ನಿಜಕ್ಕಾದರೆ ನಾವು ಕಳೆದ ವರ್ಷಗಳಿಂದಲೂ ಜೆಇಎಂ ಮುಖ್ಯಸ್ಥ ಮಸೂದ್‌ ಅಜರ್‌ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ಯತ್ನವನ್ನು ಮಾಡುತ್ತಿದ್ದೇವೆ. ಜೆಇಎಂ ಸಂಘಟನೆಯನ್ನು ಜಾಗತಿಕ ಉಗ್ರ ಸಂಘಟನೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಘೋಷಿಸಿರುವಾಗ ಅದರ ಮುಖ್ಯಸ್ಥನಾಗಿರುವ ಮಸೂದ್‌ನನ್ನು  ಜಾಗತಿಕ ಉಗ್ರನೆಂದು ಘೋಷಿಸದೇ ಇರುವುದಲ್ಲಿ ಅರ್ಥವೇ ಇಲ್ಲ’ ಎಂದು ಅಲೆಕ್ಸಾಂಡರ್‌  ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next