Advertisement

KKR ಪಾಲಾಗುವರೇ ಸರ್ಫರಾಜ್‌ ಖಾನ್‌?

11:19 PM Feb 21, 2024 | Team Udayavani |

ಕೋಲ್ಕತಾ: ರಾಜ್‌ಕೋಟ್‌ನಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿ ಎರಡೂ ಇನ್ನಿಂಗ್ಸ್‌ಗಳಲ್ಲಿ 60 ಪ್ಲಸ್‌ ರನ್‌ ಬಾರಿಸಿದ ಸರ್ಫರಾಜ್‌ ಖಾನ್‌ ಮೇಲೀಗ ಐಪಿಎಲ್‌ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಅವರನ್ನು ಸೆಳೆಯಲು 3 ಫ್ರಾಂಚೈಸಿಗಳು ಮುಂದಾಗಿದ್ದು, ಇದರಲ್ಲಿ ಕೋಲ್ಕತಾ ನೈಟ್‌ರೈಡರ್ ಮುಂದಿದೆ. ಉಳಿದೆರಡು ತಂಡಗಳೆಂದರೆ ಚೆನ್ನೈ ಮತ್ತು ಆರ್‌ಸಿಬಿ.

Advertisement

ಗೌತಮ್‌ ಗಂಭೀರ್‌ ಸಲಹೆ
ಎರಡು ಬಾರಿಯ ಐಪಿಎಲ್‌ ಚಾಂಪಿಯನ್‌ ಆಗಿರುವ ಕೆಕೆಆರ್‌ ತನ್ನ ಮಧ್ಯಮ ಕ್ರಮಾಂಕವನ್ನು ಗಟ್ಟಿಗೊಳಿಸಲು ಸರ್ಫರಾಜ್‌ ಜತೆ ಒಪ್ಪಂದಕ್ಕೆ ಮುಂದಾಗಿದೆ. ತಂಡದ ಮಾಜಿ ನಾಯಕ ಹಾಗೂ ಹಾಲಿ ಮೆಂಟರ್‌ ಆಗಿರುವ ಗೌತಮ್‌ ಗಂಭೀರ್‌ ಅವರ ಸಲಹೆ ಮೇರೆಗೆ ಇಂಥದೊಂದು ಪ್ರಯತ್ನ ಸಾಗುತ್ತಿದೆ.

2024ರ ಐಪಿಎಲ್‌ ಹರಾಜಿಗೂ ಮುನ್ನ ಸರ್ಫರಾಜ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಬಿಡುಗಡೆಗೊಳಿಸಿತ್ತು. ಆದರೆ ಹರಾಜಿನಲ್ಲಿ ಇವರನ್ನು ಖರೀದಿಸಲು ಯಾರೂ ಮುಂದಾಗಿರಲಿಲ್ಲ. ಇದಕ್ಕೆ ಅವರ ಕಳಪೆ ನಿರ್ವಹಣೆಯೂ ಕಾರಣವಾಗಿತ್ತು. 50 ಐಪಿಎಲ್‌ ಪಂದ್ಯಗಳಲ್ಲಿ ಕೇವಲ 585 ರನ್‌ ಗಳಿಸಿದ್ದರು.

2015ರಲ್ಲಿ ಪ್ರವೇಶ
ಸರ್ಫರಾಜ್‌ ಖಾನ್‌ 2015ರಲ್ಲಿ ಆರ್‌ಸಿಬಿ ಮೂಲಕ ಐಪಿಎಲ್‌ ಪ್ರವೇಶಿಸಿದ್ದರು. 2019ರ ಸೀಸನ್‌ಗೂ ಮುನ್ನ ಇವರನ್ನು ಬಿಡುಗಡೆ ಮಾಡಲಾಯಿತು. ಅನಂತರ ಪಂಜಾಬ್‌ ಹಾಗೂ ಡೆಲ್ಲಿ ಪಾಲಾಗಿದ್ದರು.
ಸಫìರಾಜ್‌ ಅವರನ್ನು ಖರೀದಿಸಲು ಮುಂದಾಗಿರುವ ಮೂರೂ ಫ್ರಾಂಚೈಸಿಗಳ ಬಳಿ ದೊಡ್ಡ ಮೊತ್ತವಿದೆ. ಆರ್‌ಸಿಬಿ 2.85 ಕೋಟಿ ರೂ., ಕೆಕೆಆರ್‌ 35 ಕೋಟಿ ರೂ. ಮತ್ತು ಚೆನ್ನೈ ಒಂದು ಕೋಟಿ ರೂ. ಹೊಂದಿದೆ. ಸಫìರಾಜ್‌ ಅವರ ಮೂಲ ಬೆಲೆ 20 ಲಕ್ಷ ರೂ. ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next