ಮುಂಬಯಿ : ಅಕ್ಟೋಬರ್-ನವೆಂಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ನಲ್ಲಿ ನಾಯಕ ರೋಹಿತ್ ಶರ್ಮಾ, ಉಪ ನಾಯಕ ಕೆ ಎಲ್ ರಾಹುಲ್ ಮತ್ತು ತಂಡದ ಪ್ರೀಮಿಯರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಳ್ಳುತ್ತಾರೆಯೇ ಎಂಬುದು ಚರ್ಚೆಯಲ್ಲಿರುವ ಒಂದು ಅಂಶವಾಗಿದೆ.
ರೋಹಿತ್ ಅವರ ಪ್ರಸ್ತುತ ಐಪಿಎಲ್ ಫಾರ್ಮ್ ಆತ್ಮವಿಶ್ವಾಸವನ್ನು ಪ್ರೇರೇಪಿಸದೇ ಇರಬಹುದು ಆದರೆ ನಾಯಕನಾಗಿ ಅವರು ಭಾರತ ತಂಡದಲ್ಲಿ ಅನಿವಾರ್ಯವಾಗುತ್ತಾರೆ. ಆದರೆ ತಂಡದ ಲಾಭಕ್ಕಾಗಿ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯನ್ನು ಪರಿಗಣಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಕೊನೆಯ ಟಿ 20 ವಿಶ್ವಕಪ್ ನಲ್ಲಿ, ಅವರ ಬ್ಯಾಟಿಂಗ್ ಕ್ರಮಾಂಕವು ಅನುಕೂಲಕರ ಫಲಿತಾಂಶಗಳನ್ನು ನೀಡಲಿಲ್ಲ ಮತ್ತು ಮೊದಲ ಮೂವರ ವಿಧಾನವನ್ನು ಸ್ವಲ್ಪ ಟೀಕಿಸಲಾಗಿತ್ತು.
ಇನ್ನೊಂದೆಡೆ ಪ್ರಸಕ್ತ ಐಪಿಎಲ್ ನಲ್ಲಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿ ಉತ್ತಮ ನಿರ್ವಹಣೆ ತೋರುತ್ತಿರುವ ದಿನೇಶ್ ಕಾರ್ತಿಕ್ ಅವರು ಭಾರತ ರಂದಕ್ಕೆ ಸೇರ್ಪಡೆಯಾಗುತ್ತಾರೋ ಎನ್ನುವ ಪ್ರಶ್ನೆ ಮೂಡಿದೆ.
ಈ ಹಂತದಲ್ಲಿ ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ಅಂತಹ ಯಾವುದೇ ಆಲೋಚನೆಗಳನ್ನು ದೂರದಿಂದಲೂ ಮಾಡುತ್ತಿಲ್ಲ ಎನ್ನಲಾಗಿದೆ.