ಇಸ್ಲಾಮಾಬಾದ್: ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ರವಿವಾರ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.
ಪಾಕಿಸ್ಥಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಆಯೋಜಿಸಲಾಗಿರುವ ಬೃಹತ್ ರ್‍ಯಾಲಿಯಲ್ಲಿ ಹುದ್ದೆ ತ್ಯಜಿಸುವ ಬಗ್ಗೆ ನಿರ್ಧಾರ ಪ್ರಕಟಿಸುವ ಇರಾದೆ ಹೊಂದಿದ್ದಾರೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.
ಜತೆಗೆ ಅವಧಿಪೂರ್ವ ಚುನಾವಣೆಯನ್ನೂ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಹಣಕಾಸು ಅಕ್ರಮವೊಂದಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಬಂಧನವಾಗುವ ಸಾಧ್ಯತೆಗಳ ಬಗ್ಗೆಯೂ ವದಂತಿಗಳು ಪಾಕಿಸ್ಥಾನದಲ್ಲಿ ಹಬ್ಬಿವೆ.
ಪಾಕಿಸ್ಥಾನದ ಆಡಳಿತದ ಕೀಲಿ ಕೈ ಹೊಂದಿರುವ ಸೇನೆಯೂ ಕೂಡ ಪ್ರಧಾನಿ ಖಾನ್ ಮೇಲೆ ನಂಬಿಕೆ ಕಳೆದುಕೊಂಡಿದೆ.
50 ಸಚಿವರು ನಾಪತ್ತೆ?: ಇದೇ ವೇಳೆ, 50 ಮಂದಿ ಸಚಿವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಸೋಮವಾರ ಪಾಕ್ ಸಂಸತ್‌ನ ಕೆಳಮನೆ ನ್ಯಾಶನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆ ಯಾಗಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.
50 ಮಂದಿಯ ಪೈಕಿ ಇಮ್ರಾನ್ ಸರಕಾರದ 25 ಮಂದಿ ಸಚಿವರು, ಸಲಹೆಗಾರರು, ಉಳಿದವರು ಪ್ರಾಂತೀಯ ಸರಕಾರಗಳ ಸಚಿವರು ಎಂದು “ದ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.