Advertisement

ಪಠ್ಯಪುಸ್ತಕ ಸಮಿತಿ ರದ್ದು ಮಾಡಿಲ್ಲ, ಹೊಸ ಸಮಿತಿ ರಚನೆಯ ಅವಶ್ಯಕತೆಯಿಲ್ಲ: ಸಿಎಂ ಬೊಮ್ಮಾಯಿ

11:29 AM Jun 04, 2022 | Team Udayavani |

ಚಿತ್ರದುರ್ಗ: ಪಠ್ಯಪುಸ್ತಕ ಸಮಿತಿ ವಿಸರ್ಜನೆಯಾಗಿದೆ, ರದ್ದು ಮಾಡಿಲ್ಲ. ಹೊಸ ಸಮಿತಿ ರಚನೆಯ ಅವಶ್ಯಕತೆಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಚಿತ್ರದುರ್ಗದ ದೇವರಕೊಟ್ಟ ಗ್ರಾಮದಲ್ಲಿ ಮಾತನಾಡಿದ ಅವರು, ನಮ್ಮದು ಬಸವ ಪಥದ ಸರ್ಕಾರ ಎಂದು ಮೊದಲೇ ಹೇಳಿದ್ದೇನೆ. ನಾನೂ ಕೂಡ ಹೊಸ ಪಠ್ಯ ಪುಸ್ತಕ ತರಿಸಿಕೊಂಡು ಓದಿದ್ದೇನೆ. ಬಸವಣ್ಣನವರು ರಚಿಸಿದ ಹಲವಾರು ಅತ್ಯುತ್ತಮ ವಚನಗಳಿವೆ. ಬಸವಣ್ಣನವರ ಪಠ್ಯದಲ್ಲಿ ಒಂದು ಲೈನ್ ವ್ಯತ್ಯಾಸವಾಗಿದೆ. ಉಳಿದಂತೆ ಬರಗೂರು ಸಮಿತಿ ರಚಿಸಿದ್ದ ಪಠ್ಯದಲ್ಲಿ ಇದ್ದಂತೆಯೇ ಇದೆ. ಬಸವಣ್ಣನವರ ಪಠ್ಯದ ವ್ಯತ್ಯಾಸ ಸರಿಪಡಿಸುತ್ತೇವೆ ಎಂದರು.

ಇದನ್ನೂ ಓದಿ:ಕನ್ನಡಿಗರ ಮೇಲೆ ಮತ್ತೆ ದೌರ್ಜನ್ಯ: ಬಸ್ ಚಾಲಕ, ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ

ಸಾಣೆಹಳ್ಳಿ ಶ್ರೀಗಳಿಗೆ ಬಸವಣ್ಣನವರ ಪಠ್ಯದ ಬಗ್ಗೆ ಮನವರಿಕೆ ಮಾಡಿದ್ದೇವೆ. ಆದಷ್ಟು ಶೀಘ್ರದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಒದಗಿಸುತ್ತೇವೆ. ಹೆಗಡೇವಾರ್ ಭಾಷಣದ ಪಠ್ಯ ಕೈ ಬಿಡುವುದಿಲ್ಲ. ಅದರಲ್ಲಿ ತಪ್ಪೇನಿದೆ ಎಂದು ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡರು.

ಮಂದಿರ ಮಸೀದಿ ವಿವಾದ ವಿಚಾರದ ಪ್ರಶ್ನೆಗೆ ಉತ್ತರಿಸಲು ಸಿಎಂ ಬಸವರಾಜ ಬೊಮ್ಮಾಯಿ ನಿರಾಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next