Advertisement

ಪಠಾಣ್‌ ಸಿನಿಮಾ ಮೇಲೆ ನಿಷೇಧಕ್ಕೆ ಉಲೇಮಾ ಮಂಡಳಿ ಒತ್ತಾಯ

07:19 PM Dec 17, 2022 | Team Udayavani |

ಮುಜಾಫ‌ರ್‌ಪುರ/ಭೋಪಾಲ: ಮುಂದಿನ ತಿಂಗಳು ತೆರೆ ಕಾಣಲಿರುವ “ಪಠಾಣ್‌’ ಸಿನಿಮಾದಲ್ಲಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರಲಾಗಿದೆ. ಹೀಗಾಗಿ, ಅದರ ಮೇಲೆ ನಿಷೇಧ ಹೇರಬೇಕು ಎಂದು ಮಧ್ಯಪ್ರದೇಶ ಉಲೇಮಾ ಮಂಡಳಿ ಒತ್ತಾಯಿಸಿದೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಡಳಿ ಅಧ್ಯಕ್ಷ ಸಯ್ಯದ್‌ ಅನಸ್‌ ಅಲಿ, ಅದರಲ್ಲಿ ಅಶ್ಲೀಲತೆ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಅಂಶಗಳು ಇವೆ ಎಂದು ತಮಗೆ ಫೋನ್‌ ಮತ್ತು ಖುದ್ದಾಗಿ ಹಲವು ದೂರುಗಳು ಸಲ್ಲಿಕೆಯಾಗಿವೆ.

ಹೀಗಾಗಿ, ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದ್ದಾರೆ. ಸಾರ್ವಜನಿಕರಿಗೆ, ಸರ್ಕಾರದವರಿಗೆ, ಯೋಧರಿಗೆ ಸಿನಿಮಾ ವೀಕ್ಷಣೆ ಮಾಡದಂತೆ ಮನವಿ ಮಾಡುವುದಾಗಿಯೂ ಅಲಿ ಒತ್ತಾಯಿಸಿದ್ದಾರೆ.

ಕೋರ್ಟ್‌ಗೆ ದೂರು:
“ಪಠಾಣ್‌’ ಸಿನಿಮಾದ “ಬೇಷರಮ್‌ ರಂಗ್‌’ ಹಾಡು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ, ನಟ ಶಾರುಖ್‌ ಖಾನ್‌ ಮತ್ತು ನಟಿ ದೀಪಿಕಾ ಪಡುಕೋಣೆ ವಿರುದ್ಧ ಐಎಫ್ಆರ್‌ ದಾಖಲಿಸಲು ಅನುಮತೆ ಕೋರಿ ಬಿಹಾರದ ಮುಜಾಫ‌ರ್‌ಪುರ ಜಿಲ್ಲಾ ನ್ಯಾಯಾಲಯಲ್ಲಿ ದೂರು ಅರ್ಜಿ ದಾಖಲಾಗಿದೆ. ಜ.3ರಂದು ವಿಚಾರಣೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next