Advertisement

ನಿತೀಶ್ 4ನೇ ಬಾರಿ ಸಿಎಂ ಆಗಿ ಆಯ್ಕೆಯಾಗುತ್ತಾರೆಯೇ?ಬಿಹಾರ ಪ್ರಥಮ ಹಂತ: ಶೇ.52ರಷ್ಟು ಮತದಾನ

06:41 PM Oct 28, 2020 | Nagendra Trasi |

ಪಾಟ್ನಾ: ಬಿಹಾರ ವಿಧಾನಸಭೆಯ ಪ್ರಥಮ ಹಂತದ ಚುನಾವಣೆಯಲ್ಲಿ ಸಂಜೆ 5ಗಂಟೆವರೆಗೆ ಶೇ.52.08ರಷ್ಟು ಮತದಾನ ನಡೆದಿದ್ದು, ನಿತೀಶ್ ಕುಮಾರ್ ಅವರು ನಾಲ್ಕನೇ ಬಾರಿಯೂ ಸತತವಾಗಿ ಆಯ್ಕೆಯಾಗಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.

Advertisement

ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಲ್ಲಿನ 71 ಸ್ಥಾನಕ್ಕೆ ಬುಧವಾರ(ಅಕ್ಟೋಬರ್ 28,2020) ಮೊದಲ ಹಂತದ ಮತದಾನ ನಡೆದಿದೆ. ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ಚುನಾವಣಾ ಆಯೋಗ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿತ್ತು.

ಇಂದು ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದ್ದು, ಹಲವೆಡೆ ಇವಿಎಂ ಯಂತ್ರಗಳ ದೋಷದಿಂದಾಗಿ ಮತದಾನ ಸ್ಥಗಿತಗೊಂಡಿತ್ತು. ಸಂಜೆ 6ಗಂಟೆ ತನಕ ಮತದಾನ ನಡೆಯಿತು.

ಇವಿಎಂ ಯಂತ್ರಗಳಿಗೆ ಸ್ಯಾನಿಟೈಜೇಶನ್, ಧರ್ಮಲ್ ಸ್ಕ್ಯಾನಿಂಗ್, ಹ್ಯಾಂಡ್ ಸ್ಯಾನಿಟೈಸರ್, ನೀರು ಲಭ್ಯವಾಗುವಂತೆ ಚುನಾವಣಾ ಆಯೋಗ ವ್ಯವಸ್ಥೆ ಮಾಡಿತ್ತು. ಕೋವಿಡ್ ನಂತರ ದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ವಾರಗಳ ಕಾಲ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟವಾದ ಭಾರತೀಯ ಜನತಾ ಪಕ್ಷ ಮತ್ತು ನಿತೀಶ್ ಕುಮಾರ್ ನೇತೃತ್ವದ ಜನತಾದಳ ಪ್ರತ್ಯೇಕವಾಗಿ ಸಭೆ, ಸಮಾವೇಶ ನಡೆಸಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next