Advertisement

ನಟನೆಯಿಂದ ನಿವೃತ್ತಿ… : ನಟ ಶಾರುಖ್ ಖಾನ್ ಹೇಳಿದ್ದೇನು?

10:03 PM Feb 20, 2023 | Team Udayavani |

ಮುಂಬೈ: ಪಠಾಣ್ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು “ನಟನೆಯಿಂದ ಎಂದಿಗೂ ನಿವೃತ್ತಿಯಾಗುವುದಿಲ್ಲ” ಎಂದು ಸೋಮವಾರ ಹೇಳಿದ್ದಾರೆ.

Advertisement

ಟ್ವಿಟರ್‌ನಲ್ಲಿ #AskSRK ಸೆಷನ್‌ನಲ್ಲಿ, 57 ವರ್ಷದ ನಟ ಶಾರುಖ್ ಖಾನ್  ಅವರು ”ನನ್ನನ್ನು ವಜಾ ಮಾಡಿದರೂ ಬೌನ್ಸ್ ಆಗಿ ಹಿಂತಿರುಗುತ್ತೇನೆ” ಎಂದು ಹೇಳಿದ್ದಾರೆ.

“ನಾನು ಎಂದಿಗೂ ನಟನೆಯಿಂದ ನಿವೃತ್ತಿಯಾಗುವುದಿಲ್ಲ … ನನ್ನನ್ನು ವಜಾಗೊಳಿಸಬೇಕಾಗುತ್ತದೆ … ಮತ್ತು ಬಹುಶಃ ನಂತರವೂ ನಾನು ಹಿಂತಿರುಗುತ್ತೇನೆ” ಎಂದು ಶಾರುಖ್ ಅವರು ನಿವೃತ್ತಿಯ ನಂತರ ಬಾಲಿವುಡ್‌ನ ದೊಡ್ಡ ಸೂಪರ್‌ಸ್ಟಾರ್ ಅವರ ಉತ್ತರಾಧಿಕಾರಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಅಭಿಮಾನಿಗೆ ಪ್ರತಿಕ್ರಿಯೆ ನೀಡಿದ್ದಾರೆ.

”ನಟನೆಯನ್ನು ಮುಂದುವರೆಸುತ್ತಿರುವಾಗ ಪರದೆಯ ಮೇಲೆ ನನ್ನನ್ನು ನೋಡುವುದು ವಿಚಿತ್ರವಾಗಿರುತ್ತದೆ” ಎಂದು ಹೇಳಿದರು.

”ಈಗ ನಾನು ಏನನ್ನು ಮಾಡಲು ಇಷ್ಟಪಡುತ್ತೇನೆ ಎಂದು ನಾನು ಭಾವಿಸುತ್ತೇನೆ … ನಾನು ನಟನಾಗಿ ವಿಕಸನಗೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ನನ್ನ ವೈಯಕ್ತಿಕ ಇಷ್ಟಗಳು ಕಡಿಮೆಯಾಗುತ್ತಿವೆ” ಎಂದು ಪಠಾಣ್ ಚಿತ್ರದ ಯಶಸ್ಸಿನ ಕುರಿತ ಪ್ರಶ್ನೆಗೆ ಉತ್ತರಿಸಿದರು.

Advertisement

ಶಾರುಖ್‌ ಖಾನ್‌ 2023 ರ ಆರಂಭದಲ್ಲಿ ʼಪಠಾಣ್‌ʼ ಮೂಲಕ ಬಾಲಿವುಡ್‌ ನಲ್ಲಿ ದೊಡ್ಡ ಹಿಟ್‌ ಕೊಟ್ಟಿದ್ದಾರೆ. 990 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿರುವ ಸಿನಿಮಾ 1000 ಕೋಟಿ ಕ್ಲಬ್‌ ಸೇರುವ ಸನಿಹದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next