Advertisement

Udupi ಸಚಿವರ ಶಾಲೆಗಳಲ್ಲಿ ಎನ್‌ಇಪಿ ರದ್ದು ಮಾಡಲಾಗುವುದೇ: ಸಿ.ಟಿ. ರವಿ ಪ್ರಶ್ನೆ

11:35 PM Nov 18, 2023 | Team Udayavani |

ಉಡುಪಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಅಳವಡಿಸಿಕೊಳ್ಳಲು ಮುಂದಾ ಗಿರುವ ರಾಜ್ಯ ಸರಕಾರವು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಡಾ| ಜಿ. ಪರಮೇಶ್ವರ್‌, ಎಂ.ಬಿ. ಪಾಟೀಲ್‌ ಸಹಿತ ಕಾಂಗ್ರೆಸ್‌ ನಾಯಕರ ಮಾಲಕತ್ವದ ಸಿಬಿಎಸ್‌ಇ ಶಾಲೆಗಳಲ್ಲಿ ಎನ್‌ಇಪಿ ರದ್ದು ಮಾಡಲಿದೆಯೇ? ಬಡವರ ಮಕ್ಕಳು ಓದುವ ಶಾಲೆಯಲ್ಲಿ ಮಾತ್ರ ರದ್ದು ಏಕೆ ಎಂದು ಮಾಜಿ ಸಚಿವ ಸಿ.ಟಿ. ರವಿ ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ.

Advertisement

ಎನ್‌ಇಪಿ ರದ್ದತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಲಿದೆ. ಎನ್‌ಇಪಿಯಲ್ಲಿ ಏನು ದೋಷವಿದೆ? ಯಾವುದು ಸರಿಯಲ್ಲ ಎನ್ನುವು ದನ್ನು ತೋರಿಸಿ ಸರಿಪಡಿಸಲಿ. ಆದರೆ ಯಾವುದೇ ಚರ್ಚೆ, ತಜ್ಞರ ಅಭಿಪ್ರಾಯ ಪಡೆಯದೇ ರದ್ದು ಮಾಡುವುದು ಸರಿಯಲ್ಲ. ಎನ್‌ಇಪಿ ಉಳಿಸಲು ನಡೆಯುತ್ತಿರುವ ಕೋಟಿ ಸಹಿ ಅಭಿಯಾನಕ್ಕೆ ಬಿಜೆಪಿ ಸಹಕರಿಸಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶಿಕ್ಷಣ ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾ ನೆಯಲ್ಲ. ಕೌಶಲದ ತರಬೇತಿ ನೀಡುವುದು ಅಪರಾಧವೇ? ಮಾತೃಭಾಷೆ ಶಿಕ್ಷಣ, ಭಾಷಾ ಬಾಂಧವ್ಯ ಸೃಷ್ಟಿಸುವುದು ಕಾಂಗ್ರೆಸ್‌ಗೆ ಇಷ್ಟವಿ ಲ್ಲವೇ? ಎನ್‌ಇಪಿಯಲ್ಲಿ ರಾಜಕೀಯ ಮಾಡು ವುದು ಸರಿಯಲ್ಲ. ಸ್ವಾಭಿಮಾನಿ, ಸ್ವಾವಲಂಬಿ ಜನಾಂಗದಿಂದ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಎನ್‌ಇಪಿ ಬೇಕು ಎಂದರು.

ಶಾಡೋ ಸಿಂಎ!
ಕರ್ನಾಟಕದಲ್ಲಿ ವೈಎಸ್‌ಟಿ ಟ್ಯಾಕ್ಸ್ ಎಂಬ ಆರೋಪ ಕೇಳಿ ಬಂದಿತ್ತು. ಈಗ ಆಡಿಯೋ, ವೀಡಿಯೋ ಬಿಡುಗಡೆ ಆಗಿದೆ. ಯತೀಂದ್ರ ಅವರ ನಡೆ ಅನುಮಾನ ಮೂಡಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯತೀಂದ್ರರ ಮಾತಿಗೆ ಹೆಚ್ಚು ಬೆಲೆ, ಮನ್ನಣೆ ಕೊಡುತ್ತಿದ್ದಾರೆ. ಶಾಡೋ ಸಿಎಂ ಗುಟ್ಟಾಗಿ ಉಳಿದಿಲ್ಲ ಎಂದರು. ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ವಕ್ತಾರ ರಾಘವೇಂದ್ರ ಕಿಣಿ ಮತ್ತಿತರರು ಉಪಸ್ಥಿತರಿದ್ದರು.

ಪಕ್ಷ ಇನ್ನಷ್ಟು ಬಲಾಡ್ಯ
ವರಿಷ್ಠರು ಎಲ್ಲವನ್ನೂ ಗಮನಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ. ಪಕ್ಷ ಇನ್ನಷ್ಟು ಬಲಾಡ್ಯ ವಾಗಲಿದೆ ಮತ್ತು ಮುಂಬರುವ ಚುನಾ ವಣೆ ಗಳಲ್ಲಿ ಜಯ ಸಾಧಿಸಲಿದೆ ಎಂದರು ರವಿ.

Advertisement

ಜಮೀರ್‌ ಸಚಿವರಂತೆ ವರ್ತಿಸಲಿ
ಸಚಿವ ಜಮೀರ್‌ ಅಹ್ಮದ್‌ ಅವರು ಸ್ಪೀಕರ್‌ ಸ್ಥಾನ ಸಾಂವಿಧಾನಿಕ ಹುದ್ದೆ ಎಂಬುದನ್ನು ಅರಿ ಯಲಿ. ಸ್ಪೀಕರ್‌ ಸ್ಥಾನ ಮಸೀದಿಯ ಮೌಲ್ವಿಗಳ ಹುದ್ದೆಯಲ್ಲ. ಹಾಗಾಗಿ ಖಾದರ್‌ ಅವರ ಘನತೆ ಹಾಳು ಮಾಡಬೇಡಿ ಎಂದರು.

ಪಕ್ಷ ಎಲ್ಲ ಹುದ್ದೆಗಳನ್ನು ನೀಡಿದೆ. ಶಾಸಕ, ಸಚಿವನನ್ನಾಗಿಸಿದೆ. ಹೀಗಾಗಿ ಯಾವುದೇ ಹುದ್ದೆಗೆ ಅರ್ಜಿ ಹಾಕುವುದಿಲ್ಲ. ರಾಜ್ಯಾಧ್ಯಕ್ಷರ ರೇಸಿನಲ್ಲೂ ಇರಲಿಲ್ಲ. ಲೋಕಸಭೆ ಚುನಾವಣೆ ಯಲ್ಲಿ ಪಕ್ಷ ಯಾರನ್ನು ಅಭ್ಯರ್ಥಿಯಾಗಿ ಮಾಡಲಿದೆಯೋ ಅವರ ಪರ ದುಡಿಯುವೆ.
– ಸಿ.ಟಿ. ರವಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next