Advertisement
ಹಂಚಿ ತಿನ್ನುವ ಸಂಸ್ಕೃತಿಯಿಂದ ಬಾಣಂತಿ, ಗರ್ಭಿಣಿಯರಿಗೆ ಕೊಟ್ಟ ಆಹಾರ ಪೂರ್ತಿ ತಲುಪುತ್ತಿಲ್ಲ ಎಂಬ ವಾದವನ್ನು ಒಪ್ಪಬಹುದಾದರೂ ಹೊಸ ಯೋಜನೆ ಯಶಸ್ಸಾಗುವುದು ಸಂಶಯ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮನೆಗಳು ಚದುರಿಕೊಂಡು ಇವೆ. ಇಂತಹ ಕಡೆ ಯೋಜನೆ ಕಷ್ಟಸಾಧ್ಯ ಎನ್ನುತ್ತಾರೆ ಉಡುಪಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಿವೃತ್ತ ಅಧಿಕಾರಿ ಸದಾನಂದ ನಾಯಕ್.
ಕರಾವಳಿ, ಮಲೆನಾಡು ಭಾಗಗಳಲ್ಲಿ ಬಾಣಂತಿಯರು, ಗರ್ಭಿಣಿಯರ ಮನೆಗೂ ಅಂಗನವಾಡಿಕೇಂದ್ರಕ್ಕೂ 2- 3 ಕಿ.ಮೀ. ದೂರ ಇವೆ. ಇಷ್ಟು ದೂರ ನಡೆದುಕೊಂಡು ಹೋಗುವುದು ಎಷ್ಟರ ಮಟ್ಟಿಗೆ ಸಾಧ್ಯ? ರಿಕ್ಷಾದಲ್ಲಿ ಹೋಗುವುದು ಲಾಭದಾಯಕವಲ್ಲ. ಇಂತಹ ಫಲಾನುಭವಿಗಳಿಗೆ ಮುಂಬೈಯಲ್ಲಿದ್ದಂತೆ ಡಬ್ಟಾವಾಲರ ಮೂಲಕ ಆಹಾರ ಪೂರೈಸಬೇಕೆಂದು ಉಡುಪಿ ಜಿಲ್ಲಾಧಿಕಾರಿಯವರು ಚಿಂತನೆ ಹರಿಬಿಟ್ಟಿದ್ದಾರೆ. ಮತ್ತೆ ಈ ಆಹಾರ ಹಂಚಿ ತಿನ್ನುವ ಸಂಸ್ಕೃತಿಯಿಂದ ಫಲಾನುಭವಿಗೇ ತಲುಪುವುದು ಶತಃಸಿದ್ಧ ಎಂದು ಹೇಳುವಂತಿಲ್ಲ. ಗರ್ಭಿಣಿಯರು, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ನಡೆದುಕೊಂಡು ಬಂದು ಅವರು ಸಿದ್ಧಪಡಿಸಿಕೊಟ್ಟ ಆಹಾರವನ್ನು ತಿಂದು ಹೋಗುವುದೂ ಸಂಶಯವೇ ಸರಿ. ಅಂಗನವಾಡಿ ಕೇಂದ್ರಗಳಿಗೆ ಪಾತ್ರೆಗಳನ್ನು ಖರೀದಿಸಲು ಯೋಜನೆ ರೂಪಿಸಲಾಗಿದೆ. ಉತ್ತಮ ಆಹಾರ ಸಿಗಬೇಕೆಂಬ ಈ ಯೋಜನೆಯ ಆಹಾರವನ್ನು ಬೇಯಿಸುವುದು ಅತಿ ಕೆಟ್ಟ ಲೋಹದ ಪಾತ್ರೆಗಳಲ್ಲಿ. ಈ ಅಗ್ಗದ ಪಾತ್ರೆಗಳಲ್ಲಿ ಬೇಯಿಸಿದ ಆಹಾರ ಪದಾರ್ಥಗಳು ಎಷ್ಟು ಆರೋಗ್ಯದಾಯಿ ಎಂಬ ಬಗ್ಗೆ ಪೌಷ್ಟಿಕಾಂಶ ತಜ್ಞರು ಮತ್ತೆ ಅಧ್ಯಯನ ನಡೆಸುವುದು ಸೂಕ್ತ. ಒತ್ತಡದಿಂದ ನಡೆಯುತ್ತಿದೆ
ಎಲ್ಲ ಅಂಗನವಾಡಿಗಳಲ್ಲಿ ಆಹಾರ ಬೇಯಿಸಲು ಪಾತ್ರೆಗಳ ಪೂರೈಕೆ ಆಗಿಲ್ಲ. ಇದನ್ನು ಬೇಯಿಸಿ ಕೊಡುವ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಕೊಡುವ ಪ್ರಸ್ತಾವವೇನೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಾಣಂತಿಯರು, ಗರ್ಭಿಣಿಯರು ಅಂಗನವಾಡಿಗಳಿಗೆ ಬಂದರೆ ಅಗತ್ಯವಾದ ಶೌಚಾಲಯದ ವ್ಯವಸ್ಥೆ ಇಲ್ಲ. ಮಳೆ ಬಂದರೆ ರಕ್ಷಣೆಯೂ ಇಲ್ಲ. 10-20 ಜನರು ಬಂದರೆ ಕುಳಿತುಕೊಳ್ಳಲು ಜಾಗವಿಲ್ಲ. ಇದು ರಾಜ್ಯ ಮಟ್ಟದ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಟ್ಟದ ಉಪನಿರ್ದೇಶಕರು, ಸಿಡಿಪಿಒ, ವಲಯದ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು ಹೀಗೆ ಮೇಲಿನಿಂದ ಕೆಳಗೆ
ಕೆಳಗೆ ಬಂದಂತೆ ಒತ್ತಡ ಹೇರಿ ಕೆಲಸ ನಡೆಸುತ್ತಿದ್ದಾರೆ. ಅ. 2ರಂದು ಉದ್ಘಾಟನೆಯಾದ ಬಳಿಕ ಸಮೀಕ್ಷೆ ಮಾಡಿ ನೋಡಿದರೆ ತಿಳಿಯುತ್ತದೆ.
ಪ್ರಾಣೇಶ್ ಹೆಜಮಾಡಿ, ಬಾಲವಿಕಾಸ ಸಮನ್ವಯ ಸಮಿತಿ ಅಧ್ಯಕ್ಷ, ಹೆಜಮಾಡಿ ಕೇಂದ್ರ
Related Articles
Advertisement