Advertisement

ಗುಜರಾತ್‌ ಫ‌ಲಿತಾಂಶದಿಂದ ರಾಜ್ಯ ರಾಜಕೀಯದಲ್ಲೇನಾಗಬಹುದು?

06:25 AM Dec 18, 2017 | |

ಬೆಂಗಳೂರು: ಸೋಮವಾರ ಹೊರಬೀಳಲಿರುವ ಗುಜರಾತ್‌ ವಿಧಾನಸಭೆ ಚುನಾವಣೆ ಫ‌ಲಿತಾಂಶ ರಾಜ್ಯ ರಾಜ್ಯಕಾರಣದಲ್ಲೂ ಸಾಕಷ್ಟು ಬದಲಾವಣೆ ತರಲಿದ್ದು, ಪಕ್ಷಾಂತರ ಪರ್ವಕ್ಕೆ ವೇದಿಕೆ ಸಿದ್ಧವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯದ ಮೂರು ಪ್ರಮುಖ ಪಕ್ಷಗಳ ಮೇಲೆ ಫ‌ಲಿತಾಂಶ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ.

Advertisement

ಬಿಜೆಪಿ ಗೆದ್ದರೆ
ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಅಲೆ ಇನ್ನಷ್ಟು ತೀವ್ರವಾಗಬಹುದು. ಬಿಜೆಪಿಯಿಂದ ಕೆಲವು ಶಾಸಕರು ಬರುವ ನಿರೀಕ್ಷೆ ಹುಸಿಯಾಗಿ ಪಕ್ಷ ತ್ಯಜಿಸುವ ಶಾಸಕರನ್ನು ಉಳಿಸಿಕೊಳ್ಳಲು ಹೆಣಗಾಡಬೇಕು.

ಬಿಜೆಪಿಗೆ ಕಾಂಗ್ರೆಸ್‌ ಆಡಳಿತ ವಿರೋಧಿ ಅಲೆ ಜತೆಗೆ ಪಕ್ಷದ ಪರ ಅಲೆ ರೂಪಿಸಿ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಅನ್ಯ ಪಕ್ಷಗಳಿಂದ ಶಾಸಕರು ಸೇರಿದಂತೆ ಸ್ಥಳೀಯ ಮುಖಂಡರನ್ನು ಸೆಳೆದುಕೊಳ್ಳಬಹುದು.

ಜೆಡಿಎಸ್‌ಗೆ ರಾಜ್ಯದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುವುದು ಕಷ್ಟಸಾಧ್ಯ ಎನ್ನುವ ವಾತಾವರಣದ ಜತೆಗೆ ಬಿಜೆಪಿಯ ಕದ ತಟ್ಟುತ್ತಿರುವ ಶಾಸಕರನ್ನು ಕಾಪಾಡಿಕೊಳ್ಳಲು ಕಸರತ್ತು ಮಾಡಬೇಕಾಗುತ್ತದೆ.

ಕಾಂಗ್ರೆಸ್‌ ಗೆದ್ದರೆ
ಕಾಂಗ್ರೆಸ್‌ಗೆ ಕೇಂದ್ರ ಸರ್ಕಾರದ ವೈಫ‌ಲ್ಯ ಹೇಳುತ್ತಾ ಆಡಳಿತ ವಿರೋಧಿ ಅಲೆಯಿಂದ ಪಾರಾಗುವುದರ ಜತೆಗೆ ಪಕ್ಷ ತ್ಯಜಿಸಲು ಮುಂದಾಗಿರುವ ಶಾಸಕರನ್ನು ಉಳಿಸಿಕೊಳ್ಳಲು ಅನುಕೂಲವಾಗುತ್ತದೆ.

Advertisement

ಬಿಜೆಪಿಗೆ ಕಾಂಗ್ರೆಸ್‌, ಜೆಡಿಎಸ್‌ನಿಂದ ಬರುವ ಶಾಸಕರ ಸಂಖ್ಯೆ ಕಡಿಮೆಯಾಗಲಿದೆ. ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೇರುವ ಕನಸು ಈಡೇರಿಸಲು ಪ್ರಯತ್ನ ತೀವ್ರಗೊಳಿಸಬೇಕು.

ಜೆಡಿಎಸ್‌ನಲ್ಲಿ ಅಂತಹ ಬದಲಾವಣೆಗಳಾಗುವುದಿಲ್ಲ. ಬಿಜೆಪಿ ಕದ ತಟ್ಟುತ್ತಿರುವ ಶಾಸಕರು ಕಾಂಗ್ರೆಸ್‌ನತ್ತ ಮುಖ ಮಾಡಿದರೆ ಆಗ ಅವರನ್ನು ಉಳಿಸಿಕೊಳ್ಳಲು ಒದ್ದಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next