ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ, ದಂತಕಥೆ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಬಲಿಷ್ಠ ಶ್ರೇಷ್ಠ ಭಾರತದ ಕನಸು ಇನ್ನೂ ಕೂಡಾ ಅಪೂರ್ಣವಾಗಿ ಉಳಿದುಕೊಂಡಿದ್ದು, ಆ ನಿಟ್ಟಿನಲ್ಲಿ ನಾವು ನೇತಾಜಿ ಕನಸನ್ನು ನನಸು ಮಾಡಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಇದನ್ನೂ ಓದಿ:ಕಾರ್ಕಳ ಕ್ಷೇತ್ರದಲ್ಲೇ ಸ್ಪರ್ಧೆ: ಅಧಿಕೃತವಾಗಿ ಘೋಷಿಸಿದ ಪ್ರಮೋದ್ ಮುತಾಲಿಕ್
ಅವರು ಸೋಮವಾರ (ಜನವರಿ 23) ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 126ನೇ ಜನ್ಮ ಜಯಂತಿ ಅಂಗವಾಗಿ ಮಾತನಾಡುತ್ತ, ನಾವು ನೇತಾಜಿಯವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮವಹಿಸಬೇಕು ಎಂದು ತಿಳಿಸಿದರು.
ಭಾರತದ ನಾಯಕತ್ವಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ. ಈ ಮೂಲಕ ನಾವು ವಿಶ್ವಗುರುವಾಗಬೇಕು ಎಂದು ಭಾಗವತ್ ತಮ್ಮ ಭಾಷಣದಲ್ಲಿ ಹೇಳಿದರು. ಅವರು ಕೋಲ್ಕತಾದಲ್ಲಿ ಹಮ್ಮಿಕೊಂಡಿದ್ದ ನೇತಾಜಿ ಅವರ 126 ಜನ್ಮ ಜಯಂತಿಯ “ಪರಾಕ್ರಮ್ ದಿವಸ್” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ನೇತಾಜಿ ಅವರು ದೇಶಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ನೇತಾಜಿಯವರು ಬಹುತೇಕ ತಮ್ಮ ದೇಶಭ್ರಷ್ಟರಾಗಿಯೇ ಜೀವನ ಕಳೆಯುವಂತಾಗಿತ್ತು. ಅವರು ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದ ಮಹಾನ್ ಚೇತನ್ ಎಂದು ಭಾಗವತ್ ಹೇಳಿದರು.