Advertisement

ಜಪಾನ್‌ ಮಾಜಿ ಪಿಎಂ ಅಬೆ ಅಂತ್ಯಕ್ರಿಯೆಗೆ ರಾಜತಾಂತ್ರಿಕ ಸ್ಪರ್ಶ

12:29 AM Sep 25, 2022 | Team Udayavani |

ಟೋಕಿಯೊ: ಜಪಾನ್‌ನ ಮಾಜಿ ಪ್ರಧಾನಿ ದಿ| ಶಿಂಜೋ ಅಬೆ ಅವರ ಅಂತ್ಯಕ್ರಿಯೆ ಸೆ.27ರಂದು ಟೋಕಿಯೊದಲ್ಲಿ ನಡೆಯಲಿದೆ. ಚುನಾವಣ ಪ್ರಚಾರದಲ್ಲಿ ನಿರತರಾಗಿದ್ದ ಅವರನ್ನು ಕಿಡಿಗೇಡಿಯೊಬ್ಬ ಜು.8ರಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಅವರ ಅಂತ್ಯಕ್ರಿಯೆ ಬರೋಬ್ಬರಿ ಎರಡೂವರೆ ತಿಂಗಳ ಬಳಿಕ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನೂ ಕೈಗೊಳ್ಳಲಾಗುತ್ತಿದೆ.

Advertisement

ಅದಕ್ಕಾಗಿ ಜಪಾನ್‌ ಸರಕಾರ ಭಾರೀ ವ್ಯವಸ್ಥೆಗಳನ್ನು ಮಾಡುತ್ತಿದೆ. “ಫ‌ುನರಲ್‌ ಡಿಪ್ಲೊಮೆಸಿ’ (ಅಂತ್ಯಕ್ರಿಯೆ ರಾಜತಾಂತ್ರಿಕತೆ) ಎಂಬ ಹೆಸರಿನಲ್ಲಿ ಜಗತ್ತಿನ 217 ರಾಷ್ಟ್ರಗಳ 700 ಮಂದಿ ಸರಕಾರಿ ಮುಖ್ಯಸ್ಥರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಅದಕ್ಕೆ ಅನುಸಾರವಾಗಿ ಭಾರತ ಪ್ರಧಾನಿ ನರೇಂದ್ರ ಮೋದಿ, ಅಮೆ ರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥೋನಿ ಅಲ್ಬನೀಸ್‌ ಸಹಿತ ಅನೇಕ ಜಾಗತಿಕ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿ ಕಾರ್ಯಕ್ರಮ ಏನು?
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಸೆ.27ರಂದು ಟೋಕಿಯೊಗೆ ತೆರಳಲಿದ್ದಾರೆ. ಅಬೆ ಅವರ ಅಂತ್ಯಕ್ರಿಯೆಯ ಬಳಿಕ ಅವರ ಪತ್ನಿಯನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಜಗತ್ತಿನ ಇತರ ರಾಷ್ಟ್ರಗಳ ಮುಖ್ಯಸ್ಥರು ಕೂಡ ಅಬೆ ಅವರ ಪತ್ನಿಯವರನ್ನು ಭೇಟಿ ಮಾಡಲಿದ್ದಾರೆ.
ಇದಾದ ಬಳಿಕ ಜಪಾನ್‌ ಪ್ರಧಾನಿ ಫ‌ುÂಮಿಯೋ ಕಿಶಿದಾ ಅವರ ಜತೆಗೆ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ದಿ| ಶಿಂಜೋ ಅಬೆ ಅವರ ಜತೆಗೆ ಪ್ರಧಾನಿ ನರೇಂದ್ರ ಮೋದಿಯವರು ವೈಯಕ್ತಿಕ ಬಾಂಧವ್ಯವನ್ನು ಹೊಂದಿದ್ದರು. ಜಪಾನ್‌ ತಂತ್ರಜ್ಞಾನದಲ್ಲಿ ದೇಶದಲ್ಲಿ ಬುಲೆಟ್‌ ಟ್ರೈನ್‌ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಎರಡನೇ ಪ್ರಧಾನಿ
2ನೇ ಪ್ರಪಂಚ ಮಹಾಯುದ್ಧ ಕಳೆದು ಪ್ರಧಾನಿಯಾಗಿದ್ದ ಶಿಗೆರೂ ಯೋಶಿದಾ ನಿಧನದ‌ ಬಳಿಕ ಅವರಿಗೆ ಸರಕಾರಿ ಗೌರವದ ಅಂತ್ಯಕ್ರಿಯೆ ನಡೆಸಲಾಗಿದ್ದು. 1954ರ ಬಳಿಕ ಇದೇ ಮೊದಲ ಬಾರಿಗೆ ಜಪಾನ್‌ನಲ್ಲಿ ಅಬೆ ಅವರಿಗೆ ಸರಕಾರಿ ಗೌರವದ ಮೂಲಕ ಅಂತ್ಯ ಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.

94 ಕೋಟಿ ವೆಚ್ಚ‌
ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಗೆ 94 ಕೋಟಿ ರೂ. ವೆಚ್ಚ (1.7ಬಿಲಿಯನ್‌ ಯೆನ್‌) ಆಗುವ ಸಾಧ್ಯತೆ ಇದೆ. ಬ್ರಿಟನ್‌ನ ರಾಣಿ 2ನೇ ಎಲಿಜಬೆತ್‌ ಅವರ ಅಂತ್ಯಕ್ರಿಯೆಗೆ 74 ಕೋಟಿ ರೂ. ವೆಚ್ಚವಾಗಿದೆ. ಹೀಗಾಗಿ ಅದನ್ನು ಮೀರಿಸುವ ರೀತಿಯಲ್ಲಿ ವೆಚ್ಚ ಮಾಡುವುದಕ್ಕೆ ಜಪಾನ್‌ನ ನಾಗರಿಕರಿಂದಲೇ ಕಟು ಟೀಕೆ ವ್ಯಕ್ತವಾಗಿದೆ. ಆ ದೇಶದ ಕೆಲವೊಂದು ಸ್ಥಳೀಯ ಆಡಳಿತ ಸಂಸ್ಥೆಗಳು ಕೂಡ ಸರಕಾರದ ನಿರ್ಣಯವನ್ನು ಪ್ರಶ್ನೆ ಮಾಡಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next