Advertisement
ಶಾಲೆಗಳನ್ನು ಮರಳಿ ತೆರೆಯುವುದು ಈಗ ಹೆಚ್ಚಿನೆಲ್ಲ ದೇಶಗಳ ಮುಂದಿರುವ ಸವಾಲು. ಇದು ಅತಿ ಹೆಚ್ಚು ಚರ್ಚೆಗೀಡಾದ ವಿಚಾರವೂ ಹೌದು. ಬ್ರಿಟನ್‌ನಲ್ಲಿ ಶಾಲೆಗಳನ್ನು ತೆರೆದಿದ್ದರೂ ಹಾಜರಾತಿ ಬಹಳ ಕಡಿಮೆಯಿದೆ ಹಾಗೂ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ.
Related Articles
Advertisement
ಜನರು ಹೆಚ್ಚಿರುವ ಒಳಾಂಗಣಗಳಲ್ಲಿ ವೈರಸ್ ಹರಡುವ ಸಾಧ್ಯತೆ ಅಧಿಕ ಎನ್ನುವುದು ನಮಗೆ ಗೊತ್ತಿದೆ. ಅದರಲ್ಲೂ ಮಕ್ಕಳು ವೈರಸ್‌ಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚು ಇದೆ.ಅಲ್ಲದೆ ಅವರು ಸುಲಭ ವಾಹಕರೂ ಆಗಬಹುದು. ಮನೆಯಲ್ಲಿರುವ ಅಜ್ಜ-ಅಜ್ಜಿಗೆ, ಅಪ್ಪ-ಅಮ್ಮನಿಗೆ ಸುಲಭವಾಗಿ ವೈರಸ್ ತಗಲುವ ಸಾಧ್ಯತೆಯಿರುವುದರಿಂದ ಮಕ್ಕಳನ್ನು ಸುರಕ್ಷಿತ ಸ್ಥಳಗಳಲ್ಲಿಡುವುದೇ ಸರಿ ಎನ್ನುತ್ತಾರೆ ಆರ್ಮಿಟೇಜ್. ಒಂಟಿತನ ಅಪಾಯಕಾರಿ
ಮಕ್ಕಳಿಗೆ ಶೈಕ್ಷಣಿಕ ವರ್ಷ ನಷ್ಟವಾಗುವ ಭೀತಿ ಮಾತ್ರ ಅಲ್ಲ ಒಂಟಿತನವೂ ಅಪಾಯಕಾರಿಯಾಗಿ ಪರಿಣಮಿಸಬಹುದು. ಸೋಂಕಿತ ಮಕ್ಕಳನ್ನು ಕ್ವಾರಂಟೈನ್‌ಗೆ ಒಳಪಡಿಸುವುದರಿಂದ ಅವರು ಒಂಟಿಯಾಗುತ್ತಾರೆ. ಈ ಒಂಟಿತನ ಅವರ ಮಾನಸಿಕ ಆರೋಗ್ಯವನ್ನು ಏರುಪೇರು ಮಾಡಬಹುದು. ಸೋಂಕಿತರಲ್ಲದಿದ್ದರೂ ಮನೆಯಲ್ಲಿ ಮಕ್ಕಳನ್ನು ಏಕಾಂಗಿತನ ಕಾಡುವ ಸಾಧ್ಯತೆಯಿದೆ. ಇದು ಅವರ ಸೂಕ್ಷ್ಮ ಮನಸುಗಳ ಮೇಲೆ ಗಾಢವಾದ ಪರಿಣಾಮಗಳನ್ನು ಉಂಟು ಮಾಡಬಹುದು. ಸಾಮಾಜಿಕ ಮಿಲನ ಇಲ್ಲದಿರುವುದರಿಂದ ಮಕ್ಕಳು ಸಾಮಾಜಿಕ ಮೌಲ್ಯಗಳನ್ನು ಕಲಿಯುವ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಬಡಮಕ್ಕಳಿಗೆ ದೊಡ್ಡ ಹೊಡೆತ
ಕೋವಿಡ್ ವೈರಸ್ ಬಡ ಮಕ್ಕಳಿಗೆ ದೊಡ್ಡ ಹೊಡೆತವನ್ನೇ ನೀಡಿದೆ. ಲಾಕ್‌ಡೌನ್‌ದಿಂದಾಗಿ ಜಾಗತಿಕವಾಗಿ ಇರುವ ಅಸಮಾನತೆ ಇನ್ನಷ್ಟು ಹೆಚ್ಚಾಗಿದ್ದು, ಇದರ ಮೊದಲ ಬಲಿಪಶುಗಳು ಮಕ್ಕಳು. ಸಂಪನ್ಮೂಲದ ಕೊರತೆ ಈ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಲಿದೆ. ಕೋವಿಡ್ ಹಾವಳಿ ಮುಗಿದರೂ ಬಡ ಮಕ್ಕಳ ಬದುಕಿನ ಮೇಲೆ ಶಾಶ್ವತವಾದ ಬರೆ ಎಳೆಯಬಹುದು. ಸಾಮಾಜಿಕ ಬಿಕ್ಕಟ್ಟು
ಬೆಲ್ಜಿಯಂನ ಲಿಯುವೆನ್ ವಿವಿಯ ಸಮಾಜಶಾಸ್ತ್ರ ಉಪನ್ಯಾಸಕ ವಿಮ್ ವ್ಯಾನ್ ಲ್ಯಾಂಕರ್ ಸೇರಿದಂತೆ ಕೆಲವು ತಜ್ಞರು ಕೋವಿಡ್‌ನಿಂದ ಗಂಭೀರ ಸಾಮಾಜಿಕ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದಿಡೀ ತಲೆಮಾರನ್ನು ಕೋವಿಡ್ ಕಾಡಲಿದೆ. ಮಕ್ಕಳ ಬೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕುಂಠಿತಗೊಳಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಪ್ರೊ| ಲ್ಯಾಂಕರ್. 2007ರಲ್ಲಿ ಮೇರಿಲ್ಯಾಂಡ್‌ನಲ್ಲಿ ಕೆಲವು ತಿಂಗಳ ಮಟ್ಟಿಗೆ ಶಾಲೆಗಳನ್ನು ಮುಚ್ಚಿದಾಗ ಚಿಕ್ಕ ಮಕ್ಕಳ ಮಾನಸಿಕ ಸ್ಥಿತಿಯಲ್ಲಿ ವಿಪರೀತವಾದ ಬದಲಾವಣೆಗಳಾಗಿದ್ದವು. 0.57 ಮಕ್ಕಳು ನಿರೀಕ್ಷಿತ ಗ್ರೇಡ್ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದರು.ಹವಾಮಾನ ವೈಪರೀತ್ಯದಿಂದಾಗಿ ಪ್ರತಿ ತಿಂಗಳು ಸರಾಸರಿ 5 ದಿನಗಳ ಶಾಲೆ ನಷ್ಟವಾದಾಗ ತೇರ್ಗಡೆ ಪ್ರಮಾಣದಲ್ಲಿ ಶೇ. 3 ಕುಸಿತವಾಗಿರುವುದು ಕಂಡುಬಂದಿದೆ. ಈ ರೀತಿ ಕೋವಿಡ್ ಕಾಲದಲ್ಲೂ ನಿರೀಕ್ಷಿಸಬಹುದು ಎನ್ನುತ್ತಾರೆ ವಾಶಿಂಗ್ಟನ್ ಡಿಸಿಯ ಅಮೆರಿಕನ್ ವಿವಿಯ ಉಪನ್ಯಾಸಕ ಡೇವ್ ಮಾರ್ಕೊಟ್.