Advertisement

Hubli; ಬಣ ರಾಜಕೀಯ ಸೇರಿ ಎಲ್ಲವನ್ನೂ ಸರಿಪಡಿಸುತ್ತೇನೆ: ವಿಜಯೇಂದ್ರ

07:16 PM Feb 01, 2024 | Team Udayavani |

ಹುಬ್ಬಳ್ಳಿ: ಸಂವಿಧಾನದ 75ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಪ್ರತ್ಯೇಕ ರಾಷ್ಟ್ರದ ಕುರಿತು ಸಂಸದ ಡಿ.ಕೆ. ಸುರೇಶ ಹೇಳಿಕೆ ಖಂಡನೀಯ. ಜವಾಬ್ದಾರಿ ಅರಿತು ಅವರು ಮಾತನಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಸುರೇಶ್ ಹೇಳಿಕೆ ಖಂಡನೀಯ. ಒಬ್ಬ ಜನಪ್ರತಿನಿಧಿ ಈ ರೀತಿ ಮಾತನಾಡಬಾರದು. ಭಾರತದ ಅಖಂಡತೆ ಕಾಪಾಡುವುದಾಗಿ ಪ್ರಮಾಣ ವಚನ‌ ತೆಗೆದುಕೊಂಡಿರುತ್ತಾರೆ. ರಾಷ್ಟ್ರ ಇಬ್ಭಾಗದ ಮಾತುಗಳನ್ನಾಡುವುದು ಖಂಡನಾರ್ಹ ಎಂದರು.

ಯುಪಿಎ ಸರ್ಕಾರವಿದ್ದಾಗ 81 ಕೋಟಿ‌ ಹಣ ತೆರಿಗೆ ಹಣ ಬಂದಿದೆ. ನಮ್ಮ ಸರ್ಕಾರ ಬಂದಮೇಲೆ 2 ಲಕ್ಷ ಕೋಟಿ‌ ರೂ. ತೆರಿಗೆ ಹಣ ರಾಜ್ಯಕ್ಕೆ ಬಂದಿದೆ. ಆದರೂ ಅವರು ಅನುದಾನದಲ್ಲಿ ತಾರತಮ್ಯವಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ ಎಂದರು.

ಗ್ಯಾರಂಟಿ ರದ್ದು ಕುರಿತು ಕಾಂಗ್ರೆಸ್ ಶಾಸಕ ಬಾಲಕೃಷ್ಣ ವಿಚಾರವಾಗಿ ಪ್ರತಿಕ್ರಿಯಿಸುತ್ತ, ರಾಜ್ಯ ಆರ್ಥಿಕ‌ ಸಂಕಷ್ಟದಲ್ಲಿ‌ ಸಿಲುಕಿಕೊಂಡಿದೆ. ಹಣ ಕ್ರೊಢೀಕರಣ ಮಾಡುವುದಕ್ಕೆ‌ ಸಿಎಂ‌ ಪರದಾಡುತ್ತಿದ್ದಾರೆ. ಕೊಟ್ಟ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಈಡೇರಿಸಲು ಸರ್ಕಾರಕ್ಕೆ‌ ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಸಕರ ಮೂಲಕ‌ ಗ್ಯಾರಂಟಿ ರದ್ದಿನ ಬಗ್ಗೆ ಹೇಳಿಕೆ ಕೊಡಿಸುತ್ತಿದ್ದಾರೆ ಎಂದರು.

ಧಾರವಾಡ ಜಿಲ್ಲೆಯ ಬಿಜೆಪಿಯಲ್ಲಿ ಬಣ ರಾಜಕೀಯ ವಿಚಾರವಾಗಿ, ರಾಜ್ಯ ಅಧ್ಯಕ್ಷನಾಗಿ ನಾನು‌ ಎಲ್ಲವನ್ನೂ ಸರಿಪಡಿಸುತ್ತೇನೆ ಎಂದರು.

Advertisement

ಆಪರೇಶನ್ ಕಮಲ ಬಗ್ಗೆ ನಿಮಗೆ ಹೇಳಿ ಮಾಡಬೇಕಾ? ಕಾಂಗ್ರೆಸ್ ನಿಂದ ಇನ್ನೂ ಬಹಳ ಜನ ಬಿಜೆಪಿಗೆ ಬರುವವರಿದ್ದಾರೆ. ಲೋಕಸಭೆಯಲ್ಲಿ 28 ಸ್ಥಾನ ಗೆಲ್ಲುವುದೇ ನಮ್ಮ ಗುರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next